For Quick Alerts
ALLOW NOTIFICATIONS  
For Daily Alerts

ಬಣ್ಣದ ಲೋಕಕ್ಕೆ JSW, ಯಾವುದೇ ಬಣ್ಣ ಖರೀದಿಸಿದರೂ ಒಂದೇ ಬೆಲೆ

|

ಬೆಂಗಳೂರು, ಮೇ 2: ಭಾರತದಲ್ಲಿ ಮುಂಚೂಣಿಯಲ್ಲಿರುವ ಬ್ಯುಸಿನೆಸ್ ಸಮೂಹ ಸಂಸ್ಥೆಯಾಗಿರುವ ಜೆಎಸ್‍ಡಬ್ಲ್ಯೂ ಗ್ರೂಪ್ ಇದೀಗ ಜೆಎಸ್‍ಡಬ್ಲ್ಯೂ ಪೇಂಟ್ಸ್ ಹೆಸರಿನಲ್ಲಿ ಬಣ್ಣದ ಲೋಕಕ್ಕೆ ಕಾಲಿರಿಸಿದೆ. ಗ್ರಾಹಕರ ವೈವಿಧ್ಯೀಕರಣದ ಭಾಗವಾಗಿ ಇದೇ ಮೊದಲ ಬಾರಿಗೆ ಜೆಎಸ್‍ಡಬ್ಲ್ಯೂ ಗ್ರೂಪ್ ಭಾರತೀಯ ಸಂಘಟಿತ ಬಣ್ಣಗಳ ಉದ್ಯಮಕ್ಕೆ ಹೆಜ್ಜೆ ಇಟ್ಟಿದೆ.

 

ಈ ಪೇಂಟ್ಸ್ ವ್ಯವಹಾರವನ್ನು ಆರಂಭಿಸುವ ಮೂಲಕ ಸಂಸ್ಥೆಯು ಇದೀಗ ಗ್ರಾಹಕರ ಮನೆಗಳಿಗೆ ಸ್ಟೀಲ್, ಸಿಮೆಂಟ್, ಪೀಠೋಪಕರಣಗಳು ಮತ್ತು ಬಣ್ಣವನ್ನು ಪೂರೈಸುವ ಮೂಲಕ ಮನೆಗೆ ಪರಿಪೂರ್ಣತೆಯ ಮೆರಗು ತರುತ್ತದೆ. ಜೆಎಸ್‍ಡಬ್ಲ್ಯೂ ಒಂದು ಗ್ರೀನ್‍ಫೀಲ್ಡ್ ವೆಂಚರ್ ಆಗಿದ್ದು, ಇದರ ಹಿಂದೆ ಕಟಿಂಗ್-ಎಡ್ಜ್ ಟೆಕ್ನಾಲಜಿ, ಆಟೋಮೇಶನ್ ಮತ್ತು ಈ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದೆ.

ಕಂಪನಿಯು ಇಂಡಸ್ಟ್ರಿಯಲ್ ಕೋಟಿಂಗ್ಸ್ ಅಲ್ಲದೇ ಅಲಂಕಾರಿಕ ಬಣ್ಣಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಇಂಡಸ್ಟ್ರಿಯಲ್ ಕೋಟಿಂಗ್‍ನಲ್ಲಿ ಜೆಎಸ್‍ಡಬ್ಲ್ಯೂ ಪೇಂಟ್ಸ್ ಕಾಯಿಲ್ ಕೋಟಿಂಗ್ಸ್‍ನೋಂದಿಗೆ ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ. ಅಲಂಕಾರಿಕ ಪೇಂಟ್ಸ್ ವಿಭಾಗದಲ್ಲಿ ಕಂಪನಿಯು ಒಳಾಂಗಣ ಮತ್ತು ಹೊರಾಂಗಣ ಗೋಡೆಗಳಿಗೆ, ಮರ ಮತ್ತು ಲೋಹಕ್ಕೆ ಕೇವಲ ನೀರು ಆಧಾರಿತ ಪೇಂಟ್‍ಗಳನ್ನು ಉತ್ಪಾದಿಸುತ್ತಿದೆ.

