ಬೆಂಗಳೂರು, ಏಪ್ರಿಲ್ 5: ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು 13 ಬಿಲಿಯನ್ ಯುಎಸ್ ಡಾಲರ್ ಗಳ ಸಂಸ್ಥೆಯಾಗಿರುವ ಜೆಎಸ್‍ಡಬ್ಲ್ಯೂ ಗ್ರೂಪ್ ಪೀಠೋಪಕರಣ ಕ್ಷೇತ್ರಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪೀಠೋಪಕರಣ ಉದ್ಯಮದ ಮಾರುಕಟ್ಟೆಗೆ ತನ್ನ ಬ್ರ್ಯಾಂಡ್ ಆಗಿರುವ ಫಾರ್ಮಾವನ್ನು ಬಿಡುಗಡೆ ಮಾಡಿದೆ.
ಕಳೆದ 5 ವರ್ಷಗಳಲ್ಲಿ ಶೇ.11 ರಷ್ಟು ಸಿಎಜಿಆರ್ ಅನ್ನು ದಾಖಲಿಸಿರುವ ಭಾರತದ ಪೀಠೋಪಕರಣ ಮಾರುಕಟ್ಟೆಯು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ನಿರ್ಧರಿಸಿರುವ ಜೆಎಸ್‍ಡಬ್ಲ್ಯೂ ಪ್ರೈವೇಟ್ ಲಿಮಿಟೆಡ್ ಬ್ರ್ಯಾಂಡ್ ಫಾರ್ಮಾವನ್ನು ಬಿಡುಗಡೆ ಮಾಡಿದೆ.
ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್!
ಭಾರತೀಯ ಗ್ರಾಹಕರ ಫರ್ನಿಚರ್, ಫರ್ನಿಶಿಂಗ್ ಮತ್ತು ದೈನಂದಿನ ಜೀವನದ ಉದ್ದೇಶಗಳನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ಕಂಪನಿ ಕಾರ್ಯಪ್ರವೃತ್ತವಾಗುತ್ತಿದೆ. ಮಾರುಕಟ್ಟೆ ಸಂಶೋಧನೆಯ ಅನುಸಾರ ಭಾರತೀಯ ಗ್ರಾಹಕರಿಗೆ ಒಪ್ಪುವ ರೀತಿಯಲ್ಲಿ ಫಾರ್ಮಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಜೆಎಸ್‍ಡಬ್ಲ್ಯೂ ಲಿವಿಂಗ್‍ನ ವ್ಯವಸ್ಥಾಪಕ ನಿರ್ದೇಶಕಿ ತಾರಿಣಿ ಜಿಂದಾಲ್ ಹಂದ ಅವರು ಈ ಬಗ್ಗೆ ಮಾತನಾಡಿ, " ದೇಸೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಮ್ಮದೇ ಆದ ಅತ್ಯುತ್ತಮವಾದ ವಿನ್ಯಾಸಗಾರರು ಮತ್ತು ತಂಡವನ್ನು ರಚಿಸುವತ್ತ ಗಮನಹರಿಸಿದ್ದೇವೆ. ಈ ಮೂಲಕ ವಿನೂತನ ಬಗೆಯ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿ ನಮ್ಮ ಗ್ರಾಹಕರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಎಂದು ತಿಳಿಸಿದರು.
ಕರ್ನಾಟಕದ ಜೆಎಸ್‍ಡಬ್ಲ್ಯೂ ಸ್ಟೀಲ್‍ಗೆ ಪ್ರತಿಷ್ಠಿತ ಡೆಮಿಂಗ್ ಬಹುಮಾನ
ಜೆಎಸ್‍ಡಬ್ಲ್ಯೂ ಲಿವಿಂಗ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೇದ್ರೇಜ್ ತ್ರಿಪಾಠಿ ಅವರು ಮಾತನಾಡಿ, "ವಿನ್ಯಾಸಗಳನ್ನು ಲಭ್ಯವಾಗುವಂತೆ ಮಾಡುತ್ತಿರುವ ಸಂದರ್ಭದಲ್ಲಿ ದೇಶದ ಎಲ್ಲಾ ಭಾಗಕ್ಕೂ ಅದು ತಲುಪುವಂತೆ ಮಾಡಬೇಕಿದೆ ಮತ್ತು ಭಾರತೀಯ ಬಳಕೆದಾರರು ಸಂತಸದ ಜೀವನ ಸಾಗಿಸಲು ಮುನ್ನುಡಿಯಾಗಬೇಕಿದೆ. ಈ ಉದ್ದೇಶದಿಂದಲೇ ಫಾರ್ಮಾ ತಂಡವು ಪ್ರತಿಯೊಂದು ಪ್ರದೇಶವನ್ನೂ ತಲುಪಲಿದೆ" ಎಂದು ಅಭಿಪ್ರಾಯಪಟ್ಟರು.
