ಭಾರತಿಯ ರಿಸರ್ವ್ ಬ್ಯಾಂಕ್ 2019 ರಲ್ಲಿ ಎರಡನೇ ಬಾರಿ ಆರ್ಬಿಐ ರೆಪೊ ದರ ಕಡಿತ ಮಾಡಿದಂತಾಗಿದ್ದು, ಮನೆ, ವಾಹನ ಮತ್ತು ಕೈಗಾರಿಕಾ ಸಾಲಗಳಿಗೆ ಇಎಂಐಗಳನ್ನು ಪಾವತಿಸುವವರಿಗೆ ಪರಿಹಾರ ಒದಗಿಸಲಿದೆ
ಭಾರತಿಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆಗೊಳಿಸಿದ್ದು, ಶೇ. ೦.25 ರಷ್ಟು ಇಳಿಸಿದೆ. 2019 ರಲ್ಲಿ ಎರಡನೇ ಬಾರಿ ಆರ್ಬಿಐ ರೆಪೊ ದರ ಕಡಿತ ಮಾಡಿದಂತಾಗಿದ್ದು, ಮನೆ, ವಾಹನ ಮತ್ತು ಕೈಗಾರಿಕಾ ಸಾಲಗಳಿಗೆ ಇಎಂಐಗಳನ್ನು ಪಾವತಿಸುವವರಿಗೆ ಇದು ಪರಿಹಾರ ಒದಗಿಸಲಿದೆ.
ಆದರೆ ಈ ಕಡಿತವು ಮೋದಿ ಸರಕಾರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಭರವಸೆಯಿಟ್ಟುಕೊಳ್ಳಲು ಕಾರವಾಗಬಹುದೆ? ಆರ್ಬಿಐ ಹಣಕಾಸು ನೀತಿ ಪ್ರಕಟಣೆ ಮತ್ತು ಲೋಕಸಭಾ ಚುನಾವಣೆ ತೀರ್ಪಿನ ನಡುವೆ ಸಂಬಂಧವಿದೆಯೇ?
ರೆಪೋ ದರ ಮತ್ತು ಚುನಾವಣೆಯಲ್ಲಿ ಗೆಲ್ಲುವವರ ನಡುವಿನ ಸಂಬಂಧವು ನೇರವಲ್ಲ. ಆದರೆ ಕಳೆದ ಚುನಾವಣೆಯ ಫಲಿತಾಂಶಗಳು ಮತ್ತು ಆರ್ಬಿಐ ನೀತಿ ಪರಿಶೀಲನೆಯು ರಾಜಕೀಯದ ಮೇಲೆ ಹೇಗೆ ಪರಿಣಾಮ ಬೀರಿವೆಯೆಂಬುದನ್ನು ಸೂಚಿಸುತ್ತದೆ.
ಮೋದಿ ಸರಕಾರಕ್ಕೆ ನೆಮ್ಮದಿ!
2019-20ರ ಆರ್ಥಿಕ ವರ್ಷದಲ್ಲಿ ಇದು ಆರ್ಬಿಐ ಗವರ್ನರ್ ಅಧ್ಯಕ್ಷತೆಯಲ್ಲಿ ಮತ್ತು ಲೋಕಸಭಾ ಚುನಾವಣೆಗೆ ಮುಂಚಿನ ಹಣಕಾಸು ನೀತಿ ಸಮಿತಿಯ ಮೊದಲ ಸಭೆಯಾಗಿದೆ.
2019 ರ ಜನವರಿಯಿಂದ ಎರಡನೇ ನೇರ ಕಡಿತಕ್ಕೆ ಒಳಗಾದ ಕಾರಣದಿಂದಾಗಿ ನಿಧಾನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ ಎಂದು ನಂಬಲಾಗಿದೆ. ಇದರಿಂದ ಮೋದಿ ಸರಕಾರಕ್ಕೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ!
ಆರು ಬಾರಿ ಪರಿಶೀಲನೆ
ಹಣಕಾಸು ನೀತಿ ಸಮಿತಿಯು ಒಂದು ಹಣಕಾಸು ವರ್ಷದಲ್ಲಿ ಹಣಕಾಸು ನೀತಿಯನ್ನು ಆರು ಬಾರಿ ಪರಿಶೀಲಿಸುತ್ತದೆ. ಏಪ್ರಿಲ್, ಜೂನ್, ಆಗಸ್ಟ್, ಅಕ್ಟೋಬರ್, ಡಿಸೆಂಬರ್ ಮತ್ತು ಫೆಬ್ರವರಿ. ಪ್ರತಿ ವಿಮರ್ಶೆ ಒಂದು ಉತ್ಸಾಹಪೂರ್ಣವಾದ ಘಟನೆಯಾಗಿದ್ದರೂ ಸಹ, ಏಪ್ರಿಲ್ ನಲ್ಲಿ ನಡೆಯುವ ಹಣಕಾಸು ನೀತಿ ವಿಮರ್ಶೆ ಭಾರೀ ಪ್ರಭಾವ ಬಿರುವ ಟ್ರೆಂಡ್ ಸೆಟ್ಟರ್ ಎಂದು ಪರಿಗಣಿಸಲಾಗುತ್ತದೆ.
