ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿರಬಹುದು? ಯಾವ ಪಕ್ಷ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬಹುದು? ಇತ್ಯಾದಿ ಕುತೂಹಲಕಾರಿ ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ.
ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷ ಹಾಗು ಮುಖಂಡರ ಬಗ್ಗೆ ಸಾಕಷ್ಟು ಚರ್ಚೆಗಳು, ಉಹಾಪೋಹಗಳು, ಪರಸ್ಪರ ಜಟಾಪಟಿಗಳು ಹರಿದಾಡುತ್ತಿರುತ್ತವೆ. ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿರಬಹುದು? ಯಾವ ಪಕ್ಷ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬಹುದು? ಇತ್ಯಾದಿ ಕುತೂಹಲಕಾರಿ ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ. ಹಾಗಿದ್ದರೆ ಯಾವ ಪಕ್ಷ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ನೋಡೋಣ ಬನ್ನಿ..
ಬಿಎಸ್ಪಿ ನಂಬರ್ ಒನ್
ಅಧಿಕೃತ ದಾಖಲೆಗಳ ಪ್ರಕಾರ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಎಲ್ಲಾ ಪಕ್ಷಗಳ ಪೈಕಿ ಅತಿದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದು, ಶ್ರೀಮಂತ ಪಕ್ಷ ಎನಿಸಿದೆ. ಇದರ ಬ್ಯಾಂಕ್ ಬ್ಯಾಲೆನ್ಸ್ ಕೇಳಿದ್ರೆ ದಂಗಾಗ್ತಿರಾ! ಬಿಎಸ್ಪಿ ಪಕ್ಷ ಫೆಬ್ರವರಿ 25 ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ೨೦೨೮ರ ಅಕ್ಟೋಬರ್ ಒಟ್ಟು 665 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ. ದೇಶದ ಸಾರ್ವಜನಿಕ ವಲಯ ಎಂಟು ಬ್ಯಾಂಕುಗಳ ಖಾತೆಗಳಲ್ಲಿ ರೂ. 669 ಕೋಟಿ ಹೊಂದಿದೆ.
ಎಸ್ಪಿ ಗೆ 2ನೇ ಸ್ಥಾನ
ಬಹುಜನ ಸಮಾಜ ಪಕ್ಷದ ನಂತರ ಸಮಾಜವಾದಿ ಪಾರ್ಟಿ ಎರಡನೇ ಸ್ಥಾನದಲ್ಲಿದೆ. ಸಮಾಜವಾದಿ ಪಾರ್ಟಿ ತನ್ನ ಬ್ಯಾಂಕು ಖಾತೆಗಳಲ್ಲಿ ರೂ 471 ಕೋಟಿ ಹಣ ಬ್ಯಾಲೆನ್ಸ್ ಹೊಂದಿದೆ. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ನಂತರ ಪಕ್ಷದ ಬ್ಯಾಲೆನ್ಸ್ ರೂ 11 ಕೋಟಿ ಕುಸಿದಿದೆ.
ಕಾಂಗ್ರೆಸ್ 3ನೇ ಸ್ಥಾನ
ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನ ಪಡೆದಿದೆ. ಇದು ರೂ. 196 ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ. ಈ ಅಂಕಿಅಂಶ ಕಳೆದ ವರ್ಷ ನವೆಂಬರ್ 2 ರಂದು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳನ್ನು ಆಧರಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಘಡ್ ರಾಜ್ಯ ಚುನಾವಣೆಗಳಲ್ಲಿ ಗೆದ್ದ ನಂತರ ಅದರ ಬ್ಯಾಲೆನ್ಸ್ ಬಗ್ಗೆ ವಿವರ ಪಕ್ಷವು ಅಪ್ಡೇಟ್ ಮಾಡಿಲ್ಲ.
ಐದನೇ ಸ್ಥಾನದಲ್ಲಿ ಬಿಜೆಪಿ
ಬಿಜೆಪಿ ರೂ. 82 ಕೋಟಿ ಬ್ಯಾಲೆನ್ಸ್ ನೊಂದಿಗೆ ಐದನೇ ಸ್ಥಾನದಲ್ಲಿದೆ. ಬಿಜೆಪಿಯ ಮೊತ್ತ ನೋಡಿದಾಗ ತುಂಬಾ ಕಡಿಮೆ ಅನಿಸಬಹುದು. ಆದರೆ ಚುನಾವಣಾ ಬಾಂಡ್ ಗಳ ಮೂಲಕ ಹಾಗು ಇನ್ನಿತರ ಕೊಡುಗೆ ಸಂಗ್ರಹದ ಮೂಲಕ ಬಿಜೆಪಿ ಮುಂಚೂಣಿಯಲ್ಲಿದೆ. ಪ್ರಾದೇಶಿಕ ತೆಲುಗುದೇಶಂ ಪಕ್ಷ ರೂ. 107 ಕೋಟಿ ಬ್ಯಾಲೆನ್ಸ್ ನೊಂದಿಗೆ ನಾಲ್ಕೆನೇ ಸ್ಥಾನದಲ್ಲಿದೆ. ಎಲ್ಲಾ ಪಕ್ಷಗಳು ಕೊಡುಗೆಗಳ ಮೂಲಕವೇ ಹೆಚ್ಚು ಹಣ ಸಂಗ್ರಹಿಸಿವೆ.
ಕೊಡುಗೆಗಳ ಮೂಲಕ 87% ಆದಾಯ ಸಂಗ್ರಹ
ದೇಶದ ರಾಜಕೀಯ ಪಕ್ಷಗಳ ಆದಾಯ ಮೂಲ ಕೊಡುಗೆಗಳಾಗಿದೆ.
ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದ ನಾಲ್ಕು ನವೆಂಬರ್-ಡಿಸೆಂಬರ್ ಚುನಾವಣೆಗಳಲ್ಲಿ ಎಸ್ಪಿ ಬ್ಯಾಲೆನ್ಸ್ ರೂ. 11 ಕೋಟಿ ಕುಸಿದಿದೆ. ಇದಕ್ಕೆ ವಿರುದ್ಧವಾಗಿ, ಈ ಚುನಾವಣೆಗಳಲ್ಲಿ ಬಿಎಸ್ಪಿ ರೂ. 24 ಕೋಟಿಗಳನ್ನು ಸಂಗ್ರಹಿಸಿದ್ದು, ತನ್ನ ಮೊತ್ತವನ್ನು ರೂ. 665 ಕೋಟಿಗಳಿಂದ ರೂ. 670 ಕೋಟಿಗೆ ಏರಿಸಿದೆ.
ಈ ಪಕ್ಷಗಳ ಆದಾಯ ತೆರಿಗೆ ರಿಟರ್ನ್ ವಿಶ್ಲೇಷಣೆಯನ್ನು ಅಸೋಸಿಯೇಷನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಬಿಜೆಪಿ ಪಕ್ಷ 2016-17ರಲ್ಲಿ ರೂ. 1,034 ಕೋಟಿ ಮತ್ತು 2017-18ರಲ್ಲಿ ರೂ. 1,027 ಕೋಟಿಗಳನ್ನು ಕೊಡುಗೆಗಳ ಮೂಲಕ ಸಂಗ್ರಹಿಸಿ ಹೆಚ್ಚಿನ ಆದಾಯ ತೋರಿಸಿದೆ. ಅದೇ ಅವಧಿಯಲ್ಲಿ, ಬಿಎಸ್ಪಿ ಆದಾಯವು ರೂ. 174 ಕೋಟಿಯಿಂದ ರೂ. 52 ಕೋಟಿಗೆ ಇಳಿದಿದೆ. 2016-2017ರ ಕಾಂಗ್ರೆಸ್ ಆದಾಯ ರೂ. 225 ಕೋಟಿ ಎಂದು ತೋರಿಸಲಾಗಿದೆ. ಚುನಾವಣಾ ಆಯೋಗ ಹಾಗು ರಾಜಕೀಯ ಪಕ್ಷಗಳು ನಿಮ್ಮ ಮತಕ್ಕೆ ಖರ್ಚು ಮಾಡುವ ಹಣ ಎಷ್ಟು ಗೊತ್ತೆ?
ಹಿಂದಿನ 5 ಚುನಾವಣೆಗಳ ಖರ್ಚುವೆಚ್ಚ ಎಷ್ಟು?
- 1999 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 61.95 ಕೋಟಿ ಮತದಾರರಿದ್ದರು. ಆಗ ಪ್ರತಿ ಮತದಾರನ ಮೇಲೆ ರೂ. 15 ಖರ್ಚು ಮಾಡಲಾಗಿತ್ತು. ಒಟ್ಟು ಬಜೆಟ್ ಮೊತ್ತ ರೂ. 947.68 ಕೋಟಿ ಆಗಿತ್ತು.
- 2004 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 67.14 ಕೋಟಿ ಮತದಾರರಿದ್ದರು. ಆಗ ಪ್ರತಿ ಮತದಾರನ ಮೇಲೆ ಖರ್ಚು ಮಾಡಲಾದ ಹಣ ರೂ. 17. ಒಟ್ಟು ಬಜೆಟ್ ಮೊತ್ತ ರೂ. 1113.88 ಕೋಟಿ ವ್ಯಯಿಸಲಾಗಿತ್ತು.
- 2009 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 71.69 ಕೋಟಿ ಮತದಾರರಿದ್ದು, ಪ್ರತಿ ಮತದಾರನ ಮೇಲೆ ರೂ. 12 ಖರ್ಚಾಗಿತ್ತು. ಅಂದಿನ ಒಟ್ಟು ಬಜೆಟ್ ಮೊತ್ತ ರೂ. 846.67 ಕೋಟಿಯಷ್ಟಿತ್ತು.
- 2014 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 83.4 ಕೋಟಿ ಮತದಾರರಿದ್ದರು. ಪ್ರತಿ ಮತದಾರನ ಮೇಲೆ 46 ರೂಪಾಯಿ ಖರ್ಚು ಮಾಡಲಾಗಿತ್ತು. ಒಟ್ಟು ಬಜೆಟ್ ಮೊತ್ತ ರೂ. 3870 ಕೋಟಿ ಆಗಿತ್ತು.
- 2019 ರ ಲೋಕಸಭಾ ಚುನಾವಣೆಯಲ್ಲಿ 90 ಕೋಟಿ ಮತದಾರರಿದ್ದರು. ಈ ಬಾರಿ ಪ್ರತಿ ಮತದಾರನ ಮೇಲೆ ರೂ. 72 ಖರ್ಚು ಮಾಡಲಾಗುತ್ತಿದೆ. ಪ್ರಸ್ತುತ ಒಟ್ಟು ಬಜೆಟ್ ಮೊತ್ತ ರೂ. 6500 ಕೋಟಿ ಎಂದು ಅಂದಾಜಿಸಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications