ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 13 ಐಷಾರಾಮಿ ಕಾರುಗಳನ್ನು ಮೆಟಲ್ಸ್ ಆ್ಯಂಡ್ ಸ್ಕ್ರಾಬ್ ಟ್ರೇಡಿಂಗ್ ಕಾರ್ಪೊರೇಷನ್ (ಎಂಎಸ್‌ಟಿಸಿ) ಆನ್‌ಲೈನ್ ಮೂಲಕ ಹರಾಜು ಹಾಕಿದೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 13 ಐಷಾರಾಮಿ ಕಾರುಗಳನ್ನು ಮೆಟಲ್ಸ್ ಆ್ಯಂಡ್ ಸ್ಕ್ರಾಬ್ ಟ್ರೇಡಿಂಗ್ ಕಾರ್ಪೊರೇಷನ್ (ಎಂಎಸ್‌ಟಿಸಿ) ಆನ್‌ಲೈನ್ ಮೂಲಕ ಹರಾಜು ಹಾಕಿದೆ.
ಕಳೆದ ವರ್ಷ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಿಂದ ಜಾರಿ ನಿರ್ದೇಶನಾಲಯ (ಇ.ಡಿ) ವಶಪಡಿಸಿಕೊಂಡಿದ್ದ ವಾಹನಗಳನ್ನು ಆ ಸಂಸ್ಥೆ ಪರವಾಗಿ ಎಂಎಸ್‌ಟಿಸಿ ಹರಾಜು ಹಾಕಿದೆ.

13 ಐಷಾರಾಮಿ ಕಾರು
ಸಿಲ್ವರ್ ರೋಲ್ಸ್ ರಾಯ್ಸ್ ರೂ. 1.33 ಕೋಟಿ, ಪೋರ್ಶೆಗೆ ರೂ. 54.60 ಲಕ್ಷ, ಕೆಂಪು ಬಣ್ಣದ ಮರ್ಸಿಡಿಸ್ ಬೆಂಜ್ ರೂ. 14 ಲಕ್ಷ, ಬಿಳಿಯ ಮರ್ಸಿಡಿಸ್ ಬೆಂಜ್‌ಗೆ ರೂ. 37 ಲಕ್ಷ, ಬಿಎಂಡಬ್ಲ್ಯುಗೆ ರೂ. 9.80 ಲಕ್ಷ ಮೂಲ ಬೆಲೆಯನ್ನು ನಿಗದಿ ಮಾಡಲಾಗಿತ್ತು.
ಜೊತೆಗೆ ಎರಡು ಹೋಂಡಾ ಬ್ರಿಯೊ, ಟೊಯೋಟಾ ಇನೋವಾ, ಹೋಂಡಾ ಸಿಆರ್‌ವಿ, ಟೊಯೋಟಾ ಪಾರ್ಚುನರ್, ಸ್ಕೋಡಾ, ಟೊಯೋಟಾ ಕ್ರಿಸ್ಟಾ ಮತ್ತಿತರ ವಾಹನಗಳನ್ನೂ ಹರಾಜು ಹಾಕಲಾಗಿದೆ.

ಇಂದು ನೀರವ್ ಮೋದಿ ವಿಚಾರಣೆ
ನೀರವ್ ಮೋದಿಯನ್ನು ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಸಲುವಾಗಿ ಲಂಡನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಜೈಲಿನಲ್ಲಿರುವ ನೀರವ್ ಮೋದಿ ವಿಡಿಯೊಲಿಂಕ್ ಮೂಲಕ ಕೋರ್ಟ್‌ನ ವಿಚಾರಣೆಗೆ ಒಳಗಾಗಲಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸಾವಿರಾರು ಕೋಟಿಗಳನ್ನು ವಂಚನೆ ಮಾಡಿ ದೇಶಬಿಟ್ಟು ಓಡಿ ಬ್ರಿಟನ್‌ಗೆ ಬಂದಿದ್ದ ನೀರವ್ ಮೋದಿ ಲಂಡನ್‌ನಲ್ಲಿ ಬಂದೀಖಾನೆಯಲ್ಲಿದ್ದಾರೆ.


Click it and Unblock the Notifications