ಇರಾನ್ ನಿಂದ ತೈಲ ಆಮದು ಸಂಪೂರ್ಣ ಸ್ಥಗಿತ! ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆ..

ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಭಾರತ ಮತ್ತು ಇತರೆ ಏಳು ದೇಶಗಳಿಗೆ ಅಮೆರಿಕ ಸೂಚನೆ ನೀಡಿದೆ.

ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಭಾರತ ಮತ್ತು ಇತರೆ ಏಳು ದೇಶಗಳಿಗೆ ಅಮೆರಿಕ ಸೂಚನೆ ನೀಡಿದೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಮೇ ಒಂದರ ನಂತರ ವಿನಾಯಿತಿ ಮುಂದುವರಿಸದಿರುವ ತೀರ್ಮಾನವನ್ನು ಕೈಗೊಂಡಿದ್ದಾರೆ.
ಕಳೆದ ವರ್ಷ ಅಮೆರಿಕವು ಆಮದು ನಿಷೇಧಕ್ಕೆ 180 ದಿನಗಳ ವಿನಾಯಿತಿಯನ್ನು ನೀಡಿತ್ತು. ಇದೀಗ ಈ ಗಡುವು ಮೇ 1ಕ್ಕೆ ಮುಗಿಯುತ್ತಿದ್ದು, ಇರಾನ್‌ನಿಂದ ಸಂಪೂರ್ಣ ಆಮದು ಸ್ಥಗಿತಕ್ಕೆ ಅಮೆರಿಕ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ.

ಭಾರತದ ಪ್ರತಿಕ್ರಿಯೆ ಏನು?

ಭಾರತದ ಪ್ರತಿಕ್ರಿಯೆ ಏನು?

ಅಮೆರಿಕದ ಈ ನಿರ್ಣಯಕ್ಕೆ ಪ್ರತಿಕ್ರಿಯಿಸಿರುವ ಭಾರತ, ಅಮೆರಿಕದ ನಿರ್ಬಂಧದಿಂದ ಅಷ್ಟೊಂದು ಪ್ರಮಾಣದಲ್ಲಿ ತೊಂದರೆಯಾಗುವುದಿಲ್ಲ. ಅಲ್ಲದೇ ಪರ್ಯಾಯ ಮೂಲಗಳನ್ನು ಭಾರತ ಹೊಂದಿದೆ ಎಂದು ಪ್ರತಿಕ್ರಿಯಿಸಿದೆ.
ಇರಾನ್‌ ದೇಶದ ಅಣು ನೀತಿಯನ್ನು ವಿರೋಧಿಸಿ ಇರಾನ್ ನಿಂದ ತೈಲವನ್ನು ಖರೀದಿಸದಂತೆ 2018ರ ನವೆಂಬರ್ 5 ರಂದು ಅಮೆರಿಕ ಜಗತ್ತಿನ ದೇಶಗಳಿಗೆ ನಿರ್ಬಂಧ ಹೇರಿತ್ತು. ಆದಾಗ್ಯೂ ಭಾರತ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ತೈವಾನ್‌, ಟರ್ಕಿ, ಇಟಲಿ ಮತ್ತು ಗ್ರೀಸ್‌ ಸೇರಿದಂತೆ 8 ದೇಶಗಳಿಗೆ 180 ದಿನಗಳ ವಿನಾಯಿತಿಯನ್ನು ನೀಡಿತ್ತು. ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರಿಗೆ ಗುಡ್ ನ್ಯೂಸ್! ಟ್ರಾಯ್ ನಿಂದ ಆಪರೇಟರ್ ಗಳಿಗೆ ಖಡಕ್ ಎಚ್ಚರಿಕೆ?

ತೈಲ ಖರೀದಿಯಲ್ಲಿ ಭಾರತ 2ನೇ ದೊಡ್ಡ ದೇಶ

ತೈಲ ಖರೀದಿಯಲ್ಲಿ ಭಾರತ 2ನೇ ದೊಡ್ಡ ದೇಶ

ಇರಾನ್‌ನಿಂದ ಹೆಚ್ಚಿನ ಇಂಧನ ಖರೀದಿಸುವ ಜಗತ್ತಿನ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. 2017-18ನೇಸಾಲಿನಲ್ಲಿ ದಿನಕ್ಕೆ 4.52 ಲಕ್ಷ ಬ್ಯಾರೆಲ್‌ ತೈಲ ಖರೀದಿಸಿದ್ದ ಭಾರತ ಖರೀದಿ ಪ್ರಮಾಣ ಕಡಿಮೆ ಮಾಡುವುದಾಗಿ ಒಪ್ಪಿಕೊಂಡಿತ್ತು.

ಭಾರತಕ್ಕೆ ತೈಲ ಅಮದು ಸ್ಥಗಿತದಿಂದ ತೊಂದರೆಯಾಗದೆ?

ಭಾರತಕ್ಕೆ ತೈಲ ಅಮದು ಸ್ಥಗಿತದಿಂದ ತೊಂದರೆಯಾಗದೆ?

ನಮ್ಮ ಅಗತ್ಯಕ್ಕೆ ತಕ್ಕಷ್ಟು ತೈಲ ಆಮದು ಮಾಡಿಕೊಳ್ಳಲು ಸಾಕಷ್ಟು ಆಯ್ಕೆಗಳಿದ್ದು, ಅನೇಕ ತೈಲ ಸರಬರಾಜುದಾರರು ಲಭ್ಯವಿದ್ದಾರೆ. ಇರಾನ್‌ನಿಂದ ಆಮದು ನಿಲ್ಲಿಸಿದಾಗ ಆಗುವ ಕೊರತೆಯನ್ನು ಬೇರೆ ದೇಶಗಳಿಂದ ತುಂಬಿಕೊಳ್ಳಲಿದ್ದೇವೆ ಎಂದು ಭಾರತ ಸರಕಾರ ಹೇಳಿದೆ.
ಆದರೆ ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು.
ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+