ಆರ್ಬಿಐ ನೀತಿ-ಮತದಾನ ಫಲಿತಾಂಶಕ್ಕೆ ಸಂಬಂಧ?
ಹಿಂದಿನ ಅಂಕಿಅಂಶದ ಪ್ರಕಾರ ಆರ್ಬಿಐ ನೀತಿ ಮತ್ತು ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧವಿದೆ. 2014 ರಲ್ಲಿ ಲೋಕಸಭಾ ಚುನಾವಣೆ ಏಪ್ರಿಲ್ 7 ಮತ್ತು ಮೇ 12 ರ ನಡುವೆ ನಡೆಯಿತು. ಇದರ ಫಲಿತಾಂಶವನ್ನು ಮೇ 16 ರಂದು ಘೋಷಿಸಲಾಯಿತು. 2014 ರ ಏಪ್ರಿಲ್ 1 ರಂದು ಮೊದಲ ಆರ್ಬಿಐ ಹಣಕಾಸು ನೀತಿಯ ಪರಿಶೀಲನೆ ಹೊರಬಂದಿತು. ಆಗಿನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇ.8 ಉಳಿಸಿದರು. ಇಂದಿನ ರೆಪೊ ದರ ಶೇ. 6 ಕ್ಕೆ ಹೋಲಿಸಿದರೆ ಹೆಚ್ಚಿನ ದರ ಇತ್ತು. ಅವರು ನಿಗದಿತ ಬ್ಯಾಂಕುಗಳಿಗೆ ಶೇ. 4 ರಷ್ಟು ನಗದು ಮೀಸಲು ಅನುಪಾತವನ್ನು (ಸಿಆರ್ಆರ್) ಬದಲಿಸಲಿಲ್ಲ.
2009 ರ ಚುನಾವಣೆ
2014 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸೋಲು
2009 ರಲ್ಲಿ ಲೋಕಸಭೆ ಚುನಾವಣೆ ಏಪ್ರಿಲ್ 16 ಮತ್ತು ಮೇ 13 ರ ನಡುವೆ ನಡೆಯಿತು. 2009 ರ ಮೊದಲ ಆರ್ಬಿಐ ರಿವ್ಯೂ ಪಾಲಿಸಿ ಏಪ್ರಿಲ್ 21 ರಂದು ಘೋಷಿಸಲ್ಪಟ್ಟಿತ್ತು. ಆಗಿದ್ದ ಆರ್ಬಿಐ ಗವರ್ನರ್ ಡಿ. ಸುಬ್ಬರಾವ್ ರೆಪೋ ದರವನ್ನು 25 ಬಿಪಿಎಸ್ ಕಡಿತಗೊಳಿಸಿ ಶೇ. 5 ರಿಂದ ಶೇ. 4.5 ಕ್ಕೆ ಇಳಿಸಿದರು. ಆದಾಗ್ಯೂ, ಸಿಆರ್ಆರ್ ಅನ್ನು ಶೇ. 5ರಷ್ಟು ಬದಲಾಗದೆ ಇಡಲಾಗಿತ್ತು. ಯುಪಿಎ 2009 ರ ಚುನಾವಣೆಯಲ್ಲಿ ಗೆದ್ದಿತು ಮತ್ತು ಮನಮೋಹನ್ ಸಿಂಗ್ ಸರಕಾರ ಬೃಹತ್ ಕೃಷಿ ಸಾಲ ಮನ್ನಾ ಪ್ರಕಟಿಸಿತು.
2004 ರಲ್ಲೂ ವಾಜಪೇಯಿ ಸರ್ಕಾರಕ್ಕೆ ಎಪೆಕ್ಟ್
ಆರ್ಬಿಐ ಮೊದಲ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರ ಕಡಿತಗೊಳಿಸದಿದ್ದರೆ, ಸರ್ಕಾರವು ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತ. ಇದನ್ನು 2004 ರಲ್ಲಿಯೂ ಕಾಣಬಹುದಾಗಿದೆ. 2004ರಲ್ಲಿ ಏಪ್ರಿಲ್ 20-ಮೇ 10 ರ ನಡುವೆ ಚುನಾವಣೆಗಳು ನಡೆದವು. ಮೊದಲ ಆರ್ಬಿಐ ರಿವ್ಯೂ ಪಾಲಿಸಿ ಮೇ 10 ರಂದು ಘೋಷಿಸಲ್ಪಟ್ಟಿದೆ. ಆರ್ಬಿಐ ಗವರ್ನರ್ ವೈ.ವಿ. ರೆಡ್ಡಿ ಅವರ ನೀತಿ ಬ್ಯಾಂಕ್ ದರವನ್ನು ಶೇ. 6 ರಷ್ಟು ಮತ್ತು ರೆಪೊ ದರ ಶೇ. 4.5ರಷ್ಟು ಶೂನ್ಯ ಬದಲಾವಣೆಯಲ್ಲಿ ಇರಿಸಿತು. ಆಗ ವಾಜಪೇಯಿ ಸರಕಾರವು ಚುನಾವಣೆಯಲ್ಲಿ ಸೋಲನುಭವಿಸಿತು. 'ಭಾರತ ಪ್ರಕಾಶಿಸುತ್ತಿದೆ' ಇದರ ಧ್ಯೇಯ ವಾಕ್ಯವಾಗಿತ್ತು.
ದರ ಕಡಿತ ಮತದಾನದ ಮೇಲೆ ಪರಿಣಾಮ
ಆರ್ಬಿಐ ಗವರ್ನರ್ ಘೋಷಿಸಸುವ ದರ ಕಡಿತದ ಪರಿಣಾಮವು ಮತದಾನದ ಮೇಲೆ ಕನಿಷ್ಟ ಪರಿಣಾಮ ಬೀರುತ್ತದೆ. ಸಾಲಗಾರರಿಗೆ ದರ ಕಡಿತದ ಸಂಪೂರ್ಣ ಪ್ರಯೋಜನ ರವಾನಿಸಲು ಬ್ಯಾಂಕುಗಳಿಗೆ ಇಷ್ಟವಿರಲಿಲ್ಲ. ಆದರೂ, ಕಳೆದ ಮೂರು ಲೋಕಸಭೆ ಚುನಾವಣೆ ಫಲಿತಾಂಶಗಳು ಆರ್ಬಿಐ ದರ ಕಡಿತ ಮಾಡದೇ ಇರುವುದರಿಂದ ಚುನಾವಣೆಯಲ್ಲಿ ಸೋತವು ಎಂದು ತೋರಿಸುತ್ತದೆ!
ಶಕ್ತಿಕಾಂತ ದಾಸ್ ನೀತಿ
ಆರ್ಬಿಐ ಹಣಕಾಸು ನೀತಿ ಪ್ರಕಟಿಸಿದಾಗ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಬ್ಯಾಂಕುಗಳು ಸಾಲ ದರವನ್ನು ಕಡಿಮೆ ಮಾಡಿವೆ. ಆದರೆ ಪ್ರಸರಣದಲ್ಲಿ ಹೆಚ್ಚಿನ ಅಗತ್ಯಗಳನ್ನು ಪೂರೈಸಬೇಕಾಗಿದೆ ಎಂದಿದ್ದಾರೆ. ಹಣಕಾಸು ನೀತಿ ಸಮಿತಿಯು ಫೆಬ್ರವರಿಯಲ್ಲಿ 25 ಬಿಪಿಎಸ್ ಕಡಿತದ ಮೂಲಕ ಶೇ. 6.25 ಕಡಿತ ಮಾಡಿತು. ಶಕ್ತಿಕಾಂತ ದಾಸ್ ದರ ಕಡಿತ ಪ್ರಯೋಜನ ರವಾನಿಸುವ ಅಗತ್ಯವನ್ನು ಒತ್ತಾಯಿಸಲು ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಬೇಕಾಯಿತು. ಕೆಲವು ಬ್ಯಾಂಕುಗಳು ಸಾಲ ದರವನ್ನು ಶೇ. 0.10 ವರೆಗೆ ದರ ಕಡಿತ ಮಾಡಿದ್ದವು.
ಸಾಲಗಾರರಿಗೆ ಲಾಭಾಂಶ
ಸಾಲಗಾರರು ೨೦ ವರ್ಷಗಳ ಮರುಪಾವತಿಯ ಅವಧಿಗೆ ರೂ.೩೦ ಲಕ್ಷ ಸಾಲವನ್ನು ಶೇ. ೮.೪೦ ಬಡ್ಡಿದರದಲಿ ಪಡೆದರೆ, ಮಾಸಿಕ ಇಎಂಐ ಸುಮಾರು ರೂ. 25,845 ಆಗಿರುತ್ತದೆ. 25 ಬಿಪಿಎಸ್ ಕಡಿತದೊಂದಿಗೆ, ಬ್ಯಾಂಕುಗಳು ಮೇಲಿನ ಮರುಪಾವತಿ ಅವಧಿ ಮತ್ತು ಸಾಲಕ್ಕೆ ಸಾಲಗಾರರಿಗೆ ಸಂಪೂರ್ಣ ಪ್ರಯೋಜನವನ್ನು ಒದಗಿಸಿದರೆ ಮಾಸಿಕ EMI ರೂ. 25,374 ಕ್ಕೆ ಇಳಿಯಬಹುದು. ಲೋಕಸಭಾ ಚುನಾವಣೆ ಎಫೆಕ್ಟ್! ಜನ್ ಧನ್ ಖಾತೆಗಳಿಗೆ ತಲಾ 10 ಸಾವಿರ ಜಮಾ..!
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

Siddaramaiah-Narendra Modi: ಮಧ್ಯಪ್ರಾಚ್ಯ ಸಂಘರ್ಷ; ಕನ್ನಡಿಗರನ್ನು ರಕ್ಷಿಸುವಂತೆ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ



Click it and Unblock the Notifications