ಶೀಘ್ರದಲ್ಲೇ ಹೊಸ 20 ರೂಪಾಯಿ ನೋಟು ಬಿಡುಗಡೆ

ಮಹಾತ್ಮಾ ಗಾಂಧಿ ಸರಣಿಯ ಹೊಸ ರೂ. 20 ಮುಖಬೆಲೆಯ ನೋಟು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಮಹಾತ್ಮಾ ಗಾಂಧಿ ಸರಣಿಯ ಹೊಸ ರೂ. 20 ಮುಖಬೆಲೆಯ ನೋಟು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಶೀಘ್ರದಲ್ಲೇ ಹೊಸ 20 ರೂಪಾಯಿ ನೋಟು ಬಿಡುಗಡೆ

ಆರ್ಬಿಐ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಿದ್ದು, ಹೊಸ ರೂ. 20 ನೋಟಿನಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಹಿ ಇರಲಿದೆ.
ಹೊಸ ನೋಟು ಹಸಿರು-ಹಳದಿ ಬಣ್ಣದಿಂದ ಕೂಡಿರಲಿದ್ದು, ದೇಶದ ಸಂಸ್ಕೃತಿ ಬಿಂಬಿಸುವ ಎಲ್ಲೋರ ಗುಹೆಗಳ ಚಿತ್ರ ಹೊಂದಿರಲಿದೆ. ಮಹಾತ್ಮಾ ಗಾಂಧಿ ಸರಣಿಯ ಹೊಸ ನೋಟಿನ ಜೊತೆಗೆ ಹಳೆ ನೋಟುಗಳು ಚಾಲ್ತಿಯಲ್ಲಿರಲಿದೆ ಎಂದು ಆರ್ಬಿಐ ಹೇಳಿದೆ.

ರೂ. 20 ಮುಖಬೆಲೆಯ ಹೊಸ ನೋಟಿನ ಮುಂಭಾಗದ ಮಧ್ಯದಲ್ಲಿ ಮಹಾತ್ಮಾಗಾಂಧಿ ಫೋಟೋ ಇರಲಿದೆ. ಹಿಂದಿ ಹಾಗೂ ಇಂಗ್ಲೀಷ್ ಸಂಖ್ಯೆಯಲ್ಲಿ ನೋಟಿನ ಮೌಲ್ಯ ಇರಲಿದೆ. ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿದ್ದು, ಹಿಂದಿನ ಭಾಗದಲ್ಲಿ ಸಾಂಸ್ಕೃತಿಕ ಎಲ್ಲೋರ ಗುಹೆಯ ಚಿತ್ರವಿರಲಿದೆ. ನೋಟಿನ ಅಳತೆ 63 ಎಂಎಂ ಅಗಲ ಹಾಗೂ 129 ಮಿಮಿ ಉದ್ದ ಇದೆ ಆರ್ಬಿಐ ಮಾಹಿತಿ ನೀಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+