ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರಿಗೆ ಗುಡ್ ನ್ಯೂಸ್! ಟ್ರಾಯ್ ನಿಂದ ಆಪರೇಟರ್ ಗಳಿಗೆ ಖಡಕ್ ಎಚ್ಚರಿಕೆ?

ಭಾರತೀಯ ದೂರ ಸಂಪರ್ಕ ನಿಯಂತ್ರಕ (ಟ್ರಾಯ್‌) ಸಂಸ್ಥೆಯು ಹೊಸ ಶುಲ್ಕ ನೀತಿಯನ್ನು ಉಲ್ಲಂಘಿಸುತ್ತಿರುವ ಕೇಬಲ್‌ ಟಿವಿ ಮತ್ತು ಡಿಟಿಎಚ್ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಖಡಕ್ ಎಚ್ಚರಿಕೆ ನೀಡಿದೆ.

ಭಾರತೀಯ ದೂರ ಸಂಪರ್ಕ ನಿಯಂತ್ರಕ (ಟ್ರಾಯ್‌) ಸಂಸ್ಥೆಯು ಹೊಸ ಶುಲ್ಕ ನೀತಿಯನ್ನು ಉಲ್ಲಂಘಿಸುತ್ತಿರುವ ಕೇಬಲ್‌ ಟಿವಿ ಮತ್ತು ಡಿಟಿಎಚ್ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಖಡಕ್ ಎಚ್ಚರಿಕೆ ನೀಡಿದೆ.
ಕೇಬಲ್‌ ಟಿವಿ ಅಥವಾ ಡಿಟಿಎಚ್‌ ನಿರ್ವಾಹಕರರು ಗ್ರಾಹಕರಿಗೆ ಸೇವೆ ಒದಗಿಸುವ ಸಂದರ್ಭಗಳಲ್ಲಿ ಲೋಪವಾಗಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಯ್‌ ಅಧ್ಯಕ್ಷ ಆರ್‌.ಎಸ್‌. ಶರ್ಮಾ ಹೇಳಿದ್ದಾರೆ.
ಕೇಬಲ್, ಡಿಟಿಎಚ್ ಗ್ರಾಹಕರ ಹಿತಾಸಕ್ತಿ ವಿಷಯದಲ್ಲಿ ರಾಜಿಯಾಗುವುದಿಲ್ಲ. ಟ್ರಾಯ್ ಹೊಸ ನೀತಿಗೆ ಅನುಗುಣವಾಗಿ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಗ್ರಾಹಕರ ನಿರ್ವಹಣೆ ಮತ್ತು ಇತರೆ ಐಟಿ ವ್ಯವಸ್ಥೆಯ ಮಾಹಿತಿಗಳನ್ನು ಸದ್ಯದಲ್ಲಿಯೇ ಪರಾಮರ್ಶಿಸಲಾಗುವುದು ಎಂದು ಹೇಳಿದ್ದಾರೆ.

ಗ್ರಾಹಕರಿಂದ ದೂರು

ಗ್ರಾಹಕರಿಂದ ದೂರು

ಗ್ರಾಹಕರು ತಮಗಾಗುತ್ತಿರುವ ತೊಂದರೆ ಕುರಿತು ಅನೇಕ ಬಾರಿ ದೂರುಗಳನ್ನು ನೀಡಿದ್ದಾರೆ. ಕೇಬಲ್‌ ಟಿವಿ ಮತ್ತು ಡಿಟಿಎಚ್ ನಿರ್ವಾಹಕರು ಗ್ರಾಹಕರಿಗೆ ಚಾನೆಲ್‌ ಮತ್ತು ಶುಲ್ಕಗಳಲ್ಲಿ ಆಯ್ಕೆ ಅವಕಾಶ ನೀಡದೇ ಇರುವುದು ಹಾಗು ಸಾಫ್ಟ್‌ವೇರ್‌ಗಳ ಬಗೆಗೂ ದೂರು ನೀಡಲಾಗಿವೆ. ಕೇಬಲ್‌ ಟಿವಿ ಮತ್ತು ಡಿಟಿಎಚ್ ಗ್ರಾಹಕರ ಆಯ್ಕೆಗೆ ಅವಕಾಶ ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರೇ ನೀವೇನು ಮಾಡಬೇಕು?

ಶೋಕಾಸ್ ನೋಟಿಸ್

ಶೋಕಾಸ್ ನೋಟಿಸ್

ಟ್ರಾಯ್ ಈಗಾಗಲೇ ಕೆಲ ವಿತರಕರಿಗೆ ಶೋಕಾಸ್‌ ನೋಟಿಸ್‌ಗಳನ್ನು ಜಾರಿ ಮಾಡಿದೆ ಎಂದು ಶರ್ಮಾ ಹೇಳಿದ್ದಾರೆ. ನಿಯಮ ಪಾಲಿಸದೇ ಇರುವ 9 ಕಂಪನಿಗಳಿಗೆ ಸೂಚನೆಗಳನ್ನು ಹಾಗು 5 ಕಂಪನಿಗಳಿಗೆ ಶೋಕಾಸ್ ನೋಟಿಸ್ ರವಾನೆ ಮಾಡಿದೆ.

ಪ್ರಮುಖ ಕಂಪನಿಗಳಿಗೆ ನಿರ್ದೇಶನ

ಪ್ರಮುಖ ಕಂಪನಿಗಳಿಗೆ ನಿರ್ದೇಶನ

ಕಳೆದ ವಾರ ಜಿಟಿಪಿಎಲ್ ಹಾಥ್‌ವೇ, ಸಿಟಿ ನೆಟ್‌ವರ್ಕ್ಸ್‌ ಸೇರಿದಂತೆ ಸುಮಾರು ಆರು ಕೇಬಲ್‌ ಟಿವಿ ನಿರ್ವಾಹಕರು ಟ್ರಾಯ್ ನಿಯಮಗಳನ್ನು ಉಲ್ಲಂಘಿಸಿದ್ದು, ನಿಯಮ ಪಾಲಿಸಲು ಟ್ರಾಯ್‌ನಿಂದ ನಿರ್ದೇಶನ ನೀಡಲಾಗಿದೆ. ಫಾಸ್ಟ್‌ವೇ ಟ್ರಾನ್ಸ್‌ಮಿಷನ್‌, ಡೆನ್‌ ನೆಟ್‌ವರ್ಕ್ಸ್‌, ಇಂಡಸ್‌ಇಂಡ್‌ ಮೀಡಿಯಾ ಅಂಡ್ ಕಮ್ಯುನಿಕೇಷನ್ಸ್, ಹಾಥ್‌ವೇ ಡಿಜಿಟಲ್‌ ನಂತಹ ಸಂಸ್ಥೆಗಳಿಗೂ ಟ್ರಾಯ್‌ ಸೂಚನೆ ನೀಡಿದೆ.

ಗ್ರಾಹಕರ ಇಚ್ಛೆಯೇ ಅಂತಿಮ

ಗ್ರಾಹಕರ ಇಚ್ಛೆಯೇ ಅಂತಿಮ

ಡಿಟಿಎಚ್ ಮತ್ತು ಕೇಬಲ್‌ ಟಿವಿ ಆಪರೇಟರ್‌ಗಳು ಗ್ರಾಹಕರಿಗೆ ಇಂಥದ್ದೇ ಪ್ಯಾಕೇಜ್‌ ಅಥವಾ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಒತ್ತಡ ಮಾಡುವಂತಿಲ್ಲ. ಅಲ್ಲದೇ ಚಾನೆಲ್ ಗಳ ಆಯ್ಕೆಯಲ್ಲಿ ಗ್ರಾಹಕರ ಆಯ್ಕೆಯೇ ಅಂತಿಮ ಎಂದು ಟ್ರಾಯ್ ಸ್ಪಷ್ಟನೆ ನೀಡಿದೆ.

ಹಾಗಿದ್ದರೆ ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?

ಹಾಗಿದ್ದರೆ ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?