2 ವರ್ಷಗಳಲ್ಲಿ 250 ಕೋಟಿ ರು ಗಳಿಕೆ ಗುರಿ
ಭಾರತದಲ್ಲಿ ಟಾಪ್ 5 ಪೀಠೋಪಕರಣಗಳ ಬ್ರ್ಯಾಂಡ್‍ನಲ್ಲಿ ಒಂದಾಗಿಸುವುದು ಫಾರ್ಮಾ ಉದ್ದೇಶ. 2 ವರ್ಷಗಳಲ್ಲಿ 250 ಕೋಟಿ ರು ಗಳಿಕೆ ಗುರಿ ಹೊಂದಿದೆ. ಕಳೆದ 5 ವರ್ಷಗಳಲ್ಲಿ ಶೇ.11 ರಷ್ಟು ಸಿಎಜಿಆರ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಭಾರತದ ಪೀಠೋಪಕರಣಗಳ ಮಾರುಕಟ್ಟೆ 19 ಬಿಲಿಯನ್ ಯುಎಸ್ ಡಾಲರ್‍ನಷ್ಟು ವ್ಯವಹಾರವನ್ನು ನಡೆಸುತ್ತಿದೆ. ಮಾರುಕಟ್ಟೆಯ ಶೇ.16 ರಷ್ಟು ಭಾಗ ಮಾತ್ರ ಸಂಘಟಿತ ಕ್ಷೇತ್ರದಲ್ಲಿದ್ದು, ಇದರಲ್ಲಿ 50 ಕ್ಕೂ ಹೆಚ್ಚು ಕಂಪನಿಗಳು ಮುಂಚೂಣಿಯಲ್ಲಿವೆ.
ಈ ಹಿನ್ನೆಲೆಯಲ್ಲಿ ಜೆಎಸ್‍ಡಬ್ಲ್ಯೂ ತನ್ನ ಬ್ರ್ಯಾಂಡ್ ಆಗಿರುವ ಫಾರ್ಮಾವನ್ನು ಭಾರತದ ಟಾಪ್ 5 ಫರ್ನಿಚರ್ ಬ್ರ್ಯಾಂಡ್‍ಗಳಲ್ಲಿ ಒಂದನ್ನಾಗಿಸುವ ಗುರಿ ಹೊಂದಿದೆ. ಜೆಎಸ್‍ಡಬ್ಲ್ಯೂ ಗ್ರೂಪ್‍ನ ಫಾರ್ಮಾ ಬ್ರ್ಯಾಂಡ್ ಸುಸ್ಥಿರ ಉತ್ಪನ್ನಗಳು, ವಿನೂತನವಾದ ಉತ್ಪನ್ನಗಳು, ಬಳಕೆದಾರರಿಗೆ ಉತ್ತಮ ಅನುಭವ ನೀಡುವಂಥ ಉತ್ಪನ್ನಗಳನ್ನು ನೀಡುವ ಮೂಲಕ ಭಾರತೀಯ ಪೀಠೋಪಕರಣ ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸುವ ಗುರಿಯನ್ನು ಹಾಕಿಕೊಂಡಿದೆ.
'ಜೆಎಸ್‍ಡಬ್ಲ್ಯೂ'ನಿಂದ 3ನೇ ಸ್ಟೀಲ್ ಘಟಕ, 7,500 ಕೋಟಿ ರೂ. ಹೂಡಿಕೆ
1. ಸುಸ್ಥಿರ ಉತ್ಪನ್ನ
ಸ್ಟೀಲ್ ಅನ್ನು ಪರಿಸರ ಸ್ನೇಹಿ ವಸ್ತು ಎಂದೇ ಪರಿಗಣಿಸಲಾಗಿದೆ. ಇದು ಸಂಪೂರ್ಣವಾಗಿ ಪುನರ್‍ಬಳಕೆ ಮಾಡುವ ವಸ್ತುವಾಗಿದೆ. ಫಾರ್ಮಾ ಯಾವಾಗಲೂ ಮೂಲಭೂತ ವಸ್ತುಗಳನ್ನು ಉಕ್ಕಿನ ರೂಪದಲ್ಲಿಯೇ ರಚನಾತ್ಮಕವಾಗಿ ಸ್ಥಿರತೆಯನ್ನಾಗಿ ಮಾಡುವುದು ಮತ್ತು ಸ್ಟೀಲ್‍ಗೆ ಹೆಚ್ಚುವರಿಯಾಗಿ ಇತರೆ ಮರುಬಳಕೆಯ ಅಥವಾ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸುವುದನ್ನು ಗಮನದಲ್ಲಿಟ್ಟುಕೊಂಡಿರುತ್ತದೆ.
2. ಉತ್ಪನ್ನ ಪೋರ್ಟ್‍ಫೋಲಿಯೋ: 30 ಕ್ಕೂ ಹೆಚ್ಚು ವಿನೂತನವಾದ ಫರ್ನಿಚರ್ ಎಸ್‍ಕೆಯುಗಳನ್ನು ಬಿಡುಗಡೆ ಮಾಡುವುದರೊಂದಿಗೆ ಫಾರ್ಮಾ ತನ್ನ ಪೋರ್ಟ್‍ಫೋಲಿಯೋವನ್ನು 10 ಪಟ್ಟು ಹೆಚ್ಚಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿದೆ. ಭಾರತೀಯ ಗ್ರಾಹಕರು ತಮ್ಮ ಮನೆಗಳ ಅಂದವನ್ನು ಹೆಚ್ಚಿಸುವ ಸಲುವಾಗಿ ಅಗತ್ಯವಿರುವ ಪೀಠೋಪಕರಣಗಳು ಮತ್ತು ಇತರೆ ಭಾಗಗಳನ್ನು ನೀಡುತ್ತಿದೆ.
3. ಬಳಕೆದಾರರ ಅನುಭವ
ಫಾರ್ಮಾ ಬ್ರ್ಯಾಂಡ್ ಭಾರತೀಯ ಮನೆಗಳಿಗೆ ಸುಖೋಷ್ಣತೆ, ಬುದ್ಧಿವಂತಿಕೆ ಮತ್ತು ಚುರುಕುತನವನ್ನು ನೀಡುವ ಮೂಲಕ ಬಳಕೆದಾರರಿಗೆ ಮೂರು ಹಂತಗಳಲ್ಲಿ ಉತ್ತಮ ಅನುಭವವನ್ನು ನೀಡಲಿದೆ. ಈ ಬ್ರ್ಯಾಂಡ್ ತನ್ನದೇ ಆದ ಗುಣಗಳೊಂದಿಗೆ ಬಳಕೆದಾರರ ಒಳನೋಟ ಅಥವಾ ಅವರಿಗೆ ಒಪ್ಪುವ ರೀತಿಯಲ್ಲಿ ಉತ್ಪನ್ನಗಳನ್ನು ನೀಡಲಿದೆ. ಇದಲ್ಲದೇ ಬಳಕೆದಾರರಿಗೆ ಪೂರಕವಾದ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಗಳಿಗೆ ಪೂರಕವಾದ ಉತ್ಪನ್ನಗಳ ಪೂರೈಕೆಗೆ ನೆರವಾಗಲಿದೆ ಎಂಬುದರ ಮೇಲೆ ನಂಬಿಕೆ ಇಟ್ಟಿದೆ.
2023 ರ ವೇಳೆಗೆ ಫಾರ್ಮಾ ಎಕ್ಸ್ ಕ್ಲೂಸಿವ್ ರೀಟೇಲ್ ಸ್ಟೋರ್ ಗಳೊಂದಿಗೆ ರೀಟೇಲ್ ಕ್ಷೇತ್ರಕ್ಕೆ ಪ್ರವೇಶ ಮಾಡಲಿದೆ. ಈ ಮೂಲಕ ಜೆಎಸ್‍ಡಬ್ಲ್ಯೂ ಗ್ರೂಪ್‍ನ ಫರ್ನಿಚರ್ ವ್ಯವಹಾರ ಉತ್ತಮ ಬೆಳವಣಿಗೆ ಕಾಣಲಿದೆ.
4. ಮಾರುಕಟ್ಟೆ ಪ್ರವೇಶ
ಜೆಎಸ್‍ಡಬ್ಲ್ಯೂನ ಮಾರುಕಟ್ಟೆ & ವಿತರಣಾ ಜಾಲದ ಮೂಲಕ ಸ್ಟೀಲ್ & ಸಿಮೆಂಟ್ ಉತ್ಪನ್ನಗಳು ಪೀಠೋಪಕರಣಗಳ ವ್ಯವಹಾರಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುವ ನಿರೀಕ್ಷೆ ಇದೆ. ಪೀಠೋಪಕರಣ ಗ್ರಾಹಕರನ್ನು ತಲುಪಲು ಜೆಎಸ್‍ಡಬ್ಲ್ಯೂ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ ಮೂರು ಹಂತದ ವಿತರಣಾ ಕಾರ್ಯತಂತ್ರವನ್ನು ರೂಪಿಸಿದೆ. ಆರೋಗ್ಯಕಾರಿ ಆರ್ಥಿಕತೆ ಮತ್ತು ಗೃಹೋಪಕರಣಗಳ ಮೇಲೆ ಹೂಡಿಕೆ ಹೆಚ್ಚುತ್ತಿರುವುದು ಪೀಠೋಪಕರಣ ವ್ಯವಹಾರದ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಗಳು ಸಾಕಷ್ಟಿವೆ.


Click it and Unblock the Notifications