For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ.. ನಿಮ್ಮ ಜೇಬಿಗೆ ಎಷ್ಟು ಕತ್ತರಿ ಬೀಳಲಿದೆ ಗೊತ್ತೆ..?

ಒಂದೇಡೆ ಲೋಕಸಭಾ ಚುನಾವಣೆ ಪ್ರಚಾರ ತಾರಕಕ್ಕೆ ಏರಿದರೆ ಇನ್ನೊಂದೆಡೆ ಅಡುಗೆ ಅನಿಲ (ಎಲ್ಪಿಜಿ) ಬೆಲೆ ತಾರಕಕ್ಕೆರಿದೆ! ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಸಿಲಿಂಡರ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದ್ದು, ಅಡುಗೆ ಅನಿಲ ಬೆಲೆಯನ್ನು ಏರಿಕೆ.

|

ಒಂದೇಡೆ ಲೋಕಸಭಾ ಚುನಾವಣೆ ಪ್ರಚಾರ ತಾರಕಕ್ಕೆ ಏರಿದರೆ ಇನ್ನೊಂದೆಡೆ ಅಡುಗೆ ಅನಿಲ (ಎಲ್ಪಿಜಿ) ಬೆಲೆ ತಾರಕಕ್ಕೆರಿದೆ!

ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಸಿಲಿಂಡರ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದ್ದು, ಅಡುಗೆ ಅನಿಲ ಬೆಲೆಯನ್ನು ಏರಿಕೆ ಮಾಡಿದೆ. ಎಲ್ಪಿಜಿ ಹೊಸ ದರಗಳು ಏಪ್ರಿಲ್ ಒಂದರಿಂದ ಅನ್ವಯವಾಗಲಿವೆ. ಮಾರ್ಚ್ ತಿಂಗಳಿನಿಂದ ಎಲ್ಪಿಜಿ ನೆಲೆ ಏರಿಕೆಯಾಗುತ್ತಿದ್ದು, ಅದರ ಹಿಂದಿನ ಕೆಲ ತಿಂಗಳು ಸತತವಾಗಿ ಇಳಿಕೆ ಕಂಡಿತ್ತು. ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?

ಸಬ್ಸಿಡಿ ರಹಿತ ಸಿಲಿಂಡರ್

ಸಬ್ಸಿಡಿ ರಹಿತ ಸಿಲಿಂಡರ್

14.2 ಕೆ.ಜಿ. ತೂಕದ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ರೂ. 5 ಏರಿಕೆಯಾಗಿದೆ. ಇದರ ಪರಿಣಾಮ ಈಗ ಸಿಲಿಂಡರ್ ಬೆಲೆ ನವದೆಹಲಿಯಲ್ಲಿ ರೂ. 706.50 ರೂ. ತಲುಪಿದೆ. ಮುಂಬೈನಲ್ಲಿ ಸಿಲಿಂಡರ್ ಬೆಲೆ ರೂ. 678.50, ಚೆನ್ನೈನಲ್ಲಿ ರೂ. 722 ಹಾಗೂ ಕೋಲ್ಕತ್ತಾದಲ್ಲಿ ರೂ. 732.50ಕ್ಕೆ ತಲುಪಿದೆ.

ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ

ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ

ಸಬ್ಸಿಡಿ ಇರುವ ಸಿಲಿಂಡರ್ ಗಳ ಬೆಲೆಯಲ್ಲಿ 25 ಪೈಸೆ ಏರಿಕೆ ಕಂಡಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ ನವದೆಹಲಿಯಲ್ಲಿ ರೂ. 495.86, ಕೊಲ್ಕತ್ತಾದಲ್ಲಿ ರೂ. 499, ಮುಂಬೈನಲ್ಲಿ ರೂ.493.57, ಚೆನ್ನೈನಲ್ಲಿ ರೂ. 483.74 ರಷ್ಟಿದೆ. ಕಳೆದ ತಿಂಗಳಲ್ಲಿ ಸಬ್ಸಿಡಿ ಇರುವ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 2.08 ಏರಿಕೆ ಮಾಡಲಾಗಿತ್ತು.

ಬೆಲೆ ಏರಿಕೆ/ಪರಿಷ್ಕರಣೆ

ಬೆಲೆ ಏರಿಕೆ/ಪರಿಷ್ಕರಣೆ

ಪ್ರಸ್ತುತ ಎಲ್ಪಿಜಿ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ಚಿಲ್ಲರೆ ವ್ಯಾಪಾರಿಗಳು ಪರಿಶೀಲನೆ ನಡೆಸಿದರು. ಅಂತರರಾಷ್ಟ್ರೀಯ ಕಚ್ಚಾ ತೈಲ ಮತ್ತು ರೂಪಾಯಿ-ಡಾಲರ್ ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ತೈಲ ಬೆಲೆ ಪರಿಷ್ಕರಿಸಲಾಗುತ್ತದೆ. ಇಂಧನ ಮಾರುಕಟ್ಟೆಯ ತೆರಿಗೆ ದರ ಹೆಚ್ಚಳ ಅಡುಗೆ ಅನಿಲದ ಮೇಲೆ ಪರಿಣಾಮ ಬೀರಿದೆ.

ವರ್ಷಕ್ಕೆ 12 ಸಿಲಿಂಡರ್

ವರ್ಷಕ್ಕೆ 12 ಸಿಲಿಂಡರ್

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಉಜ್ವಲ ಹಾಗು ಅನಿಲ ಭಾಗ್ಯ ಯೋಜನೆ

ಉಜ್ವಲ ಹಾಗು ಅನಿಲ ಭಾಗ್ಯ ಯೋಜನೆ

ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ. ಕೇಂದ್ರದ ಉಜ್ವಯ ಯೋಜನೆಯಂತೆ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ (ಗ್ಯಾಸ್) ನೀಡುವ ಉದ್ದೇಶ ಹೊಂದಿದೆ. ಅದೇ ರಾಜ್ಯ ಸರ್ಕಾರ ಕೂಡ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಮೂಲಕ ಸೇವೆ ಒದಗಿಸಲಾಗುತ್ತಿದೆ.

Read more about: lpg money
English summary

LPG cylinder price hike: how much you have to pay?

LPG prices were hiked second time in this calendar year on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X