For Quick Alerts
ALLOW NOTIFICATIONS  
For Daily Alerts

  ಹೆಚ್ಚು ಆದಾಯ ಗಳಿಸಲು ಬಯಸುತ್ತಿರಾ? ಈ ಟಿಪ್ಸ್ ಪಾಲಿಸಿ

  |

  ಹೂಡಿಕೆ ಮಾಡಿದ ಹಣದಿಂದ ಸಾದ್ಯವಾದಷ್ಟು ಹೆಚ್ಚು ಆದಾಯ ಪಡೆಯಬೇಕು ಎಂಬ ದೃಷ್ಟಿಯಿಂದ ಹೆಚ್ಚಿನ ಜನರು ಹೂಡಿಕೆ ಮಾಡಲು ಮುಂದಾಗುತ್ತಾರೆ. ಆದಾಗ್ಯೂ ಹೂಡಿಕೆ ಮೇಲೆ ಸಿಗಬಹುದಾದ ಆದಾಯದ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳನ್ನಿಟ್ಟುಕೊಂಡರು ನಿರಾಸೆ ಕಟ್ಟಿಟ್ಟ ಬುತ್ತಿ. ಅದರಲ್ಲೂ ಹೂಡಿಕೆಯ ಮೇಲಿನ ಆದಾಯ ಮಾರುಕಟ್ಟೆಗೆ ಲಿಂಕ್ ಆಗಿದ್ದರೆ ಇಂಥ ನಿರಾಸೆಯ ಸಾಧ್ಯತೆಗಳು ಹೆಚ್ಚು. ಹೆಚ್ಚು ಆದಾಯ ಪಡೆಯಬೇಕಾದರೆ ಹೂಡಿಕೆ ಮಾಡುವಾಗ ಏನೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕೆಂಬ ಎಂಬುದನ್ನು ನೋಡೋಣ ಬನ್ನಿ..

  ಸ್ಪಷ್ಟ ಗುರಿ

  ನಿಜವಾದ ಹೂಡಿಕೆದಾರರು ನಿರ್ದಿಷ್ಟ ಆದಾಯದ ಗುರಿಯನ್ನಿಟ್ಟುಕೊಂಡೇ ಹೂಡಿಕೆ ಮಾಡಬೇಕು. 'ಏಕೆ' (ಗುರಿಗಳು), 'ಹೇಗೆ' (ಪ್ರಕ್ರಿಯೆ) ಮತ್ತು 'ಏನು' (ಹೂಡಿಕೆ ವಿಧಾನ) ಎಂಬ ವಿಷಯಗಳ ಆಧಾರದಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ. ಈ ಸಂಗತಿಗಳನ್ನು ಗಮನಿಸಿಕೊಂಡು ನಿಮ್ಮ ಗುರಿಯ ಬಗ್ಗೆ ನಿರ್ಧರಿಸಿ ಹಾಗೂ ನೀವು ತಡೆಯಬಹುದಾದ ರಿಸ್ಕ್‌ಗಳನ್ನು ಲೆಕ್ಕ ಹಾಕಿ. ನಂತರವಷ್ಟೆ ಸೂಕ್ತವಾದ ಹೂಡಿಕೆಯ ಉತ್ಪನ್ನ ಆಯ್ದುಕೊಳ್ಳಿ.

  ರಿಸ್ಕ್ ಬಗ್ಗೆ ಅಧ್ಯಯನ ಮಾಡಿ

  ಒಂದು ಉತ್ಪನ್ನದಲ್ಲಿ ಮುಂದಾಲೋಚನೆ ಇಲ್ಲದೆ ಹೂಡಿಕೆ ಮಾಡುವುದು ಬಹುತೇಕ ಜನರು ಮಾಡುವ ತಪ್ಪಾಗಿದೆ. ಹೂಡಿಕೆಯ ಬಗ್ಗೆ ಯೋಜನೆ ತಯಾರಿಸುವಾಗ ಮೊದಲು ಅದರಲ್ಲಿನ ಗಂಡಾಂತರಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ. ರಿಸ್ಕ್‌ಗಳನ್ನು ಗಣನೆಗೆ ತೆಗೆದುಕೊಂಡು ಆದಾಯದ ಬಗ್ಗೆ ಸ್ಪಷ್ಟ ಗುರಿಯನ್ನು ನಿರ್ಧರಿಸಿದಲ್ಲಿ ಅಂದುಕೊಂಡ ಹಾಗೆ ಪ್ರತಿಫಲ ಪಡೆಯಲು ಸಾಧ್ಯವಿದೆ.

