For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳ ತಪಾಸಣಾ ವರದಿ ಬಹಿರಂಗಪಡಿಸುವಂತೆ ಸುಪ್ರೀಂನಿಂದ ಆರ್ಬಿಐಗೆ ನಿರ್ದೇಶನ

|

ಬ್ಯಾಂಕುಗಳ ವಾರ್ಷಿಕ ತಪಾಸಣಾ ವರದಿ ಮತ್ತು ಮಾಹಿತಿ ಹಕ್ಕು ಕಾಯಿದೆ (ಆರ್ಟಿಐ)ಮಾಹಿತಿಯನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ಗೆ ನಿರ್ದೇಶಿಸಿದೆ.
ಮಾಹಿತಿ ಹಕ್ಕು ಕಾಯಿದೆ (ಆರ್ಟಿಐ) ಕಾರ್ಯಕರ್ತರಾದ ಸುಭಾಷ್ ಚಂದ್ರ ಅಗರವಾಲ್ ಮತ್ತು ಗಿರೀಶ್ ಮಿತ್ತಲ್ ಆರ್ಬಿಐ ವಿರುದ್ಧ ತಿರಸ್ಕಾರ ಮನವಿಯನ್ನು ಸಲ್ಲಿಸಿದ್ದರು.

ಬ್ಯಾಂಕುಗಳ ತಪಾಸಣಾ ವರದಿ ಬಹಿರಂಗಪಡಿಸುವಂತೆ ಆರ್ಬಿಐಗೆ ನಿರ್ದೇಶನ

 

ಆರ್ಟಿಐ ಅಡಿಯಲ್ಲಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯನ್ನು ಬಹಿರಂಗಪಡಿಸದೆ ಇರುವುದಕ್ಕಾಗಿ ಆರ್ಬಿಐಗೆ ಜನವರಿಯಲ್ಲಿ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠವು ಆರ್ಟಿಐ ಅಡಿಯಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲು, ನೀತಿಯನ್ನು ಪರಿಶೀಲಿಸಲು ಫೆಡರಲ್ ಬ್ಯಾಂಕಿಗೆ ನಿರ್ದೇಶಿಸಿತು.

ಆರ್ಟಿಐ ಕಾಯ್ದೆಯಡಿ ಬಹಿರಂಗಪಡಿಸುವಿಕೆಯ ಬಗ್ಗೆ ತನ್ನ ನಿಲುವನ್ನು ಪುನರ್ ವಿಮರ್ಶಿಸುವಂತೆ ಆರ್ಬಿಐ ಸಹ ಕೋರಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಹಿರಂಗಪಡಿಸದಿರುವಿಕೆ ನೀತಿಯು 2015ರ ಅದರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಡಿಸೆಂಬರ್ 2015 ರಲ್ಲಿ ಐಟಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕ ತಪಾಸಣೆ ವರದಿಗಳು ಏಪ್ರಿಲ್ 2011 ರಿಂದ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿದಾರರಿಗೆ ಕೆಲವು ಮಾಹಿತಿ ನೀಡಿದೆ.

ಮಾಹಿತಿ ಹಕ್ಕು ಕಾಯಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯಡಿ ವಿನಾಯಿತಿ ನೀಡಲಾಗಿದೆಯೆಂದು ಜನವರಿ 2016 ರಲ್ಲಿ ಕೇಂದ್ರ ಬ್ಯಾಂಕ್ ಮಾಹಿತಿ ನಿರಾಕರಿಸಿದೆ.

ವಿಶ್ವಾಸಾರ್ಹ ಮಾಹಿತಿಯನ್ನು ಒಳಗೊಂಡಿರುವ ಬ್ಯಾಂಕಿನ ವಾರ್ಷಿಕ ತಪಾಸಣಾ ವರದಿಯ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಆರ್ಬಿಐ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಶುಕ್ರವಾರ ಸುಪ್ರೀಕೋರ್ಟ್ ತನ್ನ ಆದೇಶದಲ್ಲಿ, ಬ್ಯಾಂಕುಗಳು ವಾರ್ಷಿಕ ತಪಾಸಣೆ ವರದಿ ಹಾಗು ಸಾಮಾಜಿಕ ಹೋರಾಟಗಾರರ ಇತರೆ ವಿವರ ಮಾಹಿತಿ ಬಹಿರಂಗಪಡಿಸುವಿಕೆಯ ಕುರಿತು ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಆರ್ಬಿಐಗೆ ಅಂತಿಮ ಅವಕಾಶವನ್ನು ನೀಡಿದೆ.

Read more about: rbi banking money
English summary

Top Court Orders RBI To Disclose Bank Inspection Reports

The Supreme Court on Friday directed the Reserve Bank of India to disclose information about its annual inspection report of banks.
Story first published: Friday, April 26, 2019, 12:48 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more