ವೋಡಾಫೋನ್ ಹೊಸ ಪ್ರಿಪೇಡ್ ಪ್ಲಾನ್ ಘೋಷಿಸಿದ್ದು, ಲೆಕ್ಕಾಚಾರದ ಬಳಕೆದಾರರಿಗೆ ಇದು ಸೂಕ್ತ. ಇದು ರೂ. 139ರ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ.
ಜಿಯೋ ದಿನದಿಂದ ದಿನಕ್ಕೆ ತನ್ನ ಗ್ರಾಹಕರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಇನ್ನೊಂದೆಡೆ ಏರ್ಟೆಲ್, ವೋಡಾಫೋನ್ ಕಂಗಾಲಾಗಿದ್ದು, ಜಿಯೋ ಜೊತೆಗೆ ಜಿದ್ದಾಜಿದ್ದಿಗೆ ಬಿದ್ದಿವೆ! ತನ್ನ ಗ್ರಾಹಕರನ್ನು ಸೆಳೆಯುವುದು ಏರ್ಟೆಲ್, ವೋಡಾಫೋನ್ ಸಂಸ್ಥೆಗಳಿಗೆ ಸವಾಲಿನ ಕೆಲಸವಾಗುತ್ತಿದೆ. ಇದೀಗ ವೋಡಾಫೋನ್ ಹೊಸ ಪ್ರಿಪೇಡ್ ಪ್ಲಾನ್ ಘೋಷಿಸಿದ್ದು, ಲೆಕ್ಕಾಚಾರದ ಬಳಕೆದಾರರಿಗೆ ಇದು ಸೂಕ್ತ. ಇದು ರೂ. 139ರ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ.
ರೂ. 139ರ ಪ್ರಿಪೇಡ್ ಪ್ಲಾನ್
ಹೊಸದಾಗಿ ಬಿಡುಗಡೆಯಾದ ರೂ. 139 ಪ್ರಿಪೇಡ್ ಯೋಜನೆಯು ಬಳಕೆದಾರರಿಗೆ 5 ಜಿಬಿ ಡೇಟಾ ಪ್ರಯೋಜನವನ್ನು ನೀಡುತ್ತದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಯಾವುದೇ FUP ಮಿತಿ ಇಲ್ಲದೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದೇ ಅವಧಿಗೆ ವೊಡಾಫೋನ್ ಪ್ಲೇ ಅಪ್ಲಿಕೇಶನ್ ಮೂಲಕ ಉಚಿತ ಲೈವ್ ಟಿವಿ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ಎಲ್ಲಿ ಲಭ್ಯ
ವೋಡಾಫೋನ್ ಹೊಸದಾಗಿ ಬಿಡುಗಡೆ ಮಾಡಿರುವ ರೂ. 139 ಪ್ರಿಪೇಡ್ ಯೋಜನೆಯು ದೆಹಲಿ/ಎನ್ಸಿಆರ್, ಯುಪಿ ಈಸ್ಟ್, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲಿ ಲಭ್ಯವಿದೆ.
ರೂ. 129 ಯೋಜನೆ
ಈ ಹಿಂದೆ ವೊಡಾಫೋನ್ ರೂ. 129 ಯೋಜನೆಯನ್ನು ಪರಿಚಯಿಸಿತು. ಅದು ಯಾವುದೇ FUP ಇಲ್ಲದೆ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಒದಗಿಸುತ್ತದೆ. ಈ ಪ್ಲಾನ್ ದಿನಕ್ಕೆ 100 ಎಸ್ಎಂಎಸ್ ಮಿತಿಯೊಂದಿಗೆ 2,800 ಸ್ಥಳೀಯ ಮತ್ತು ರಾಷ್ಟ್ರೀಯ SMS ಸೌಲಭ್ಯ ನೀಡುತ್ತದೆ.
159 ರೀಚಾರ್ಜ್ ಪ್ಲಾನ್
ಹೆಚ್ಚುವರಿಯಾಗಿ, ವೊಡಾಫೋನ್ ರೂ. 159 ರೀಚಾರ್ಜ್ ಪ್ಲಾನ್ ಪರಿಚಯಿಸಿದ್ದು, 28 ಜಿಬಿ ಡೇಟಾ, ಅಪರಿಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸಂದೇಶಗಳನ್ನು ಒಂದು ತಿಂಗಳು ವ್ಯಾಲಿಡಿಟಿಯೊಂದಿಗೆ ಒದಗಿಸುತ್ತದೆ. FUP ಯ ಅನಿಯಮಿತ ಧ್ವನಿ ಕರೆ ದಿನಕ್ಕೆ 250 ನಿಮಿಷಗಳಿದ್ದು, ವಾರಕ್ಕೆ 1,000 ನಿಮಿಷಗಳಿವೆ. 28 ದಿನಗಳ ಅವಧಿಗೆ ದಿನಕ್ಕೆ 1GB ಯಂತೆ 28GB ಡೇಟಾ ಪ್ರಯೋಜನ ಒದಗಿಸುತ್ತದೆ. ಜಿಯೋ ಉಲಾಲಾ.. ಕೇವಲ 600ಕ್ಕೆ ಬ್ರಾಡ್‌ಬ್ಯಾಂಡ್, ಲ್ಯಾಂಡ್ ಲೈನ್, ಟಿವಿ ಕಾಂಬೋ ಆಫರ್ 1 ವರ್ಷ ಉಚಿತ


Click it and Unblock the Notifications