ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಗೆ ಜಾರಿ ನಿರ್ದೇಶನಾಲದಿಂದ ಸಮನ್ಸ್

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಮತ್ತು ಸೋದರ ಸಂಬಂಧಿ ರಾಜೀವ್ ಕೊಚ್ಚಾರ್ ಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೊಸ ಸಮನ್ಸ್ ಜಾರಿ ಮಾಡಿದೆ.

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಮತ್ತು ಸೋದರ ಸಂಬಂಧಿ ರಾಜೀವ್ ಕೊಚ್ಚಾರ್ ಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೊಸ ಸಮನ್ಸ್ ಜಾರಿ ಮಾಡಿದೆ.

ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಗೆ ಜಾರಿ ನಿರ್ದೇಶನಾಲದಿಂದ ಸಮನ್ಸ

ಮೇ 3 ರಂದು ವಿಚಾರಣೆಗೆ ಹಾಜರಾಗುವಂತೆ ಚಂದಾ ಕೊಚ್ಚಾರ್ ಅವರಿಗೆ, ಏಪ್ರಿಲ್ 30ರಂದು ದೀಪಕ್‌ ಮತ್ತು ಅವರ ಸಹೋದರ ರಾಜೀವ್‌ ವಿಚಾರಣೆಗೆ ಹಾಜರಿರುವಂತೆ ಸಮನ್ಸ್‌ ನೀಡಲಾಗಿದೆ.
ಕೇಂದ್ರೀಯ ತನಿಖಾ ವರದಿಯ (ಸಿಬಿಐ) ಪ್ರಕರಣದ ಆಧಾರದ ಮೇಲೆ ಮನಿ ಲಾಂಡರಿಂಗ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
2009ರ ಜೂನ್‌ನಿಂದ 2011ರ ಅಕ್ಟೋಬರ್ ನಡುವಿನ ಅವಧಿಯಲ್ಲಿ ವೀಡಿಯೋಕಾನ್ ಅವ್ಯವಹಾರ ನಡೆದಿತ್ತು. ವೀಡಿಯೋಕಾನ್ ಸಂಸ್ಥೆಗೆ ರೂ. 1,875 ಕೋಟಿ ಮೌಲ್ಯದ ಆರು ಸಾಲಗಳನ್ನು ಅಕ್ರಮವಾಗಿ ವಿತರಿಸಿದ ಪ್ರಕರಣದಲ್ಲಿ ಚಂದಾ ಕೊಚ್ಚಾರ್ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಐಸಿಐಸಿಐ ಬ್ಯಾಂಕ್‌ನಿಂದ ಕಾರ್ಪೊರೇಟ್‌ ಗ್ರೂಪ್‌ಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮಂಜೂರು ಮಾಡುವಾಗ ಅಕ್ರಮ ನಡೆದಿದೆ.
ಕಾಳಧನ ನಿಗ್ರಹ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯ ಆರೋಪಿಗಳ ಹೇಳಿಕೆಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಲಿದೆ. ಇದೇ ಸಂದರ್ಭದಲ್ಲಿ ವೈಯಕ್ತಿಕ ಮತ್ತು ಕಚೇರಿಗೆ ಸಂಬಂಧಿಸಿದ ಹಣ ನಿರ್ವಹಣೆಯ ದಾಖಲೆಗಳನ್ನು ತರುವಂತೆ ಕೂಡ ಸೂಚಿಸಲಾಗಿದೆ.
ಚಂದಾ ಕೊಚ್ಚಾರ್‌, ದೀಪಕ್ ಕೊಚ್ಚಾರ್ ಮತ್ತು ವಿಡಿಯೊಕಾನ್‌ ಗ್ರೂಪ್‌ನ ವೇಣುಗೋಪಾಲ್‌ ಧೂತ್‌ಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ದಾಳಿ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+