For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?

ನಮ್ಮಲ್ಲಿ ಹೆಚ್ಚಿನ ಕುಟುಂಬಗಳು ಎಲ್ಪಿಜಿ ಗ್ಯಾಸ್ ಸಂಪರ್ಕ ಹೊಂದಿದ್ದು, ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸೇವೆ ಪಡೆಯುತ್ತಿದ್ದಾರೆ. ಸಬ್ಸಿಡಿ ಸಿಲಿಂಡರ್ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.

|

ನಮ್ಮಲ್ಲಿ ಹೆಚ್ಚಿನ ಕುಟುಂಬಗಳು ಎಲ್ಪಿಜಿ ಗ್ಯಾಸ್ ಸಂಪರ್ಕ ಹೊಂದಿದ್ದು, ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸೇವೆ ಪಡೆಯುತ್ತಿದ್ದಾರೆ. ಸಬ್ಸಿಡಿ ಸಿಲಿಂಡರ್ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಆದರೆ ಕೆಲವೊಮ್ಮೆ ಬ್ಯಾಂಕ್ ಸಿಬ್ಬಂದಿಗಳ ತಪ್ಪಿನಿಂದಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ. ಸಬ್ಸಿಡಿ ಹಣ ಖಾತೆಗೆ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುವುದು ತುಂಬಾ ಸುಲಭ.

 

ಚೆಕ್ ಮಾಡೋದು ಹೇಗೆ?

ಚೆಕ್ ಮಾಡೋದು ಹೇಗೆ?

ನೀವು ಮನೆಯಲ್ಲಿಯೇ ಕುಳಿತು ಎಲ್ಪಿಜಿ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತಿದೆಯೆ ಎಂಬುದನ್ನು ಚೆಕ್ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿ ಮೊದಲು www.mylpg.in ಟೈಪ್ ಮಾಡಬೇಕು. ಅಲ್ಲಿ ಎಲ್ಲಾ ಗ್ಯಾಸ್ ಕಂಪನಿಗಳ ಹೆಸರರುಗಳ ಪಟ್ಟಿ ಇರುತ್ತದೆ. ನೀವು ಯಾವ ಗ್ಯಾಸ್ ಕಂಪನಿಯಲ್ಲಿ ಗ್ಯಾಸ್ ಖರೀದಿ ಮಾಡುತ್ತಿರೋ ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಎಲ್ಪಿಜಿ ಐಡಿ ಹಾಗೂ ನೋಂದಾಯಿತ ಮೊಬೈಲ್ ನಂಬರ್ ಲಭ್ಯವಾಗಲಿದೆ. ಇದರ ಜೊತೆಗೆ ಹಣಕಾಸು ವರ್ಷ 2017-2018 ಎಂದು ಟೈಪ್ ಮಾಡಬೇಕು. ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ?

ದೂರು ನೀಡಿ

ದೂರು ನೀಡಿ

ನಿಮ್ಮ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆಯಾಗಿರುವ ಸಬ್ಸಿಡಿ ಮಾಹಿತಿ ಸಿಗಲಿದೆ. ಯಾವಾಗ ಮತ್ತು ಎಷ್ಟು ಸಬ್ಸಿಡಿ ಹಣ ನಿಮ್ಮ ಖಾತೆಗೆ ಸೇರಿದೆ ಎಂಬುದರ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ಸಬ್ಸಿಡಿ ಹಣ ಖಾತೆಗೆ ಬಂದಿಲ್ಲದ್ದರೆ 18002333555 ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು.

ಡೆಲಿವರಿ ಶುಲ್ಕ ರೂ. 19.50
 

ಡೆಲಿವರಿ ಶುಲ್ಕ ರೂ. 19.50

ಕೆಲವೊಮ್ಮೆ ಗ್ರಾಹಕರೇ ಗ್ಯಾಸ್ ಏಜೆನ್ಸಿಗೆ ಹೋಗಿ ಸಿಲಿಂಡರ್ ತರುತ್ತಾರೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಏಜೆನ್ಸಿಯಿಂದ ಹಣ ಪಡೆಯಬಹುದಾಗಿದೆ! ಗ್ಯಾಸ್ ಏಜೆನ್ಸಿಯವರು ಮನೆಗೆ ಸಿಲಿಂಡರ್ ಪೂರೈಸುತ್ತಾರೆ. ಇದಕ್ಕಾಗಿ ಸೇವಾಶುಲ್ಕ ರೂ. 19 ರೂಪಾಯಿ 50 ಪೈಸೆ ಪಡೆಯುತ್ತಾರೆ. ಅನೇಕ ಸಂದರ್ಭಗಳಲ್ಲಿ ನೀವು ಸಿಲಿಂಡರ್ ಗೋಡೌನ್ ನಿಂದ ತಂದರೆ ಈ ಹಣವನ್ನು ವಾಪಸ್ ಕೇಳಬಹುದಾಗಿದೆ. ಡೆಲಿವರಿ ಶುಲ್ಕವಾಗಿ ಕಂಪನಿ ಪಡೆಯುವ ಹಣವನ್ನು ಕಂಪನಿ ವಾಪಸ್ ನೀಡದೆ ಹೋದರೆ ನೀವು ದೂರು ನೀಡಬಹುದು.

ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಪಡೆಯುವಿಕೆ

ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಪಡೆಯುವಿಕೆ

ಭಾರತದಲ್ಲಿ ಈಗ ಬಹುತೇಕ ಎಲ್ಲ ಇಂಧನ ಮಾರಾಟ ಕಂಪನಿಗಳು ಆನ್ಲೈನ್ ಮೂಲಕ ಹೊಸ ಎಲ್ಪಿಜಿ ಸಂಪರ್ಕ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿವೆ. ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಬುಕ್ ಮಾಡಲು ವಿವಿಧ ಇಂಧನ ಮಾರಾಟ ಕಂಪನಿಗಳ ವೆಬ್ಸೈಟ್ ಲಿಂಕ್‌ಗಳು ಈ ಕೆಳಗಿನಂತಿವೆ:
ಇಂಡೇನ್: http://indane.co.in/new_connection.php
ಎಚ್‌ಪಿ ಗ್ಯಾಸ್: http://dcms.hpcl.co.in/consumerportal/logging/securelogin.aspx
ಭಾರತ ಗ್ಯಾಸ್: http://www.ebharatgas.com/pages/Customer_Console/New_Domestic_Connection

ಎಲ್ಪಿಜಿ ಕನೆಕ್ಷನ್ ಶುಲ್ಕಗಳು

ಎಲ್ಪಿಜಿ ಕನೆಕ್ಷನ್ ಶುಲ್ಕಗಳು

ಒಂದು ಸಿಲಿಂಡರ್‌ನೊಂದಿಗೆ ಹೊಸ ಕನೆಕ್ಷನ್ ಶುಲ್ಕಗಳು ಹೀಗಿವೆ:
ಖಾಲಿ ಸಿಲಿಂಡರ್ ಶುಲ್ಕ: 1450 ರೂ. (ಮರುಪಾವತಿಯಾಗುವಂಥದ್ದು)
ಒಂದು ತುಂಬಿದ ಸಿಲಿಂಡರ್ ಬೆಲೆ (14.2 ಕೆಜಿ) : ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ರೆಗ್ಯುಲೇಟರ್ ಶುಲ್ಕ: ರೂ.150 (ಮರುಪಾವತಿಯಾಗುವಂಥದ್ದು)
ಗ್ಯಾಸ್ ಪಾಸಬುಕ್ ಶುಲ್ಕ : ರೂ. 25
ದಾಖಲಾತಿ ಶುಲ್ಕಗಳು: ಕಂಪನಿಯಿಂದ ಕಂಪನಿಗೆ ವ್ಯತ್ಯಾಸವಾಗುತ್ತವೆ. ಗ್ಯಾಸ್ ಒಲೆಯ ಬೆಲೆ (ಐಚ್ಛಿಕ) : ಗ್ಯಾಸ್ ಒಲೆಯ ಮಾಡೆಲ್ ಅನ್ನು ಆಧರಿಸಿರುತ್ತದೆ.

ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು

ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು

(ಇವುಗಳಲ್ಲಿ ಯಾವುದಾದರೂ ಒಂದು)
ವೋಟರ್ ಐಡಿ ಕಾರ್ಡ್
ಪಾಸ್ಪೋರ್ಟ
ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್
ಸರಕಾರದಿಂದ ನೀಡಲಾದ ಭಾವಚಿತ್ರ ಸಹಿತ ಗುರುತಿನ ಪತ್ರ ಅಥವಾ ಆಧಾರ ಸಂಖ್ಯೆ. ಕೆವೈಸಿ ನಿಯಮಾವಳಿಗಳ ಪ್ರಕಾರ ಗುರುತು ಸಾಬೀತು ಪಡಿಸುವ ದಾಖಲೆ, ವಿಳಾಸದ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಮನೆಯಲ್ಲಿ ಈಗಾಗಲೇ ಎಲ್ಪಿಜಿ/ ಕೊಳವೆ ಮಾರ್ಗದ ಎಲ್ಪಿಜಿ ಕನೆಕ್ಷನ್ ಇಲ್ಲ ಎಂಬುದಾಗಿ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ದೇಶದ ಪ್ರಮುಖ ಎಲ್ಪಿಜಿ ವಿತರಣಾ ಕಂಪನಿಗಳು

ದೇಶದ ಪ್ರಮುಖ ಎಲ್ಪಿಜಿ ವಿತರಣಾ ಕಂಪನಿಗಳು

ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಭಾರತ ಗ್ಯಾಸ್)
ಹಿಂದೂಸ್ತಾನ ಪೆಟ್ರೊಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿ ಗ್ಯಾಸ್)
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಇಂಡೇನ್)
ನಿಯಮಾವಳಿಗಳ ಪ್ರಕಾರ ಒಂದು ಕುಟುಂಬ ಒಂದೇ ಕನೆಕ್ಷನ್ ಪಡೆಯಲು ಅವಕಾಶವಿದೆ. ಕನೆಕ್ಷನ್ ಪಡೆಯುವಾಗ ವಿತರಕರಿಂದ ಗ್ಯಾಸ್ ಪಾಸಬುಕ್ ಪಡೆಯಲು ಮರೆಯಬೇಡಿ. ಏಜೆನ್ಸಿಯು ನಿಮ್ಮ ಸಿಲಿಂಡರ್ ಬುಕಿಂಗ್‌ಗಳ ದಾಖಲೆಯನ್ನು ಇಟ್ಟಿರುತ್ತದೆ. ಏಜೆನ್ಸಿ ಕಡೆಯಿಂದ ಗ್ಯಾಸ್ ಒಲೆ ಖರೀದಿಸುವುದು ಕಡ್ಡಾಯವಲ್ಲ. ಗ್ಯಾಸ್ ಒಲೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಗ್ರಾಹಕರು ಸ್ವತಂತ್ರರಾಗಿದ್ದಾರೆ.

English summary

How to Check for LPG Subsidy status Online?

The central government has initiated the facility of transferring the subsidy amount directly to the bank account of the beneficiary of the PAHAL DBTL scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X