ಲೋಕಸಭೆ ಚುನಾವಣೆಯ ಕೊನೆ ಹಂತದ ಮತದಾನ ಮುಗಿದ ನಂತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು (ಒಎಂಸಿ) ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಲು ಆರಂಭಿಸಿವೆ. ನಾಳೆ ಫಲಿತಾಂಶ ಬಿಡುಗಡೆಯಾದ ನಂತರ ತೈಲ ಬೆಲೆಗಳು ಇನ್ನೂ ಏರುವ ಸಾಧ್ಯತೆ ಇದ್ದು,
ಲೋಕಸಭೆ ಚುನಾವಣೆಯ ಕೊನೆ ಹಂತದ ಮತದಾನ ಮುಗಿದ ನಂತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು (ಒಎಂಸಿ) ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಲು ಆರಂಭಿಸಿವೆ. ನಾಳೆ ಫಲಿತಾಂಶ ಬಿಡುಗಡೆಯಾದ ನಂತರ ತೈಲ ಬೆಲೆಗಳು ಇನ್ನೂ ಏರುವ ಸಾಧ್ಯತೆ ಇದ್ದು, ನಿಜಕ್ಕೂ ಇದು ವಾಹನ ಸವಾರರಿಗೆ ಶಾಕಿಂಗ್ ಸುದ್ದಿಯಾಗಲಿದೆ.
ಅಂತಿಮ ಹಂತದ ಮತದಾನ ಮುಗಿಯುವವರೆಗೆ ಇಂಧನ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಳಿತವಾಗಿರಲಿಲ್ಲ. ಆದರೆ ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶಾಕ್ ನೀಡುವ ಹಂತದಲ್ಲಿ ಏರಿಕೆ ಆಗಬಹುದು ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ತೈಲ ಕಂಪನಿಗಳು ದರ ಏರಿಕೆ ಗೋಜಿಗೆ ಹೋಗುವುದಿಲ್ಲ. ದೊಡ್ಡ ಮಟ್ಟದ ಏರಿಳಿತ ಮಾಡುವುದಿಲ್ಲ. ಹೀಗಾಗಿ ಇಲ್ಲಿಯವರೆಗಿನ ನಷ್ಟದ ಹೊರೆಯನ್ನು ತೈಲ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಲಿವೆ. ಮುಂದಿನ ಪ್ರಧಾನಿ ಯಾರು? ಉತ್ತರ ಹೇಳಿ ಭರ್ಜರಿ ಆಫರ್ ಗೆಲ್ಲಿ..!
ತೈಲ ಬೆಲೆ ಏರಿಕೆಗೆ ಕಾರಣ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅನುಗುಣವಾಗಿ ದೇಶಿಯ ಮಾರುಕಟ್ಟೆಯಲ್ಲಿ ಪ್ರತಿ ದಿನ ತೈಲ ದರಗಳನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತವೆ. ಆದರೆ, ಚುನಾವಣೆ ಸಂದರ್ಭದಲ್ಲಿ ತೈಲ ಕಂಪನಿಗಳು ದರ ಏರಿಕೆ ಗೋಜಿಗೆ ಹೋಗುವುದಿಲ್ಲ. ದೊಡ್ಡ ಮಟ್ಟದ ಏರಿಳಿತ ಮಾಡುವುದಿಲ್ಲ. ತೈಲ ದರದ ಏರಿಳಿತ ಮಾಡುವಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ.
ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.
ಚುನಾವಣಾ ಫಲಿತಾಂಶದ ನಂತರ ಕಾದಿದೆ ಶಾಕ್
ಮೇ ೨೩ರಂದು ಲೋಕಸಭೆ ಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿರುವುದರಿಂದ ತೈಲ ದರ ಏರಿಕೆಯ ಶಾಕ್ ಕಾದಿದೆ ಎನ್ನಲಾಗಿದೆ. ಇಲ್ಲಿಯವರೆಗಿನ ನಷ್ಟದ ಹೊರೆಯನ್ನು ತೈಲ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿ ಬರೆ ಎಳೆಯಲಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಸಾಕಷ್ಟು ಏರಿಳಿತ ಕಂಡಿದೆ.
ಪ್ರಮುಖ ಬದಲಾವಣೆ
ಸೋಮವಾರದಂದು ಪೆಟ್ರೋಲ್ ಬೆಲೆ 8-10 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಪ್ರಮುಖ ನಗರಗಳಲ್ಲಿ 15-16 ಪೈಸೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್) ತಿಳಿಸಿದೆ. ಮಂಗಳವಾರ ಕೂಡ ತೈಲ ದರದಲ್ಲಿ ಏರಿಕೆಯಾಗಿದೆ.
ಮುಂಬೈ, ಹೊಸ ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ.
ತೈಲ ಆಮದು ನಿಷೇಧ ಎಫೆಕ್ಟ್?
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ನಿರ್ಬಂಧ ಹೇರಿರುವುದರಿಂದ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಲಿದೆ.
ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್, ಯುಎಇಯಿಂದ 10 ಲಕ್ಷ ಟನ್ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಲಿದೆ. ಈ ಕಂಪನಿಯೊಂದಿಗೆ ಬಿಸಿನೆಸ್ ಆರಂಭಿಸಿದರೆ 7 ಲಕ್ಷ ನೀಡಲಿದೆ


Click it and Unblock the Notifications