ಟ್ರಾಯ್ ಹೊಸ ನಿಯಮ ಕೇಬಲ್ ಹಾಗೂ ಡಿಟಿಹೆಚ್ ಮೇಲೆ ಪ್ರಭಾವ ಬೀರಲಿದೆ. ಕೇಬಲ್ ಟಿವಿ ಮತ್ತು ಡಿಟಿಎಚ್ ಅಪರೇಟರ್ ಗಳಿಗೆ ಅನ್ವಯವಾಗುವಂತೆ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಬದಲಾಗಿ ಗ್ರಾಹಕರಿಗೆ ಟಿವಿ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿದೆ. ಗ್ರಾಹಕರು ತಾವು ಇಷ್ಟಪಡುವ ಚಾನೆಲ್ ಗಳನ್ನು ನೋಡಬಹುದು ಹಾಗು ಅವುಗಳಿಗೆ ಮಾತ್ರ ಶುಲ್ಕ ಕಟ್ಟಬಹುದು. ಇದಕ್ಕಾಗಿ ಎಲ್ಲಾ ಪ್ರಸಾರಕರು ತಮ್ಮ ಚಾನೆಲ್ ಗಳನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ.

ಬೇಸಿಕ್ ಪ್ಯಾಕ್ 100 ಚಾನೆಲ್ ಉಚಿತ

ಬೇಸಿಕ್ ಪ್ಯಾಕ್ 100 ಚಾನೆಲ್ ಉಚಿತ

ಮಾರ್ಚ್ ೩೧ರ ಒಳಗೆ ಗ್ರಾಹಕರು ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಹಕರಿಗೆ 100 ಏರ್ ಚಾನೆಲ್ ಗಳಿಗೆ ಉಚಿತವಾಗಿ ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಲಾಗುತ್ತದೆ. 100 ರ ನಂತರ, ಗ್ರಾಹಕರು ಆಯ್ಕೆ ಮಾಡುವ ಚಾನಲ್ ಆಧರಿಸಿ ಪಾವತಿಸಬೇಕಾಗುತ್ತದೆ. ಬೇಸಿಕ್ ಪ್ಯಾಕೇಜ್ (Base pack) ನಲ್ಲಿ ಮಾಸಿಕ ರೂ. 130 ಶುಲ್ಕ ಪಾವತಿಸಿ 100 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಇದಕ್ಕೆ ಶೇ.18ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ.

ಚಾನೆಲ್ ದರಪಟ್ಟಿ

ಚಾನೆಲ್ ದರಪಟ್ಟಿ

ಏಪ್ರಿಲ್ ಒಂದರಿಂದ ಜಾರಿಯಾಗಲಿರುವ ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳ ಪ್ರಕಾರ, ಕನ್ನಡದ ಪೇಯ್ಡ್ ಚಾನೆಲ್ ಗಳ ದರಪಟ್ಟಿ ಇಂತಿದೆ.
ಕಲರ್ಸ್ ಕನ್ನಡ ರೂ. 19
ಸ್ಟಾರ್ ಸುವರ್ಣ ರೂ. 19
ನ್ಯೂಸ್ 18 ಕನ್ನಡ 25 ಪೈಸೆ
ಚಿಂಟು ಟಿವಿ ಕನ್ನಡ ರೂ. 6
ಜೀ ಕನ್ನಡ ರೂ. 19
ಉದಯ ಕಾಮಿಡಿ ರೂ. 6
ಉದಯ ಮೂವೀಸ್ ರೂ. 16
ಉದಯ ಮ್ಯೂಸಿಕ್ ರೂ. 6
ಉದಯ ಟಿವಿ ರೂ. 17
ಸುವರ್ಣ ಪ್ಲಸ್ ಚಾನಲ್ ರೂ. 5
ಡಿಸ್ಕವರಿ ಚಾನೆಲ್ ಗೆ ರೂ. 4
ಡಿಸ್ಕವರಿ ಕಿಡ್ಸ್ ಚಾನೆಲ್ 3 ರೂ.
ಅನಿಮಲ್ ಪ್ಲಾನೆಟ್ ರೂ. 24
ಸ್ಟಾರ್ ಸ್ಪೋರ್ಟ್ಸ್ ಕನ್ನಡ ರೂ. 19
ಸೋನಿ ಇ.ಎಸ್.ಪಿ.ಎನ್. ಹೆಚ್ಡಿ ರೂ. 7
ಸೋನಿ ಇ.ಎಸ್.ಪಿ.ಎನ್ ರೂ. 5
ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ರೂ. 4

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+