ರಿಯಲ್ ಎಸ್ಟೇಟ್ ಕ್ಷೇತ್ರ ಇದರಲ್ಲಿ ಪ್ರಮುಖ ವಲಯವಾಗಿದ್ದು, ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ದರವನ್ನು ಕಡಿತಗೊಳಿಸುವ ತೀರ್ಮಾನವನ್ನು ಜಿಎಸ್ಟಿ ಮಂಡಳಿ ಕೈಗೊಂಡಿದ್ದು, ಹೊಸ ಮನೆ ಖರಿದಿಸಬೇಕು ಎನ್ನುವವರ ಪಾಲಿಗೆ ಹರ್ಷ ತಂದಿದೆ.
ದೇಶದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹಲವು ವಲಯಗಳಲ್ಲಿ ಪರಿಣಾಮಗಳನ್ನು ಬೀರಿದೆ.
ರಿಯಲ್ ಎಸ್ಟೇಟ್ ಕ್ಷೇತ್ರ ಇದರಲ್ಲಿ ಪ್ರಮುಖ ವಲಯವಾಗಿದ್ದು, ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ದರವನ್ನು ಕಡಿತಗೊಳಿಸುವ ತೀರ್ಮಾನವನ್ನು ಜಿಎಸ್ಟಿ ಮಂಡಳಿ ಕೈಗೊಂಡಿದ್ದು, ಹೊಸ ಮನೆ ಖರಿದಿಸಬೇಕು ಎನ್ನುವವರ ಪಾಲಿಗೆ ಹರ್ಷ ತಂದಿದೆ.
ಎಪ್ರಿಲ್ ನಿಂದ ಹೊಸ ತೆರಿಗೆ ದರ
ಮುಂದಿನ ಏಪ್ರಿಲ್ ತಿಂಗಳಿನಿಂದ ಜಿಎಸ್ಟಿ ಹೊಸ ತೆರಿಗೆ ದರ ಅನುಷ್ಠಾನಕ್ಕೆ ಬರಲಿದೆ. ಇದು ಗೃಹ ನಿರ್ಮಾಣ ಕ್ಷೇತ್ರಕ್ಕೆ ಉತ್ತೇಜನ ನೀಡಲಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ಚೈತನ್ಯ ನೀಡಲಿದೆ ಎಂದು ಭಾವಿಸಲಾಗಿದೆ.
ಪ್ರತಿಯೊಬ್ಬರಿಗೂ ಮನೆ
2022ರ ಒಳಗೆ ದೇಶದ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎಂದು ಕೇಂದ್ರ ಸರ್ಕಾರ ೨೦೧೫ರಲ್ಲಿ ಪಿಎಂಅವಾಸ್ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿ ಜನಸಾಮಾನ್ಯರಿಗೆ, ಕಡುಬಡವರಿಗೆ ಅನುಕೂಲಕರವಾಗುವ ನೆಲೆಯಲ್ಲಿ ಜಿಎಸ್ಟಿ ದರ ಕಡಿತಗೊಳಿಸಿದ್ದು, ಕೈಗೆಟಕುವ ದರದಲ್ಲಿ ಗೃಹ ಸೌಲಭ್ಯ ಒದಗಿಸುವ ಗುರಿ ಹೊಂದಿದೆ.
ಜಿಎಸ್ಟಿ ಮಂಡಳಿ ಷರತ್ತುಗಳು
ಜಿಎಸ್ಟಿ ಮಂಡಳಿಯ ಹೊಸ ನಿಯಮದಂತೆ, ಕಡಿತಗೊಳಿಸಲಾದ ನೂತನ ತೆರಿಗೆ ದರದ ಪ್ರಯೋಜನ ಪಡೆಯಲು ವಸತಿ ನಿರ್ಮಾಣ ಸಂಸ್ಥೆಗಳು ಜಿಎಸ್ಟಿ ಮಂಡಳಿ ನಿಗದಿಪಡಿಸಿರುವ ಅನುಪಾತದಲ್ಲಷ್ಟೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನ್ನು ಮುಂದಿನ ದಿನಗಳಲ್ಲಿ ಬಳಸಬಹುದು. ಜೊತೆಗೆ ವಸ್ತುಗಳ ಖರೀದಿ ಮೇಲೆ ಪಾವತಿಸುವ ತೆರಿಗೆಯನ್ನು ಸಂಪೂರ್ಣವಾಗಿ ಬಳಸುವಂತಿಲ್ಲ.
- ಸ್ವಂತ ಮನೆ ಖರೀದಿಸಲು ಬಯಸುವವರಿಗೆ ಶೇ. ೮ ಅಥವಾ ಶೇ. ೧೨ರ ಬದಲಾಗಿ ಶೇ. ೧ ಅಥವಾ ಶೇ. ೫ರಷ್ಟು ದರ ಅನ್ವಯವಾಗಲಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?


Click it and Unblock the Notifications