ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಇದರ ನಡುವೆ ಅಡುಗೆ ಅನಿಲ ಗ್ರಾಹಕರಿಗೆ (ಎಲ್ಪಿಜಿ) ಕೇಂದ್ರ ಸರ್ಕಾರ ಶಾಕ್ ನೀಡಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಎಲ್ಪಿಜಿ (ಅಡುಗೆ ಅನಿಲ) ಬೆಲೆ ಏರಿಕೆ ಮಾಡಿದೆ.
ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಇದರ ನಡುವೆ ಅಡುಗೆ ಅನಿಲ ಗ್ರಾಹಕರಿಗೆ (ಎಲ್ಪಿಜಿ) ಕೇಂದ್ರ ಸರ್ಕಾರ ಶಾಕ್ ನೀಡಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಎಲ್ಪಿಜಿ (ಅಡುಗೆ ಅನಿಲ) ಬೆಲೆ ಏರಿಕೆ ಮಾಡಿದೆ. ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ದರ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ.
ಸಬ್ಸಿಡಿ ಸಹಿತ ಎಲ್ಪಿಜಿ ದರ
ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ) 14.2 ಕೆಜಿ ತೂಕದ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯನ್ನು ದೆಹಲಿಯಲ್ಲಿ 28 ಪೈಸೆ ಏರಿಕೆ ಮಾಡಿದೆ. ಮುಂಬೈನಲ್ಲಿ 29 ಪೈಸೆ ಏರಿಕೆ ಮಾಡಲಾಗಿದ್ದು, ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 496.14, ಕೋಲ್ಕತಾದಲ್ಲಿ ರೂ. 499.29, ಮುಂಬೈನಲ್ಲಿ ರೂ. 493.86 ಮತ್ತು ಚೆನ್ನೈನಲ್ಲಿ ರೂ. 484.02 ಇರಲಿದೆ.
ಸಬ್ಸಿಡಿ ರಹಿತ ಎಲ್ಪಿಜಿ ದರ
ಹೊಸ ಪರಿಷ್ಕೃತ ದರದಂತೆ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ರೂ. 6 ಏರಿಕೆ ಕಂಡಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ರೂ. 712.5, ಮುಂಬೈನಲ್ಲಿ ರೂ. 684.50, ಕೋಲ್ಕತಾದಲ್ಲಿ ರೂ. 738.50 ಮತ್ತು ಚೆನ್ನೈನಲ್ಲಿ ರೂ. 728 ಆಗಿದೆ.
ಹೊಸ ದರ ಜಾರಿ
ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಮೇಲಿನ ಪರಿಷ್ಕೃತ ದರ ಮೇ 1 ರಿಂದಲೇ ಜಾರಿಯಾಗಲಿದೆ. ಕಳೆದ ಏಪ್ರಿಲ್ ತಿಂಗಳಲ್ಲೂ ಸಹ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ತೈಲ ಕಂಪನಿಗಳು ಮಾರುಕಟ್ಟೆಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 5 ರೂ.ವರೆಗೆ, ಸಬ್ಸಿಡಿ ಸಹಿತ ಸಿಲಿಂಡರ್ ದರ 25 ಪೈಸೆ ಹೆಚ್ಚಳ ಮಾಡಲಾಗಿತ್ತು.
ಬೆಲೆ ಏರಿಕೆಗೆ ಕಾರಣ
ಸಿಲಿಂಡರ್ ಬೆಲೆ ಏರಿಕೆಗೆ ಅಂತರರಾಷ್ಟ್ರೀಯ ಬೆಂಚ್ಮಾರ್ಕ್ ಎಲ್ಪಿಜಿ ದರ ಮತ್ತು ವಿದೇಶಿ ವಿನಿಮಯ ದರದ ಬದಲಾವಣೆಗಳನ್ನು ಅವಲಂಬಿಸಿದೆ.
ತೆರಿಗೆ ನಿಯಮಗಳ ಪ್ರಕಾರ, ಎಲ್ಪಿಜಿ ಮೇಲೆ ಸರಕು ಮತ್ತು ಸೇವೆಗಳ ತೆರಿಗೆ ಇಂಧನದ ಮಾರುಕಟ್ಟೆ ದರದಲ್ಲಿ ಲೆಕ್ಕ ಹಾಕಬೇಕು. ಸರಕಾರದ ಬೆಲೆಗೆ ಒಂದು ಭಾಗವನ್ನು ಸಬ್ಸಿಡಿಯೊಂದಿಗೆ ಆಯ್ಕೆ ಮಾಡಬಹುದು. ಆದರೆ ಮಾರುಕಟ್ಟೆ ದರದಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇಂಧನ ಮಾರುಕಟ್ಟೆಯ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಅಡುಗೆ ಅನಿಲ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.
ಪ್ರತಿವರ್ಷ 12 ಸಿಲಿಂಡರ್
ದೇಶದ ಕುಟುಂಬಗಳು ಪ್ರತಿವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ವಿಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಉಜ್ವಲ, ಅನಿಲ ಭಾಗ್ಯ ಯೋಜನೆ
ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ. ಕೇಂದ್ರದ ಉಜ್ವಯ ಯೋಜನೆಯಂತೆ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ (ಗ್ಯಾಸ್) ನೀಡುವ ಉದ್ದೇಶ ಹೊಂದಿದೆ. ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications