For Quick Alerts
ALLOW NOTIFICATIONS  
For Daily Alerts

ಹ್ಯಾಪಿ ಯುಗಾದಿ.. ಸಿಹಿಸುದ್ದಿ: ಮನೆ, ವಾಹನ ಸಾಲ ಅಗ್ಗ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ 2019-20ರ ಮೊದಲ ದ್ವೈಮಾಸಿಕ ಹಣಕಾಸು ನಿತಿಯನ್ನು ಪ್ರಕಟಿಸಿದ್ದು, ರೆಪೋ ದರವನ್ನು ಇಳಿಕೆ ಮಾಡಿದೆ. ಶೇ. 0.25 ರಷ್ಟು ರೆಪೋ ದರದಲ್ಲಿ ಇಳಿಕೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ 2019-20ರ ಮೊದಲ ದ್ವೈಮಾಸಿಕ ಹಣಕಾಸು ನಿತಿಯನ್ನು ಪ್ರಕಟಿಸಿದ್ದು, ರೆಪೋ ದರವನ್ನು ಇಳಿಕೆ ಮಾಡಿದೆ. ಶೇ. 0.25 ರಷ್ಟು ರೆಪೋ ದರದಲ್ಲಿ ಇಳಿಕೆಯಾಗಿರುವುದರಿಂದ ಗೃಹ ಮತ್ತು ವಾಹನ ಸಾಲಗಳ ಮೇಲಿನ ಇಎಂಐ ಪಾವತಿ ಕಡಿಮೆಯಾಗಲಿದೆ.

ಇಎಂಐ ಪಾವತಿ ಹಾಗು ಬಡ್ಡಿದರ ಇಳಿಕೆ

ಇಎಂಐ ಪಾವತಿ ಹಾಗು ಬಡ್ಡಿದರ ಇಳಿಕೆ

ತಿಂಗಳಿಗೆ ಗೃಹ, ವಾಹನ ಸಾಲಗಳ ಮೇಲಿನ ಇಎಂಐ ರೂ. 300-400 ವರೆಗೆ ಕಡಿಮೆಯಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ.
ರೆಪೋ ದರ ಶೇ.0.25 ರಷ್ಟು ಕಡಿತ ಮಾಡಿರುವುದರಿಂದ ಶೇ. 6.25 ರಿಂದ ಶೇ. 6 ಕ್ಕೆ ತಲುಪಿದೆ. ಇದರ ಲಾಭ ಗ್ರಾಹಕರಿಗೆ ಸಿಗಲಿದ್ದು, ಬ್ಯಾಂಕುಗಳು ಗ್ರಾಹಕರ ಮೇಲಿನ ಸಾಲದ ಬಡ್ಡಿದರ ಇಳಿಕೆ ಮಾಡಬೇಕಿದೆ. ಸಾಲಗಾರರಿಗೆ, ಸಾಲ ಪಡೆಯುವವರಿಗೆ ಈ ಅಂಶಗಳು ಗೊತ್ತಿರಲಿ

ವಾಣಿಜ್ಯ ಬ್ಯಾಂಕುಗಳಿಗೆ ಲಾಭ

ವಾಣಿಜ್ಯ ಬ್ಯಾಂಕುಗಳಿಗೆ ಲಾಭ

ಆರ್ಬಿಐ ಹಣಕಾಸು ಯೋಜನಾ ಸಮಿತಿ ಸಭೆಯಲ್ಲಿ ರೆಪೋ ದರ ಇಳಿಕೆ ತೀರ್ಮಾನ ಕೈಗೊಳ್ಳಲಾರುವುರಿಂದ ರೆಪೋ ದರ ಇಳಿಕೆಯಾಗಿದೆ. ಇದರಿಂದಾಗಿ ಆರ್ಬಿಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ ಕೂಡ ಕಡಿಮೆಯಾಗಲಿದ್ದು, ಅದೇ ರಿತಿ ಕಡಿತಗೊಂಡ ಬಡ್ಡಿ ದರವನ್ನು ವಾಣಿಜ್ಯ ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸಬೇಕಿದೆ ಎಂದು ಹೇಳಲಾಗಿದೆ.

ದರ ಕಡಿತದ ಪರಿಣಾಮ

ದರ ಕಡಿತದ ಪರಿಣಾಮ

ಆರ್ಬಿಐ ರೆಪೊ ದರದಲ್ಲಿನ ಕಡಿತ ಗ್ರಾಹಕರಿಗೆ ವರ್ಗಾವಣೆ ಮಾಡಲಿವೆ. ಇದು ಉದಾಹರಣೆಗೆ ಮನೆ ಸಾಲದ ಇಎಂಐ ಮೇಲೆ ಹೇಗೆ ಪರಿಣಾಮ ಬೀರಬಹುದೆಂದು ನೋಡೋಣ..

20 ವರ್ಷಗಳ ಅವಧಿಗೆ ಪಡೆಯುವ ಗೃಹ ಸಾಲದ ಮೊತ್ತ ರೂ. 30 ಲಕ್ಷ ಉದಾಹರಣೆ ನೀಡಲಾಗಿದೆ. ರೂ. 30 ಲಕ್ಷ ಸಾಲಕ್ಕೆ ಬಡ್ಡಿದರವನ್ನು ಎಸ್ಬಿಐ ವೆಬ್ಸೈಟ್ ನಿಂದ ಪಡೆಯಲಾಗಿದ್ದು, ಸಂಬಳ ಪಡೆಯುವ ವರ್ಗಕ್ಕೆ ಅನ್ವಯವಾಗುತ್ತದೆ.

 

English summary

RBI cuts key interest rate; loan EMIs likely to get cheaper

The RBI cutting the repo rate today is good news for borrowers as EMIs are likely to go down for retail borrowers presuming that banks pass on the benefit of this cut.
Story first published: Friday, April 5, 2019, 11:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X