ತನಿಖಾ ದಾಖಲೆಯಿಂದ ಬಹಿರಂಗ: ಚಂದಾ ಕೊಚ್ಚಾರ್ ಎಸ್ಸಾರ್ ಸಂಸ್ಥೆಗೆ ಸಾಲ ನೀಡುವಾಗ ಅಕ್ರಮ

ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಚಂದಾ ಕೊಚ್ಚಾರ್ ಅವರು ಮಾರಿಷಸ್ ಮೂಲದ ಎಸ್ಸಾರ್ ಸ್ಟೀಲ್ ಕಂಪೆನಿಗೆ ಬ್ಯಾಂಕಿನಿಂದ 365 ದಶಲಕ್ಷ ಡಾಲರ್ ಮೊತ್ತದ ಸಾಲ ವಿತರಣೆಯಲ್ಲಿ ವಂಚನೆ.

ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಚಂದಾ ಕೊಚ್ಚಾರ್ ಅವರು ಮಾರಿಷಸ್ ಮೂಲದ ಎಸ್ಸಾರ್ ಸ್ಟೀಲ್ ಕಂಪೆನಿಗೆ ಬ್ಯಾಂಕಿನಿಂದ 365 ದಶಲಕ್ಷ ಡಾಲರ್ ಮೊತ್ತದ ಸಾಲ ವಿತರಣೆಯಲ್ಲಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾ ಕೊಚ್ಚಾರ್ ಎಸ್ಸಾರ್ ಸಂಸ್ಥೆಗೆ ಸಾಲ ನೀಡುವಾಗ ಅಕ್ರಮ

ಸಾಲ ವಿತರಣೆ ಸಂದರ್ಭದಲ್ಲಿ ಹಲವಾರು ಅಕ್ರಮಗಳು ಕಂಡುಬಂದಿತ್ತು ಎಂದು ಆರ್ಬಿಐ ಗಮನಿಸಿದೆ. ಚಂದಾ ಕೊಚ್ಚಾರ್ ಅವರು ಎಸ್ಸಾರ್ ಗ್ರೂಪ್ ಗೆ ಆಕ್ರಮವಾಗಿ ಸಾಲ ನೀಡುವ ಮೂಲಕ ಆರ್ಬಿಐ ಯನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ತನಿಖಾ ವರದಿಗಳು ತೋರಿಸುತ್ತಿವೆ. ದಿ ಇಂಡಿಯನ್ ಎಕ್ಸಪ್ರೆಸ್ 2014ರ ಜುಲೈ ಹೊತ್ತಿನಲ್ಲಿ ನಡೆಸಿದ ದಾಖಲೆಗಳ ತನಿಖೆ ಮತ್ತು ತನಿಖಾಧಿಕಾರಿಗಳ ಸಂದರ್ಶನದಿಂದ ಅಧಿಕಾರಿಗಳು ಕೆಲ ಸಂಗತಿಗಳನ್ನು ಬಹಿರಂಗಪಡಿಸಿದ್ದರು. ಎಸ್ಸಾರ್ ಸ್ಟೀಲ್ ಕಂಪೆನಿ ಸಾಲ ವಿತರಣೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಅನುಮೋದನೆಯನ್ನು ಆರ್ಬಿಐ ಪ್ರಶ್ನಿಸಿದೆ.

ಸ್ಸಾರ್ ಗ್ರೂಪ್ ಐಸಿಐಸಿಐ ಬ್ಯಾಂಕಿನ ಅತಿದೊಡ್ಡ ಸಾಲಗಾರರಲ್ಲಿ ಒಂದಾಗಿದೆ. ಏಪ್ರಿಲ್ 2009 ಮತ್ತು ಮಾರ್ಚ್ 2018 ರ ನಡುವಿನ ಅವಧಿಯಲ್ಲಿ ಎಸ್ಸಾರ್ ಗ್ರೂಪ್ 71 ಸಾಲಗಳನ್ನು ಅನುಮೋದಿಸಿತು. ಎಸ್ಸಾರ್ ಗ್ರೂಪ್ ಸಾಲ ಅನುಮೋದಿಸಿದ ವಿವಿಧ ಸಮಿತಿಗಳ 35 ಸಭೆಗಳಲ್ಲಿ ಚಂದಾ ಕೊಚ್ಚಾರ್ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+