For Quick Alerts
ALLOW NOTIFICATIONS  
For Daily Alerts

ಇಲ್ಲಿ ನೋಡಿ.. ಆಧಾರ್ ಕಾರ್ಡ್ ಶುಲ್ಕದಲ್ಲಿ ಬದಲಾವಣೆ

ಆಧಾರ್ ಕಾರ್ಡ್ ವಿವರವನ್ನು ಅಪ್ಡೇಟ್ ಮಾಡಲು ಅಥವಾ ಆಧಾರ್ ಕಾರ್ಡ್ ಜನರೇಟ್ ಮಾಡಲು ಬಯಸಿದರೆ ನೀವು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ವಿಳಾಸ ಒಳಗೊಂಡಂತೆ ಬೇರೆ ಯಾವುದೇ ಬದಲಾವಣೆ ಬಯಸಿದ್ದರೆ ನಿಮ್ಮ ಜೀಬಿಗೆ ಕತ್ತರಿ ಗ್ಯಾರಂಟಿ!

|

ಆಧಾರ್ ಕಾರ್ಡ್ ವಿವರವನ್ನು ಅಪ್ಡೇಟ್ ಮಾಡಲು ಅಥವಾ ಆಧಾರ್ ಕಾರ್ಡ್ ಜನರೇಟ್ ಮಾಡಲು ಬಯಸಿದರೆ ನೀವು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ವಿಳಾಸ ಒಳಗೊಂಡಂತೆ ಬೇರೆ ಯಾವುದೇ ಬದಲಾವಣೆ ಬಯಸಿದ್ದರೆ ನಿಮ್ಮ ಜೀಬಿಗೆ ಕತ್ತರಿ ಗ್ಯಾರಂಟಿ!
ಆಧಾರ್ ನವೀಕರಣ ಶುಲ್ಕದಲ್ಲಿ ಹೆಚ್ಚಳ ಅಂದರೆ ಯುಐಡಿಎಐ ಮೂಲ ಸೇವೆಗಳ ಶುಲ್ಕ ಹೆಚ್ಚು ಮಾಡಲಾಗಿದೆ ಎಂದು ಯುಐಡಿಎಐ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ.
ಜನವರಿ 1ರಿಂದ ಶುಲ್ಕ ಹೆಚ್ಚಳವಾಗಿದ್ದು, ಯಾವ ಸೇವೆಗೆ ಶುಲ್ಕ ಪಾವತಿಸಬೇಕು, ಯಾವ ಕಾರ್ಯಕ್ಕೆ ಶುಲ್ಕ ಪಾವತಿಸಬೇಕಿಲ್ಲ ಎಂಬುದನ್ನು ತಿಳಿಸಿದೆ.

ಇಲ್ಲಿ ನೋಡಿ.. ಆಧಾರ್ ಕಾರ್ಡ್ ಶುಲ್ಕದಲ್ಲಿ ಬದಲಾವಣೆ

ಉಚಿತ ಸೇವೆ
ನೀವು ಮೊದಲ ಬಾರಿ ಆಧಾರ್ ಕಾರ್ಡ್ ಪಡೆಯುತ್ತಿದ್ದರೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಸಂಪೂರ್ಣವಾಗಿ ಉಚಿತವಾಗಿರಲಿದೆ. ಮಕ್ಕಳ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಲು ಬಯಸಿದ್ದರೆ ಅದೂ ಉಚಿತವಾಗಿದ್ದು, ಶುಲ್ಕ ಪಾವತಿ ಮಾಡಬೇಕಾಗಿಲ್ಲ.

ಹೆಸರು ಬದಲಾವಣೆ
ನೀವು ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ಐಡಿ ಬದಲಾವಣೆ ಮಾಡಲು ಬಯಸಿದ್ದರೆ ರೂ. 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಕಲರ್ ಪ್ರಿಂಟ್ ಸೇವೆ
ಇ-ಕೆವೈಸಿ ಮೂಲಕ ಆಧಾರ್ ಹುಡುಕಾಟ, ಎ4 ಶೀಟ್ ನಲ್ಲಿ ಕಲರ್ ಪ್ರಿಂಟ್ ಪಡೆಯಲು ರೂ. 30 ಶುಲ್ಕ ನೀಡಬೇಕು.

ದೂರು ದಾಖಲಿಸಿ
ಮೇಲೆ ಉಲ್ಲೇಖಿಸದಕ್ಕಿಂತಲೂ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವುದು ತಿಳಿದು ಬಂದಲ್ಲಿ ದೂರು ದಾಖಲಿಸಬಹುದು. 1947 ಈ ನಂಬರ್ ಗೆ ಕರೆ ಮಾಡಿ ಅಥವಾ [email protected] ಇ ಮೇಲ್ ಕಳುಹಿಸಿ ದೂರು ಸಲ್ಲಿಸಬಹುದು. ಆಧಾರ್ ಕಾರ್ಡ್ ಕಳೆದುಕೊಂಡರೆ ಪಡೆಯುವುದು ಹೇಗೆ?

Read more about: ಆಧಾರ್ aadhar money
English summary

Aadhar card status online know revised charges for aadhaar card updation uidai

Aadhar card status online know revised charges for aadhaar card updation uidai
Story first published: Saturday, May 11, 2019, 15:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X