For Quick Alerts
ALLOW NOTIFICATIONS  
For Daily Alerts

ಜಿಯೋ ಉಲಾಲಾ.. ಕೇವಲ 600ಕ್ಕೆ ಬ್ರಾಡ್‌ಬ್ಯಾಂಡ್‌, ಲ್ಯಾಂಡ್ ಲೈನ್, ಟಿವಿ ಕಾಂಬೋ ಆಫರ್ 1 ವರ್ಷ ಉಚಿತ

ಅಗ್ಗದ ದರದಲ್ಲಿ 4ಜಿ ಸೇವೆಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರಿಲಯನ್ಸ್ ಜಿಯೋ ಇದೀಗ ಹೈ ಸ್ಪೀಡ್‌ ಬ್ರಾಡ್‌ ಬ್ಯಾಂಡ್‌, ಲ್ಯಾಂಡ್ ಲೈನ್ ಹಾಗೂ ಇಂಟರ್‌ನೆಟ್‌ ಟೀವಿ ನೀಡಲು ಸಜ್ಜಾಗಿದೆ.

|

ಟೆಲಿಕಾಂ ವಲಯಕ್ಕೆ ಜಿಯೋ ಪ್ರವೇಶಿಸಿದ ನಂತರ ಭಾರೀ ಪ್ರಮಾಣದಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಉಚಿತ ಮತ್ತು ಅಗ್ಗದ ಕೊಡುಗೆಗಳ ಮೂಲಕ ಎಂಟ್ರಿ ಕೊಟ್ಟ ಜಿಯೋ ನಿಧಾನವಾಗಿ ಟೆಲಿಕಾಂನ ಎಲ್ಲಾ ಭಾಗಗಳಿಗೂ ವ್ಯಾಪಿಸಿಕೊಳ್ಳುತ್ತಿದೆ. ಜಿಯೋ ಧನ್ ಧನಾ ಧನ್ ನಿಂದ ಹಿಡಿದು ಇತ್ತೀಚಿನ ಜಿಯೋ ಗಿಗಾಫೈಬರ್ ವರೆಗೆ ತನ್ನದೇ ಸ್ವಾಮ್ಯವನ್ನು ಹೊಂದಿದೆ!

 

ಅಗ್ಗದ ದರದಲ್ಲಿ 4ಜಿ ಸೇವೆಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರಿಲಯನ್ಸ್ ಜಿಯೋ ಇದೀಗ ಹೈ ಸ್ಪೀಡ್‌ ಬ್ರಾಡ್‌ ಬ್ಯಾಂಡ್‌, ಲ್ಯಾಂಡ್ ಲೈನ್ ಹಾಗೂ ಇಂಟರ್‌ನೆಟ್‌ ಟೀವಿ ನೀಡಲು ಸಜ್ಜಾಗಿದೆ.

ಕೇವಲ 600ಕ್ಕೆ ಭಾರೀ ಆಫರ್

ಕೇವಲ 600ಕ್ಕೆ ಭಾರೀ ಆಫರ್

ಹೌದು. ಜಿಯೋ ಗಿಗಾಫೈಬರ್ ತಿಂಗಳಿಗೆ ಕೇವಲ ರೂ. 600ಕ್ಕೆ ಹೈ ಸ್ಪೀಡ್‌ ಬ್ರಾಡ್‌ಬ್ಯಾಂಡ್‌, ಲ್ಯಾಂಡ್ ಲೈನ್ ಹಾಗೂ ಟಿವಿ ಕಾಂಬೋ ಆಫರ್ ಒದಗಿಸಲಿದೆ.
ಹೆಚ್ಚುವರಿ ವ್ಯವಸ್ಥೆ ಹಾಗೂ ಸ್ಮಾರ್ಟ್ ಹೋಮ್ ನೆಟ್‌ವರ್ಕ್‌ ಗೆ ಕನಿಷ್ಠ 40 ಸಾಧನಗಳ ಸಂಪರ್ಕಕ್ಕೆ ತಿಂಗಳಿಗೆ ತಲಾ ರೂ. 1,000 ಅಧಿಕ ಪಾವತಿಸಬೇಕಾಗುತ್ತದೆ livemint.com ವರದಿ ಮಾಡಿದೆ.

ಒಂದು ವರ್ಷ ಉಚಿತ ಸೇವೆ

ಒಂದು ವರ್ಷ ಉಚಿತ ಸೇವೆ

100 ಮೆಗಾಬೈಟ್‌ ವೇಗದಲ್ಲಿ 100 ಜಿಜಿ ಡೇಟಾ ನೀಡುವ ಯೋಜನೆಯನ್ನು ದೆಹಲಿ ಮತ್ತು ಮುಂಬೈನಲ್ಲಿ ಜಿಯೋ ಫೈಲಟ್ ಟೆಸ್ಟಿಂಗ್ ಗಿಗಾಫೈಬರ್ (ಪ್ರಾಯೋಗಿಕ ಪರೀಕ್ಷೆ) ಒಳಪಡಿಸಲಾಗುತ್ತಿದೆ. ರೂಟರ್ ರೂ. 4,500 ಶುಲ್ಕ ಹೊರತುಪಡಿಸಿ ಉಳಿದಲ್ಲವೂ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದೆ. ಈ ಸೇವೆಗೆ ಮುಂದಿನ ಮೂರು ತಿಂಗಳಿನಲ್ಲಿ ಲ್ಯಾಂಡ್ ಲೈನ್ ಮತ್ತು ಕಾಂಬೋ ಟೀವಿ ಆಫರ್ ಸೇರ್ಪಡೆ ಮಾಡಲಾಗುತ್ತದೆ. ಒಂದು ವರ್ಷಗಳ ಕಾಲ ಉಚಿತವಾಗಿ ಈ ಸೇವೆಯನ್ನು ನೀಡಲಾಗುತ್ತದೆ.

40-45 ಉಪಕರಣಗಳಿಗೆ ಸಂಪರ್ಕ
 

40-45 ಉಪಕರಣಗಳಿಗೆ ಸಂಪರ್ಕ

ಬ್ರಾಡ್‌ಬ್ಯಾಂಡ್‌, ಲ್ಯಾಂಡ್ ಲೈನ್ ಹಾಗೂ ಟಿವಿ ಕಾಂಬೋ ಮೂರು ವಿಧದ ಸೇವೆಗಳು ಆಫ್ಟಿಕಲ್‌ ನೆಟ್‌ವರ್ಕ್ ಟರ್ಮಿನಲ್‌ (ಒಎನ್‌ಟಿ) ಬಾಕ್ಸ್‌ ರೂಟರ್‌ನ ಮೂಲಕ ಲಭ್ಯವಾಗಲಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿವಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಸ್ಮಾರ್ಟ್‌ ಉಪಕರಣಗಳು ಸೇರಿದಂತೆ 40-45 ಉಪಕರಣಗಳಿಗೆ ಇದನ್ನು ಸಂಪರ್ಕಿಸಬಹುದಾಗಿದೆ.

ಕಾಂಬೊ ಟಿವಿ ಸೌಲಭ್ಯ

ಕಾಂಬೊ ಟಿವಿ ಸೌಲಭ್ಯ

ಜಿಯೋ ಗಿಗಾಫೈಬರ್ ಒದಗಿಸುವ ಕಾಂಬೋ ಟಿವಿ ಮೂಲಕ 600 ಚಾನೆಲ್ ಗಳು ಲಭ್ಯವಾಗಲಿವೆ. ಲ್ಯಾಂಡ್ ಲೈನ್ ದೂರವಾಣಿಯಲ್ಲಿ ಅನಿಯಮಿತ ಕರೆ ಸೌಲಭ್ಯ ಮತ್ತು 100 ಮೆಗಾಬೈಟ್‌ ವೇಗದಲ್ಲಿ ಬ್ರಾಡ್‌ ಬ್ರ್ಯಾಂಡ್‌ ಸೇವೆ ಸಿಗಲಿದೆ ಎಂದು ತಿಳಿಸಲಾಗಿದೆ.

ಜಿಯೋ ಗಿಗಾಫೈಬರ್ ಅಡಿ ಏನು ಸಿಗಲಿದೆ?

ಜಿಯೋ ಗಿಗಾಫೈಬರ್ ಅಡಿ ಏನು ಸಿಗಲಿದೆ?

- ಜಿಯೋ ಗಿಗಾಫೈಬರ್ 100 ಗಿಗಾಬೈಟ್ (GB) ಡೇಟಾವನ್ನು ಪ್ರತಿ ಸೆಕೆಂಡಿಗೆ 100 ಮೆಗಾಬೈಟ್(mbps) ವೇಗದಲ್ಲಿ ಉಚಿತವಾಗಿ ಒದಗಿಸುತ್ತದೆ.
- ಮುಂದಿನ ಮೂರು ತಿಂಗಳಲ್ಲಿ ದೂರವಾಣಿ ಮತ್ತು ದೂರದರ್ಶನ ಸೇವೆಗಳನ್ನು ಸೇರಿಸಲಾಗುತ್ತದೆ.
- ಈ ಮೂರು ಸೇವೆಗಳು ಒಂದು ವರ್ಷದವರೆಗೆ ಉಚಿತವಾಗಿ ಸಿಗಲಿವೆ.
ರಿಲಯನ್ಸ್ ಜಿಯೊ ಗಿಗಾಫೈಬರ್ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿವಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ ಹಾಗೂ ಸ್ಮಾರ್ಟ್‌ ಉಪಕರಣಗಳು ಸೇರಿದಂತೆ 40-45 ಉಪಕರಣಗಳಿಗೆ ಸಂಪರ್ಕಿಸುವ ಅವಕಾಶ ಕಲ್ಪಿಸಿದೆ.

ಜಿಯೋ ಗಿಗಾಫೈಬರ್ ಅಡಿ ಏನು ಸಿಗಲಿದೆ?