ಉದ್ಯಮದ ಅಂದಾಜಿನ ಪ್ರಕಾರ, ಭಾರತದ ಸಂಘಟಿತ ಬಣ್ಣಗಳ ಉದ್ಯಮ 2020 ರ ವೇಳೆಗೆ ಶೇ.15 ರಷ್ಟು ಸಿಎಜಿಆರ್ ನೊಂದಿಗೆ 50,000 ಕೋಟಿ ರೂಪಾಯಿಗಳ ಮೌಲ್ಯದ ವ್ಯವಹಾರವನ್ನು ತಲುಪಲಿದೆ. ಗ್ರಾಹಕರ ಅಭಿರುಚಿ ಮತ್ತು ಜಾಗತಿಕ ಟ್ರೆಂಡ್‍ಗಳ ನಡುವಿನ ಅಂತರದ ಬಗ್ಗೆ ಜೆಎಸ್‍ಡಬ್ಲ್ಯೂ ಪೇಂಟ್ಸ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಕಂಪನಿಯು ಭಾರತದ ಪೇಂಟ್ಸ್ ಕ್ಷೇತ್ರದಲ್ಲಿ ಬಹುಮುಖ್ಯ ಕಂಪನಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ.

ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ವಿಶೇಷತೆಗಳು

ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ವಿಶೇಷತೆಗಳು

1. ಉತ್ಪನ್ನದ ಶ್ರೇಣಿ: ಜೆಎಸ್‍ಡಬ್ಲ್ಯೂ ಪೇಂಟ್ಸ್ ನೀರು ಆಧಾರಿತ ಬಣ್ಣಗಳನ್ನು ಮನೆಗಳಿಗೆ ಸರಳ, ಚುರುಕಾದ ಮತ್ತು ಖಚಿತವಾದ ರೀತಿಯಲ್ಲಿ ತಲುಪಿಸಲಿದೆ. ದೇಶದಲ್ಲಿ ಇದು ಏಕೈಕ ನೀರು ಆಧಾರಿತ ಬಣ್ಣವಾಗಿದೆ. ನಮ್ಮ ಅಲಂಕಾರಿಕ ಬಣ್ಣಗಳಲ್ಲಿ ಸಾಲ್ವೆಂಟ್‍ಗಳು ಇರುವುದಿಲ್ಲ ಮತ್ತು ಕಡಿಮೆ ವಿಒಸಿ ಇರುತ್ತದೆ. ಈ ಮೂಲಕ ಇದು ಕುಟುಂಬ ಸ್ನೇಹಿ ಬಣ್ಣವಾಗಿದೆ. ಟಿಂಟಿಂಗ್‍ನ ಕಲರೆಂಟ್‍ಗಳೂ ಸಹ ನೀರು ಆಧಾರಿತವಾಗಿರುವುದು ಇದರ ವಿಶೇಷತೆಯಾಗಿದೆ. ಈ ಬಣ್ಣಗಳನ್ನು ಅತ್ಯುತ್ಕøಷ್ಟವಾದ ರೀತಿಯಲ್ಲಿ ಪರೀಕ್ಷೆ ನಡೆಸಿದ್ದು & ಪ್ರಮಾಣೀಕರಣಗೊಂಡಿದೆ. ಈ ಬಣ್ಣಗಳ ಅವಧಿ 3, 5 & 7 ವರ್ಷಗಳಾಗಿರುತ್ತದೆ.

ಬಣ್ಣದ ಲೋಕಕ್ಕೆ JSW, ಯಾವುದೇ ಬಣ್ಣ ಖರೀದಿಸಿದರೂ ಒಂದೇ ಬೆಲೆ

ಬಣ್ಣದ ಲೋಕಕ್ಕೆ JSW, ಯಾವುದೇ ಬಣ್ಣ ಖರೀದಿಸಿದರೂ ಒಂದೇ ಬೆಲೆ

2. ಯಾವುದೇ ಬಣ್ಣ ಒಂದೇ ಬೆಲೆಗೆ: ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ಯಾವುದೇ ಬಣ್ಣವನ್ನು ಖರೀದಿಸಿದರೂ ಒಂದೇ ಬೆಲೆ ಇರುತ್ತದೆ. ಅಂದರೆ, ಕಂಪನಿ ಉತ್ಪಾದಿಸುವ ಎಲ್ಲಾ ಬಣ್ಣಗಳ ಬೆಲೆ ಒಂದೇ ಇರುತ್ತದೆ. ಒಟ್ಟು 1800 ಶೇಡ್‍ಗಳನ್ನು ಉತ್ಪಾದಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮವಾದ ಮತ್ತು ವಿಸ್ತಾರವಾದ ಕಲರ್ ರೇಂಜ್ ಅನ್ನು ನೀಡಲಿದೆ. ಜೆಎಸ್‍ಡಬ್ಲ್ಯೂ ಪೇಂಟ್ಸ್ ಬಣ್ಣಗಳೊಂದಿಗೆ ಭಾರತವನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ. ಅಂದರೆ ಯಾವುದೇ ಬಣ್ಣವನ್ನು ಖರೀದಿಸಿದರೂ ಒಂದೇ ಬೆಲೆಯನ್ನು ನಿಗದಿ ಮಾಡಿದೆ. ಇದು ಭಾರತೀಯ ಪೇಂಟ್ಸ್ ಮಾರುಕಟ್ಟೆಯಲ್ಲಿ ಮೊದಲ ಐತಿಹಾಸಿಕ ನಿರ್ಧಾರವಾಗಿದೆ. ಈ ಮೂಲಕ ಭಾರತೀಯ ಗ್ರಾಹಕರಿಗೆ ಪಾರದರ್ಶಕವಾದ ಬೆಲೆ ಮತ್ತು ಚಿಂತನಾಶೀಲ ಬೆಲೆಯನ್ನು ನೀಡುತ್ತಿದೆ.

ಗ್ರಾಹಕರಿಗೆ ನೆರವು
 

ಗ್ರಾಹಕರಿಗೆ ನೆರವು

ಜೆಎಸ್‍ಡಬ್ಲ್ಯೂ ಪೇಂಟ್ಸ್ ತನ್ನ ಗ್ರಾಹಕರ ಅನುಭವಕ್ಕೆ ಮಾನವ ಸ್ಪರ್ಶ ನೀಡಲಿದೆ. ತನ್ನ ಗ್ರಾಹಕ ಸಂಬಂಧ ಅಧಿಕಾರಿ ಗ್ರಾಹಕರ ನೆರವಿಗೆ ಸದಾ ಲಭ್ಯವಿರುತ್ತಾರೆ. ಈ ಮೂಲಕ ಉತ್ಪನ್ನಗಳು, ಬಣ್ಣಗಳ ಆಯ್ಕೆ ವಿಚಾರದಲ್ಲಿ ಮಾಹಿತಿಯನ್ನು ನೀಡುತ್ತಾರೆ.

ಉತ್ಪಾದನಾ ಸಾಮರ್ಥ್ಯಗಳು

ಉತ್ಪಾದನಾ ಸಾಮರ್ಥ್ಯಗಳು

ಜೆಎಸ್‍ಡಬ್ಲ್ಯೂ ಪೇಂಟ್ಸ್ ಭಾರತದ ಅತಿದೊಡ್ಡ ಸಂಪೂರ್ಣ ಆಟೋಮೇಟೆಡ್ ಕಾಯಿಲ್ ಕೋಟಿಂಗ್ ಸೌಲಭ್ಯದ ಬಣ್ಣ ತಯಾರಿಕಾ ಘಟಕವನ್ನು ಆರಂಭಿಸಿದೆ. ಇದರ ಉತ್ಪಾದನಾ ಸಾಮಥ್ರ್ಯ ವಾರ್ಷಿಕ 25,000 ಏಐ ಆಗಿದ್ದು ಮತ್ತು ನೀರು ಆಧಾರಿತ ಅಲಂಕಾರಿಕ ಬಣ್ಣಗಳ ಘಟಕದ ಸಾಮಥ್ರ್ಯ ವಾರ್ಷಿಕ 1,00,000 ಏಐ ಆಗಿದೆ. ಈ ಎರಡೂ ಘಟಕಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿವೆ ಮತ್ತು ZLD (Zero Liquid Discharge) ಘಟಕಗಳಾಗಿವೆ.

English summary

JSW group enters Paints market

The Sajjan Jindal family is invested around Rs 1,000 crore to built two factories to foray into the Asian Paints-dominated paints segment and is targeting an April 2018 launch, a senior official has said.
Story first published: Thursday, May 2, 2019, 16:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X