ನೇಮಕಾತಿ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಶೇ. 16ರಷ್ಟು ಏರಿಕೆ
ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಆಕಾಂಕ್ಷಿಗಳಿಗೆ ಇದು ಸಂತಸದ ಸಂಗತಿ. ಐಟಿ ಕ್ಷೇತ್ರದಲ್ಲಿನ ನೇಮಕಾತಿ ಪ್ರಮಾಣ ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ, ಪ್ರಸ್ತುತ ವರ್ಷದ ಏಪ್ರಿಲ್‌ನಲ್ಲಿ ಶೇ. 16ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಆಕಾಂಕ್ಷಿಗಳಿಗೆ ಇದು ಸಂತಸದ ಸಂಗತಿ. ಐಟಿ ಕ್ಷೇತ್ರದಲ್ಲಿನ ನೇಮಕಾತಿ ಪ್ರಮಾಣ ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ, ಪ್ರಸ್ತುತ ವರ್ಷದ ಏಪ್ರಿಲ್‌ನಲ್ಲಿ ಶೇ. 16ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಏಪ್ರಿಲ್ ನಲ್ಲಿ ಐಟಿ-ಸಾಫ್ಟ್ವೇರ್ ಉದ್ಯಮ ಶೇ. 39ರಷ್ಟು ನೇಮಕಾತಿ ದಾಖಲಿಸಿದೆ. ಸೈಟ್ ಇಂಜಿನಿಯರಿಂಗ್, ಮಾರಾಟ ಮತ್ತು ಬಿಸಿನೆಸ್ ಡೆವಲಪ್ಮೆಂಟ್ ಮುಂತಾದ ಕ್ರಿಯಾತ್ಮಕ ವಲಯಗಳಲ್ಲಿ ಕ್ರಮವಾಗಿ ಶೇ. 26 ಮತ್ತು ಶೇ. 9 ರಷ್ಟು ಬೆಳವಣಿಗೆಯಾಗಿದೆ ಎಂದು ವರದಿ ಹೇಳಿದೆ.
ಉದ್ಯೋಗ ನೀಡುವ ದೇಶದ ಅಗ್ರ ನಗರಗಳ ಪಟ್ಟಿಯಲ್ಲಿ ಬೆಂಗಳೂರು ತನ್ನ ಸ್ಥಾನವನ್ನು ಕಾಯ್ದುಗೊಂಡಿದೆ.
ಬೆಂಗಳೂರಿನಲ್ಲಿ ಇದೇ ಏಪ್ರಿಲ್‌ನಲ್ಲಿ ನೇಮಕಾತಿ ಪ್ರಮಾಣ ಶೇ. 23ರಷ್ಟು ಏರಿಕೆಯಾಗಿದೆ. ಬೆಂಗಳೂರು ಹೊರತುಪಡಿಸಿ ಕೋಲ್ಕತಾ ಮತ್ತು ಹೈದರಾಬಾದ್ ನೇಮಕಾತಿ ಪ್ರಕ್ರಿಯೆಯಲ್ಲಿ ಕ್ರಮವಾಗಿ ಶೇ. 22 ಮತ್ತು ಶೇ. 19ರಷ್ಟು ಬೆಳವಣಿಗೆ ಕಂಡಿವೆ.
ಕಳೆದ ಕೆಲ ತಿಂಗಳುಗಳಲ್ಲಿ ಐಟಿ ಉದ್ಯಮವು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು, ಹೆಚ್ಚಿನ ನೇಮಕಾತಿ ಮಾಡಿಕೊಳ್ಳುತ್ತಿವೆ. ದೇಶದ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಐಟಿ ವಲಯ ಉದ್ಯೋಗ ಪ್ರಕ್ರಿಯೆಯಲ್ಲಿ ಏರಿಕೆ ಕಾಯ್ದುಗೊಂಡಿದೆ.
ಮುಖ್ಯವಾಗಿ ಕಟ್ಟಡ/ಕಾಮಗಾರಿ ವಲಯ ಮತ್ತು ಇಂಜಿನಿಯರಿಂಗ್ ವಲಯದಲ್ಲಿ ನೇಮಕಾತಿ ಪ್ರಕ್ರಿಯೆ ಶೇ. 16ರಷ್ಟು ಏರಿಕೆ ಸಾದಿಸಿದೆ.
ಬಿಪಿಒ/ಐಟಿಇಎಸ್‌ನಲ್ಲಿ ಶೇ. 11ರಷ್ಟು, ವಿಮೆ ವಲಯ ಶೇ. 9 ರಷ್ಟು ಮತ್ತು ಎಫ್‌ಎಂಸಿಜಿ ಶೇ. 11ರಷ್ಟು, ಹೆಲ್ತ್‌ಕೇರ್ ಶೆ. 14ರಷ್ಟು, ರಿಯಲ್ ಎಸ್ಟೇಟ್ ಶೇ. 17 ರಷ್ಟು, ಇಂಧನ ಮತ್ತು ಗ್ಯಾಸ್ ವಲಯದಲ್ಲಿ ಶೇ. 3ರಷ್ಟು ನೇಮಕಾತಿ ಪ್ರಕ್ರಿಯೆಗಳು ನಡೆದಿವೆ.


Click it and Unblock the Notifications