ಜಿಯೋ ಗಿಗಾಫೈಬರ್ ಅಡಿ ಏನು ಸಿಗಲಿದೆ?

- ಜಿಯೋ ಗಿಗಾಫೈಬರ್ 100 ಗಿಗಾಬೈಟ್ (GB) ಡೇಟಾವನ್ನು ಪ್ರತಿ ಸೆಕೆಂಡಿಗೆ 100 ಮೆಗಾಬೈಟ್(mbps) ವೇಗದಲ್ಲಿ ಉಚಿತವಾಗಿ ಒದಗಿಸುತ್ತದೆ.
- ಮುಂದಿನ ಮೂರು ತಿಂಗಳಲ್ಲಿ ದೂರವಾಣಿ ಮತ್ತು ದೂರದರ್ಶನ ಸೇವೆಗಳನ್ನು ಸೇರಿಸಲಾಗುತ್ತದೆ.
- ಈ ಮೂರು ಸೇವೆಗಳು ಒಂದು ವರ್ಷದವರೆಗೆ ಉಚಿತವಾಗಿ ಸಿಗಲಿವೆ.
ರಿಲಯನ್ಸ್ ಜಿಯೊ ಗಿಗಾಫೈಬರ್ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿವಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ ಹಾಗೂ ಸ್ಮಾರ್ಟ್‌ ಉಪಕರಣಗಳು ಸೇರಿದಂತೆ 40-45 ಉಪಕರಣಗಳಿಗೆ ಸಂಪರ್ಕಿಸುವ ಅವಕಾಶ ಕಲ್ಪಿಸಿದೆ. ಜಿಯೋ ಧಮಾಕಾ! ಪ್ರಿವ್ಯೂ ಆಫರ್ ನಲ್ಲಿ 3 ತಿಂಗಳು 300 GB ಉಚಿತ ಡೇಟಾ ಪಡೆಯಿರಿ

ಜಿಯೋ ಲ್ಯಾಂಡ್ ಲೈನ್ ಪ್ರಯೋಜನಗಳು

ಜಿಯೋ ಲ್ಯಾಂಡ್ ಲೈನ್ ಪ್ರಯೋಜನಗಳು

ಲ್ಯಾಂಡ್ ಲೈನ್ ​​ಅನಿಯಮಿತ ಕರೆ ಸೌಲಭ್ಯದೊಂದಿಗೆ ಸಿಗಲಿದೆ. ದೂರದರ್ಶನ ಚಾನೆಲ್ ಗಳನ್ನು ಇಂಟರ್ನೆಟ್ ಮೂಲಕ (ಇಂಟರ್ನೆಟ್ ಪ್ರೊಟೊಕಾಲ್ ಟೆಲಿವಿಷನ್) ಒದಗಿಸಲಾಗುತ್ತದೆ.
ಅಲ್ಟ್ರಾ ಎಚ್ಡಿ ಎಂಟರ್ಟೆನ್ಮೆಂಟ್, ಧ್ವನಿ-ಸಕ್ರಿಯ ವರ್ಚುವಲ್ ಅಸಿಸ್ಟಂಟ್, ಮಲ್ಟಿ-ಪಾರ್ಟಿ ವೀಡಿಯೋ ಕಾನ್ಫರೆನ್ಸಿಂಗ್, ವರ್ಚುವಲ್ ರಿಯಾಲಿಟಿ ಗೇಮಿಂಗ್ ಮತ್ತು ಶಾಪಿಂಗ್ ಮತ್ತು ಸ್ಮಾರ್ಟ್ ಹೋಮ್ ಸೋಲುಷನ್ಸ್ ವೈಶಿಷ್ಟ್ಯಗಳನ್ನು ಜಿಯೋ ಗಿಗಾಫೈಬರ್ ಒದಗಿಸುತ್ತದೆ.

ನೋಂದಣಿ ಪ್ರಕ್ರಿಯೆ

ನೋಂದಣಿ ಪ್ರಕ್ರಿಯೆ

ಕಳೆದ ವರ್ಷ ಆಗಸ್ಟ್ ‌ನಲ್ಲಿಯೇ ಜಿಯೋ ಗಿಗಾಫೈಬರ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಸೇವೆ ಪಡೆಯಲು ಆಸಕ್ತರಾಗಿರುವವರು ನೋಂದಣಿಗಾಗಿ gigafiber.jio.com/ ಭೇಟಿ ನೀಡಬಹುದು. ಈ ಸೇವೆಯನ್ನು 1,600 ನಗರಗಳಿಗೆ ವಿಸ್ತರಿಸಲಾಗುತ್ತದೆ ಎಂದು ರಿಲಯನ್ಸ್ ಜಿಯೋ ಘೋಷಿಸಿದೆ.

English summary

Jio's GigaFiber to offer broadband, landline, TV combo for Rs 600 a month

Reliance Jio GigaFiber will offer a broadband-landline-TV combo service for ₹600 a month.
Story first published: Wednesday, April 24, 2019, 10:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X