For Quick Alerts
ALLOW NOTIFICATIONS  
For Daily Alerts

300ಕ್ಕೂ ಹೆಚ್ಚು ಅಂಶ ಸೆನ್ಸೆಕ್ಸ್, 100ಕ್ಕೂ ಹೆಚ್ಚು ಅಂಶ ಕುಸಿದ ನಿಫ್ಟಿ: ಇದೇನು ತಲ್ಲಣ?

|

ಮುಂಬೈ, ಏಪ್ರಿಲ್ 22: ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರದಂದು 300ಕ್ಕೂ ಹೆಚ್ಚು ಅಂಶಗಳಷ್ಟು ಕುಸಿತ ಕಂಡು, 38,819.21 ಅಂಶವನ್ನು ತಲುಪಿತ್ತು. ಇನ್ನು ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿದು, 11,639.65 ಅಂಶ ತಲುಪಿತ್ತು. ಸೆನ್ಸೆಕ್ಸ್ 39 ಸಾವಿರದಿಂದ ಕೆಳಗೆ ಹಾಗೂ ನಿಪ್ಟಿ 11,700 ಅಂಶದಿಂದ ಕೆಳಗೆ ವ್ಯವಹಾರ ನಡೆಸುತ್ತಿದೆ. ಇದು ಸೋಮವಾರ ಮಧ್ಯಾಹ್ನ ಎರಡು ಗಂಟೆ ಹೊತ್ತಿನ ಚಿತ್ರಣ.

ಹೀಗೆ ದೊಡ್ಡ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ಕುಸಿಯುವುದಕ್ಕೆ ಏನು ಕಾರಣ ಅಂತ ನೋಡುವುದಾದರೆ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಮೊದಲು ಕಣ್ಣಿಗೆ ಕಾಣುತ್ತದೆ. ಇದು ಭಾರತೀಯ ಮಾರುಕಟ್ಟೆ ಅಷ್ಟೇ ಅಲ್ಲ, ಬಹುತೇಕ ಏಷ್ಯನ್ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ತೈಲ ಬೆಲೆ ಐದು ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಇರಾನ್ ನಿಂದ ಆಮದು ಮಾಡಿಕೊಳ್ಳುವ ತೈಲವನ್ನು ಸಂಪೂರ್ಣ ನಿಲ್ಲಿಸಿ, ಇಲ್ಲವೇ ದಿಗ್ಬಂಧನ ಎದುರಿಸಿ ಎಂದು ಅಮೆರಿಕ ಎಚ್ಚರಿಸಿದೆ.

 

ಸುದ್ದಿ ಕುದುರೆ ಮೇಲೆ ಷೇರುಪೇಟೆ ಸವಾರಿ, ನಿಮ್ಮ ಹೂಡಿಕೆ ಹೇಗಿದೆ ನೋಡ್ರೀ?

ಆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ಸದ್ಯಕ್ಕೆ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳಿಗೆ ಮೇ ತಿಂಗಳ ಎರಡನೇ ತಾರೀಕಿನ ತನಕ ಗಡುವು ನೀಡಲಾಗಿದೆ. ಆ ನಂತರವೂ ಆಮದು ಮಾಡಿಕೊಂಡರೆ ಅಮೆರಿಕವು ದಿಗ್ಬಂಧನ ವಿಧಿಸಲಿದೆ ಎಂದು ಘೋಷಿಸಲಾಗಿದೆ. ಆ ಕಾರಣಕ್ಕೆ ತೈಲ ಬೆಲೆ ಐದು ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ.

300ಕ್ಕೂ ಹೆಚ್ಚು ಸೆನ್ಸೆಕ್ಸ್, 100ಕ್ಕೂ ಹೆಚ್ಚು ಅಂಶ ಕುಸಿದ ನಿಫ್ಟಿ

ಏರುತ್ತಿರುವ ಕಚ್ಚಾ ತೈಲ ಬೆಲೆ ಪರಿಣಾಮ

ಹೀಗೆ ತೈಲ ಬೆಲೆ ಏರಿಕೆಯಾದರೆ ಕೆಲ ಕಂಪೆನಿಗಳ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಆಗುತ್ತದೆ. ಜತೆಗೆ ತೈಲ ಹಣದುಬ್ಬರಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಟೈರ್, ಲುಬ್ರಿಕೆಂಟ್ಸ್, ಪಾದರಕ್ಷೆ ಉತ್ಪಾದಕರು, ರಿಫೈನಿಂಗ್, ಏರ್ ಲೈನ್ಸ್ ಗಳು ಮುಖ್ಯವಾಗಿ ತೈಲದ ಬೆಲೆ ಕಡಿಮೆ ಇದ್ದಷ್ಟು ನೆಮ್ಮದಿ ಆಗಿರುತ್ತವೆ. ಇನ್ನು ಬೆಲೆ ಹೆಚ್ಚಾದರೆ ತೈಲ ಉತ್ಪಾದನೆ ಮಾಡುವ ಕಂಪೆನಿಗಳಿಗೆ ಅನುಕೂಲವಾಗಲಿದೆ. ಇದೀಗ ತೈಲ ಬೆಲೆ ಏರಿ, ಷೇರು ಮಾರುಕಟ್ಟೆಯನ್ನು ಕೆಡವಿದೆ.

ಇದು ಮ್ಯೂಚ್ಯುಯಲ್ ಫಂಡ್ ಗಳ ಜಗತ್ತು, ಮೈ ಮರೆತಿರೋ ಆಪತ್ತು!

ರಿಲಯನ್ಸ್ ಇಂಡಸ್ಟ್ರೀಸ್ ನ ತ್ರೈಮಾಸಿಕ ಫಲಿತಾಂಶ ಬಂದಿದ್ದು, ಆ ಸಂಖ್ಯೆ ಬಗ್ಗೆ ಷೇರು ದಲ್ಲಾಳಿಗಳು ಸಮಾಧಾನವಾಗಿಲ್ಲ. ಸೂಚ್ಯಂಕ ಒಳಗೊಂಡಿರುವ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ನ ಪಾಲು ದೊಡ್ಡದು. ಅದು ಕುಸಿತ ಕಂಡಿದ್ದರಿಂದ ಸೂಚ್ಯಂಕಕ್ಕೆ ಹೊಡೆತ ಬಿದ್ದಿದೆ.

ಹೂಡಿಕೆ ಚಟುವಟಿಕೆ ಬಗ್ಗೆ ಆತಂಕ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರಪ್ತು ಪ್ರಮಾಣ ಕಡಿಮೆ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇನ್ನು ಹೂಡಿಕೆ ಚಟುವಟಿಕೆ ಕಡಿಮೆ ಆಗುವ ಕುರಿತು ಚಿಂತೆ ಇದೆ. ಏಪ್ರಿಲ್ ಎರಡರಿಂದ ನಾಲ್ಕನೇ ತಾರೀಕಿನ ತನಕ ನಡೆದ ಪರಿಶೀಲನಾ ಸಭೆಯ ಮುಖ್ಯಾಂಶಗಳನ್ನು ಬಿಡುಗಡೆ ಮಾಡಿದ್ದು, ಅದು ಕೂಡ ಷೇರು ಪೇಟೆ ಮೇಲೆ ಪರಿಣಾಮ ಬೀರಿದೆ.

ಯೆಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ನ ಷೇರುಗಳು ಇಳಿಕೆ ಆಗಿದ್ದರಿಂದ ನಿಫ್ಟಿ ಬ್ಯಾಂಕ್ ಸೂಚ್ಯಂಕವು ಇಳಿಕೆ ಕಂಡಿದೆ. ಕಳೆದ ವಾರ ಸಾರ್ವಕಾಲಿಕ ಏರಿಕೆ ದಾಖಲಿಸಿದ ಬ್ಯಾಂಕ್ ನಿಫ್ಟಿ, ಆ ನಂತರ 30,500 ಅಂಶಗಳಲ್ಲಿ ಸ್ಥಿರತೆ ಕಾಣುವಲ್ಲಿ ವಿಫಲವಾಗಿ, ಇಳಿಕೆ ಕಂಡಿದ್ದರ ಫಲಿತಾಂಶವೇ ಇಂದಿನ ಕುಸಿತ ಎನ್ನಬಹುದು.

 

ಸಾರ್ವಕಾಲಿಕ ಗರಿಷ್ಠ ಎತ್ತರಕ್ಕೆ ಏರಿದರೂ ಷೇರು ಪೇಟೆ, ಬಂಡವಾಳ ಏಕಿಷ್ಟೆ?

ಸಾರ್ವಕಾಲಿಕ ದಾಖಲೆ ಬರೆದ ನಿಫ್ಟಿಯು ತಾಂತ್ರಿಕ ಬೆಂಬಲ ನೀಡುವ ಅಂಶವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದು, ಹೂಡಿಕೆದಾರರಲ್ಲಿ ಮಾರಾಟದ ಮನಸ್ಥಿತಿಯನ್ನು ತಂದಿದೆ. ಹೀಗೆ ವಿವಿಧ ಅಂಶಗಳು ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ.

English summary

Sensex falls below 39 thousand mark; here are the factors dragging market

The BSE Sensex plunged over 300 points in the early trade on Monday (April 22) dragging itself below 39,000 weighed down by muted global cues, rise in crude oil prices, growth concerns, and mixed March quarter results. Nifty also slipped below its crucial support at 11,700. For bulls to remain in charge, the index should stay above 11,550.
Story first published: Monday, April 22, 2019, 15:17 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more