For Quick Alerts
ALLOW NOTIFICATIONS  
For Daily Alerts

ಟಿಕ್ ಟಾಕ್ ಬ್ಯಾನ್: ಕಂಪನಿಗೆ 4.5 ಕೋಟಿ ನಷ್ಟ, ಉದ್ಯೋಗಿಗಳಿಗೆ ಅಪಾಯ

|

ಚೀನಾದ ಬೈಟ್ ಡ್ಯಾನ್ಸ್ ಟೆಕ್ನಾಲಜಿ ಕಂಪನಿಯ ಖ್ಯಾತ ವಿಡಿಯೋ ಆಪ್‍ ಟಿಕ್‍ ಟಾಕ್ ನ್ನು ಭಾರತ ಸರ್ಕಾರ ನಿಷೇಧಿಸಿರುವುದರಿಂದ ಕಂಪನಿಗೆ ದಿನಕ್ಕೆ ರೂ. 4.5 ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ.

ಟಿಕ್‍ ಟಾಕ್ ಆಪ್ ನಿಷೇಧದ ಬಳಿಕ ಕಂಪನಿಗೆ 250 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭಯದ ಸ್ಥಿತಿಯಲ್ಲಿದ್ದಾರೆ.

ಟಿಕ್ ಟಾಕ್ ಬ್ಯಾನ್: ಕಂಪನಿಗೆ  4.5 ಕೋಟಿ ನಷ್ಟ, ಉದ್ಯೋಗಿಗಳಿಗೆ ಅಪಾಯ

 

ಟಿಕ್‍ ಟಾಕ್ ಆಪ್‍ ನಿಷೇಧಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಬೈಟ್‍ ಡ್ಯಾನ್ಸ್ ಟೆಕ್ನಾಲಜಿ ಕಂಪನಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಆಪ್ ನಿಷೇಧದ ಬಳಿಕ ಕಂಪನಿ ನಷ್ಟವಾಗಿದೆ. ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ನಿರ್ಮಾಣವಾಗಿದೆ. ಅಲ್ಲದೆ 20 ಲಕ್ಷ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ವಾದ ಮಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಟಿಕ್‍ ಟಾಕ್ ನಿಷೇಧ ಕುರಿತಂತೆ ವಿಚಾರಣೆ ನಡೆಸಿದ್ದು, ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್‍ ಹೈಕೋರ್ಟ್‍ ಗೆ ವರ್ಗಾವಣೆ ಮಾಡಿದೆ.

ಟಿಕ್‍ ಟಾಕ್ ಆಪ್ ಕುರಿತು ಅರ್ಜಿಯಲ್ಲಿರುವ ತಕರಾರುಗಳಿಗೆ ಬೈಟ್ ಡ್ಯಾನ್ಸ್ ಕಂಪನಿ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಏಪ್ರಿಲ್ 24 ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ ಆಗ ಆಪ್‍ ಬ್ಯಾನ್ ಕುರಿತಂತೆ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.

ಟಿಕ್ ಟಾಕ್ ಅಪ್ಲಿಕೇಶನ್‍ ನಲ್ಲಿ ಆಕ್ಷೇಪಾರ್ಹ ವಿಡಿಯೋಗಳು ಪ್ರಸಾರವಾಗುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಇದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಟಿಕ್ ಟಾಕ್ ನಿಷೇಧಿಸುವಂತೆ ಏಪ್ರಿಲ್ 3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ತಡೆ ನೀಡುವಂತೆ ಬೈಟ್‍ ಡ್ಯಾನ್ಸ್ ಟೆಕ್ನಾಲಜಿ ಕಂಪನಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಿಯೋ ಉಲಾಲಾ.. ಕೇವಲ 600ಕ್ಕೆ ಬ್ರಾಡ್‌ಬ್ಯಾಂಡ್‌, ಲ್ಯಾಂಡ್ ಲೈನ್, ಟಿವಿ ಕಾಂಬೋ ಆಫರ್ 1 ವರ್ಷ ಉಚಿತ

Read more about: money business
English summary

TikTok ban in India causing $500,000 daily loss, job risks, says Bytedance

Indian government's ban on Chinese video app TikTok is causing "financial losses" of up to $500,000 a day for its developer, Beijing Bytedance Technology Co.
Story first published: Wednesday, April 24, 2019, 16:16 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more