For Quick Alerts
ALLOW NOTIFICATIONS  
For Daily Alerts

ಚುನಾವಣಾ ಆಯೋಗ ಹಾಗು ರಾಜಕೀಯ ಪಕ್ಷಗಳು ನಿಮ್ಮ ಮತಕ್ಕೆ ಖರ್ಚು ಮಾಡುವ ಹಣ ಎಷ್ಟು ಗೊತ್ತೆ?

ಚುನಾವಣೆಗಳು ಬಂದರೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತದೆ. ಒಂದೇಡೆ ರಾಜಕೀಯ ಪಕ್ಷಗಳು ಯರ್ರಾಬಿರ್ರಿ ಖರ್ಚುಗಳನ್ನು ಮಾಡಿ ಮತದಾರರನ್ನು ಸೆಳೆಯಲು ಮುಂದಾಗುತ್ತಾರೆ. ಇನ್ನೊಂದೆಡೆ ಚುನಾವಣೆ ಆಯೋಗ ಕೂಡ ಖರ್ಚು ಮಾಡುತ್ತದೆ.

|

ಚುನಾವಣೆಗಳು ಬಂದರೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತದೆ. ಒಂದೇಡೆ ರಾಜಕೀಯ ಪಕ್ಷಗಳು ಯರ್ರಾಬಿರ್ರಿ ಖರ್ಚುಗಳನ್ನು ಮಾಡಿ ಮತದಾರರನ್ನು ಸೆಳೆಯಲು ಮುಂದಾಗುತ್ತಾರೆ. ಇನ್ನೊಂದೆಡೆ ಚುನಾವಣೆ ಆಯೋಗ ಕೂಡ ಖರ್ಚು ಮಾಡುತ್ತದೆ. ಇದೀಗ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಚರ್ಚೆ ಮುನ್ನೆಲೆಗೆ ಬಂದಿದೆ.
ಭಾರತದಲ್ಲಿ ಪ್ರತಿ ಮತದಾರರ ಮೇಲೆ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು ಹಾಗು ಅಭ್ಯರ್ಥಿಗಳು ಎಷ್ಟು ಹಣ ಖರ್ಚು ಮಾಡುತ್ತಾರೆ ಎಂಬ ಕುತೂಹಲ ಹಲವರಲ್ಲಿ ಇರಬಹುದು ಅಲ್ಲವೆ? ಅದಕ್ಕೆ ಉತ್ತರ ಇಲ್ಲಿದೆ ನೋಡಿ..

 

ಪ್ರತಿ ಮತದಾರರ ಮೇಲಿನ ಖರ್ಚು?

ಪ್ರತಿ ಮತದಾರರ ಮೇಲಿನ ಖರ್ಚು?

ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಪ್ರತಿಯೊಬ್ಬ ಮತದಾರರ ಮೇಲೆ ಸುಮಾರು ರೂ. 72 ಖರ್ಚು ಮಾಡಲಾಗುತ್ತದೆ. ಚುನಾವಣಾ ಆಯೋಗದ ಆಯವ್ಯಯ ಮತ್ತು ದೆಹಲಿಯ ಮಾಧ್ಯಮ ಅಧ್ಯಯನ ಸಂಸ್ಥೆ ಈ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.

ರಾಜಕೀಯ ಪಕ್ಷಗಳ ಖರ್ಚು?

ರಾಜಕೀಯ ಪಕ್ಷಗಳ ಖರ್ಚು?

ಮೇಲೆ ಉಲ್ಲೇಖಿಸಿದಂತೆ ಚುನಾವಣಾ ಆಯೋಗದ ಖರ್ಚು 72 ರೂಪಾಯಿ ಆದರೆ ರಾಜಕೀಯ ಪಕ್ಷಗಳು ಪ್ರತಿ ಮತದಾರರ ಮೇಲೆ ಸರಾಸರಿ ಎಂಟು ಪಟ್ಟು ಅಧಿಕ ಖರ್ಚು ಮಾಡುತ್ತವೆ ಅಂತೆ! ಅಂದರೆ ರೂ. 555 ವ್ಯಯಿಸುತ್ತವೆ. ಅಂದರೆ ಕೆಲವರಿಗೆ ಸಾವಿರ ಸಿಗಬಹುದು. ಹಲವರಿಗೆ ನೂರು ಸಿಗಬಹುದು. ಕೆಲವರಿಗೆ ಏನೂ ಸಿಗದಿರಬಹುದು! ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು?

ಪ್ರಸ್ತುತ ಚುನಾವಣೆಯ ಖರ್ಚುವೆಚ್ಚ ಎಷ್ಟು ಗೊತ್ತೆ?
 

ಪ್ರಸ್ತುತ ಚುನಾವಣೆಯ ಖರ್ಚುವೆಚ್ಚ ಎಷ್ಟು ಗೊತ್ತೆ?

ಹಾಗಿದ್ದರೆ ಈ 17ನೇ ಲೋಕಸಭಾ ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ನೋಡೋಣ. ಪ್ರತಿ ಮತದಾರರ ಮೇಲೆ ರೂ. ೭೨ ರಂತೆ, ಸುಮಾರು ರೂ. 6500 ಕೋಟಿ ಖರ್ಚಾಗುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಮತದಾರರ ಮೇಲೆ ರೂ. ೪೬ ವ್ಯಯಿಸಲಾಗಿತ್ತು. ಆಗ ಚುನಾವಣಾ ಆಯೋಗ ರೂ. 3870 ಕೋಟಿ ಬಜೆಟ್ ನ್ನು ಇರಿಸಿತ್ತು.

ಅಭ್ಯರ್ಥಿ ಖರ್ಚು

ಅಭ್ಯರ್ಥಿ ಖರ್ಚು

ಇದು ಚುನಾವಣಾ ಆಯೋಗದ ಖರ್ಚಾದರೆ, ಇನ್ನೂ ಅಭ್ಯರ್ಥಿಗಳು ರೂ. 70 ಲಕ್ಷದಿಂದ 1 ಕೋಟಿವರೆಗೆ ಖರ್ಚು ಮಾಡುತ್ತಾರೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಖರ್ಚು ಮಾಡುವ ಮೊತ್ತ ಸೇರಿಸಿದರೆ ಇದರ ಅಂದಾಜು ಸಿಗುವುದು ಕಷ್ಟ. ಆದರೂ ಐದು ಕೋಟಿವರೆಗೆ ತಲುಪಬಹುದು!

ಮೊದಲ ಚುನಾವಣೆಯಲ್ಲಿ ಖರ್ಚಾಗಿದ್ದು ಎಷ್ಟು?

ಮೊದಲ ಚುನಾವಣೆಯಲ್ಲಿ ಖರ್ಚಾಗಿದ್ದು ಎಷ್ಟು?

ಈ ಮೇಲಿನ ಮೊತ್ತ ಪ್ರಸ್ತುತ ಲೋಕಸಭಾ ಚುನಾವಣೇಯ ಖರ್ಚುವೆಚ್ಚ್ಕ್ಕೆ ಸಂಬಂಧಿಸಿದ್ದರೆ ದೇಶದ ಮೊದಲ ಚುನಾವಣೆಗೆ ಪ್ರತಿ ಮತದಾರರ ಮೇಲೆ ಎಷ್ಟು ಹಣ ಖರ್ಚು ಮಾಡಲಾಗಿತ್ತು ಎಂಬ ಪ್ರಶ್ನೆ ನಿಮ್ಮ ತಲೆಯೊಳಗೆ ನುಸುಳಬಹುದು. 1952 ಮೊದಲ ಚುನಾವಣೆಗೆ ಪ್ರತಿ ಮತದಾರನ ಮೇಲೆ ಚುನಾವಣಾ ಆಯೋಗ ಖರ್ಚು ಮಾಡಿದ್ದು ಕೇವಲ 60 ಪೈಸೆಯಂತೆ! ಮೊದಲ ಚುನಾವಣೆಯ ಒಟ್ಟು ಬಜೆಟ್ ರೂ.10.45 ಕೋಟಿ. ತದನಂತರದಲ್ಲಿ ನಡೆದ ನಾಲ್ಕು ಲೋಕಸಭಾ ಚುನಾವಣೆಗಳು ಇದಕ್ಕಿಂತಲೂ ಕಡಿಮೆ ಬಜೆಟ್ ನಲ್ಲಿ ನಡೆದಿರುವುದು ಸಮಾಧಾನಕರ ಸಂಗತಿ. 1980 ರ ಚುನಾವಣೆಯಲ್ಲಿ ಒಂದು ರೂಪಾಯಿ ದಾಟಿತ್ತು. ಆಗ ಪ್ರತಿ ಮತದಾರನ ಮೇಲೆ ಒಂದೂವರೆ ರೂಪಾಯಿ ಖರ್ಚು ಮಾಡಲಾಗಿತ್ತು.

ಕಳೆದ ಐದು ಚುನಾವಣೆಗಳ ಖರ್ಚುವೆಚ್ಚಗಳ ಹೋಲಿಕೆ

ಕಳೆದ ಐದು ಚುನಾವಣೆಗಳ ಖರ್ಚುವೆಚ್ಚಗಳ ಹೋಲಿಕೆ

ಹೋಲಿಕೆಯೊಂದಿಗೆ ಕಳೆದ ಐದು ಚುನಾವಣೆಗಳಲ್ಲಿ ಆಗಿರುವ ಖರ್ಚನ್ನು ವಿಶ್ಲೇಷಿಸೋಣ.
- 1999 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 61.95ಕೋಟಿ ಮತದಾರರಿದ್ದರು. ಆಗ ಪ್ರತಿ ಮತದಾರನ ಮೇಲೆ 15 ರೂಪಾಯಿ ಖರ್ಚು ಮಾಡಲಾಗಿತ್ತು. ಒಟ್ಟು ಬಜೆಟ್ ಮೊತ್ತ ರೂ. 947.68 ಕೋಟಿ ಆಗಿತ್ತು.
- 2004 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 67.14 ಕೋಟಿ ಮತದಾರರಿದ್ದರು. ಆಗ ಪ್ರತಿ ಮತದಾರನ ಮೇಲೆ 17 ರೂಪಾಯಿ ಖರ್ಚು ಮಾಡಲಾಗಿತ್ತು. ಒಟ್ಟು ಬಜೆಟ್ ಮೊತ್ತ ರೂ. 1113.88 ಕೋಟಿ ವ್ಯಯಿಸಲಾಗಿತ್ತು.
- 2009 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 71.69 ಕೋಟಿ ಮತದಾರರಿದ್ದರು. ಆಗ ಪ್ರತಿ ಮತದಾರನ ಮೇಲೆ 12 ರೂಪಾಯಿ ಖರ್ಚು ಮಾಡಲಾಗಿತ್ತು. ಒಟ್ಟು ಬಜೆಟ್ ಮೊತ್ತ ರೂ. 846.67 ಕೋಟಿ ಆಗಿತ್ತು.
- 2014 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 83.4 ಕೋಟಿ ಮತದಾರರಿದ್ದರು. ಆಗ ಪ್ರತಿ ಮತದಾರನ ಮೇಲೆ 46 ರೂಪಾಯಿ ಖರ್ಚು ಮಾಡಲಾಗಿತ್ತು. ಒಟ್ಟು ಬಜೆಟ್ ಮೊತ್ತ ರೂ. 3870 ಕೋಟಿ ಆಗಿತ್ತು.
- 2019 ರ ಚುನಾವಣೆಯಲ್ಲಿ ಒಟ್ಟು 90 ಕೋಟಿ ಮತದಾರರಿದ್ದರು. ಪ್ರತಿ ಮತದಾರನ ಮೇಲೆ 72 ರೂಪಾಯಿ ಖರ್ಚು ಮಾಡಲಾಗುತ್ತಿದೆ. ಪ್ರಸ್ತುತ ಒಟ್ಟು ಬಜೆಟ್ ಮೊತ್ತ ರೂ. 6500 ಕೋಟಿ ಎಂದು ಅಂದಾಜಿಸಲಾಗಿದೆ.

ದೆಹಲಿ ಅಧ್ಯಯನ ಸಂಸ್ಥೆ ಹೇಳಿದ್ದೇನು?

ದೆಹಲಿ ಅಧ್ಯಯನ ಸಂಸ್ಥೆ ಹೇಳಿದ್ದೇನು?

ದೆಹಲಿಯ ಅಧ್ಯಯನ ಸಂಸ್ಥೆ ಹೇಲುವ ಪ್ರಕಾರ, ಪ್ರ್ತುತ ಲೋಕಸಭಾ ಚುನಾವಣೆಗೆ ಸುಮಾರು ರೂ. 50 ಸಾವಿರ ಕೋಟಿ ಖರ್ಚು ಆಗಲಿದೆ. ಇದು ಅಮೇರಿಕಾದ ಚುನಾವಣೆಗಿಂತ ದುಬಾರಿಯೆನಿಸಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಶೇ. ೪೦ರಷ್ಟು ಏರಿಕೆಯಾಗಿದೆ. ಅಂದರೆ ಈ ಬಾರಿ ಪ್ರತಿ ಮತದಾರನ ಮೇಲೆ ರೂ. 555 ಸಿಗಲಿದೆ.

ಮತದಾನಕ್ಕೆ ಬೆಲೆ ಕಟ್ಟಲಾಗದು

ಮತದಾನಕ್ಕೆ ಬೆಲೆ ಕಟ್ಟಲಾಗದು

ಮತದಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗದು. ಇದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಒಂದು ಮತ ದೇಶದ ಭವಿಷ್ಯವನ್ನೇ ಬದಲಿಸಬಲ್ಲದು. ನಮ್ಮ ಮತಗಳನ್ನು ಎಂದಿಗೂ ಮಾರಬಾರದು. ನೀತಿ ಸಂಹಿತೆ ಉಲ್ಲಂಘನೆ ಮಾಡದೇ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಜವಾಬ್ಧಾರಿ ಪ್ರತಿಯೊಬ್ಬ ಮತದಾರನ ಮೇಲಿರುತ್ತದೆ. ತಪ್ಪದೇ ಮತ ಚಲಾಯಿಸಿ. ಸಮರ್ಥ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಪಾರ್ಟ್ ಟೈಂ ಕೆಲಸ ಮಾಡಿ ಕೈತುಂಬಾ ಹಣ ಗಳಿಸಿ..

English summary

How much Election commission and Political parties spend per vote

The 2019 election is finally here. Lok Sabha election 2019: How much Election commission and Political parties spend per vote check here.
Story first published: Saturday, April 13, 2019, 11:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X