  ದೀರ್ಘಾವಧಿಗೆ ಹೂಡಿಕೆ ಮಾಡಿ

  ಹೂಡಿಕೆಯ ಅವಧಿಯನ್ನು ಸಂಪೂರ್ಣ ತಾರ್ಕಿಕವಾಗಿ ನಿರ್ಧರಿಸುವುದು ಒಂದು ರೀತಿಯ ಅಸಾಧ್ಯ ಕ್ರಮವಾಗಿದೆ. ಏಕೆಂದರೆ ಹೂಡಿಕೆ ಮಾಡುವ ಹಾಗೂ ಹಿಂತೆಗೆಯುವ ಒಳ್ಳೆಯ ಸಮಯ ಯಾವುವು ಎಂಬುದು ನಂತರವಷ್ಟೇ ತಿಳಿದು ಬರುವಂಥ ವಿಷಯ. ಮಾರುಕಟ್ಟೆಯ ಏರಿಳಿತಗಳನ್ನು ಅತ್ಯಂತ ನಿಖರವಾಗಿ ಅಂದಾಜಿಸುವುದು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಆದಷ್ಟೂ ದೀರ್ಘಾವಧಿಯವರೆಗೆ ಹೂಡಿಕೆ ಮಾಡಿ ಆದಾಯವು ಸಂಚಯಿತವಾಗುವಂತೆ ಕಾಲಾವಕಾಶ ನೀಡಬೇಕು.

  ಯಾವುದನ್ನು ತಿಳಿದುಕೊಳ್ಳಬೇಕು

  ಯಾವಾಗ, ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು ಎಂದು ನಿರ್ಧರಿಸುವುದು ಬಹುತೇಕ ಜನರಿಗೆ ಕಷ್ಟದ ಕೆಲಸವಾಗಿದೆ. ಆದಾಗ್ಯೂ ಹೂಡಿಕೆ ವಿಚಾರದಲ್ಲಿ ಉದ್ಭವಿಸುವ ಕೆಲ ಗೌಣ ವಿಷಯಗಳತ್ತ ಗಮನ ಹರಿಸದಿರುವುದೇ ಸೂಕ್ತ. ಹೂಡಿಕೆಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮಾತ್ರ ಚಿಂತಿಸಬೇಕು. ಇಲ್ಲವಾದರೆ ಚಿಕ್ಕ ಪುಟ್ಟ ವಿಷಯಗಳಿಂದ ಹೂಡಿಕೆಯ ಪ್ರಕ್ರಿಯೆಯೇ ಹಾಳಾಗುವ ಸಾಧ್ಯತೆ ಇರುತ್ತದೆ.

  ಸಲಹೆ ಪಡೆದುಕೊಳ್ಳಿ

  ಹೂಡಿಕೆ, ಷೇರುಪೇಟೆ, ಹಣಕಾಸು ಬಗ್ಗೆ ಹೆಚ್ಚಿನ ಆಳವಾದ ಜ್ಞಾನವಿರಬೇಕಾಗುತ್ತದೆ. ಹೂಡಿಕೆ ಮಾಡಲು ಪ್ರಸ್ತುತ ಯಾವ ಶೇರು 'ಅತ್ಯುತ್ತಮ' ಎಂದು ನಿರ್ಧರಿಸುವುದು ತುಸು ಕಷ್ಟದ ಕೆಲಸವೇ ಆಗಿದೆ. ಆಯಾ ಸ್ಟಾಕ್ ಅಥವಾ ಶೇರಿನ ಬಗ್ಗೆ ಆಳವಾದ ಜ್ಞಾನ ಬಹುತೇಕರಲ್ಲಿ ಇರುವುದಿಲ್ಲ. ಜೊತೆಗೆ ನಮ್ಮ ಅವಶ್ಯಕತೆಗಳಿಗನುಗುಣವಾಗಿ ಷೇರನ್ನು ಆಯ್ಕೆ ಮಾಡುವುದು ಇನ್ನೂ ಕಷ್ಟಕರ. ಹೀಗಾಗಿ ನಂಬಿಕಸ್ಥ ಹೂಡಿಕೆ ತಜ್ಞರ ಸಲಹೆ ಪಡೆಯುವುದು ಉತ್ತಮವಾಗಿದೆ.

  English summary

  Best Investment tips for long-term wealth creation

  Here are five things to keep in mind while investing to maximise your returns and fulfil your goals.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more