For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯ ನ್ಯಾಯಾಂಗ ಬಂಧನದ ಅವಧಿಯನ್ನು ಲಂಡನ್‌ ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ಜೂನ್ 27ರವರೆಗೆ ವಿಸ್ತರಿಸಿದೆ.

|

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯ ನ್ಯಾಯಾಂಗ ಬಂಧನದ ಅವಧಿಯನ್ನು ಲಂಡನ್‌ ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ಜೂನ್ 27ರವರೆಗೆ ವಿಸ್ತರಿಸಿದೆ.

ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಹದಿಮೂರು ಕೋಟಿ ವಂಚನಾ ಹಗರಣದಲ್ಲಿ ಸಿಲುಕಿರುವ ನೀರವ್ ಮೋದಿ 2018ರ ಜನವರಿಯಲ್ಲಿ ಭಾರತ ಬಿಟ್ಟು ನೀರವ್‌ ಪರಾರಿಯಾಗಿದ್ದರು. ನಂತರ ಮಾರ್ಚ್ 19ರಂದು ಬಂಧಿಸಲಾಗಿತ್ತು. ನೀರವ್ ಮೋದಿಯನ್ನು ಲಂಡನ್‌ನ ವ್ಯಾಂಡ್ಸ್‌ವರ್ತ್‌ ಜೈಲಿನಲ್ಲಿ ಇರಿಸಲಾಗಿದ್ದು, ಇದು ಬ್ರಿಟನ್ ನ ಕುಖ್ಯಾತ ಸೆಲ್ ಎಂದು ಪರಿಗಣಿಸಲಾಗಿದೆ.

ನೀರವ್ ಮೋದಿಯ ಮೂರನೇ ಜಾಮೀನು ಅರ್ಜಿಯನ್ನೂ ಈ ತಿಂಗಳ ಆರಂಭದಲ್ಲಿಯೇ ಲಂಡನ್ ಕೋರ್ಟ್‌ ವಜಾ ಮಾಡಿತ್ತು. ನೀರವ್ ಮೋದಿಯನ್ನು ಗುರುವಾರದಂದು ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ನ ಚೀಫ್‌ ಮ್ಯಾಜಿಸ್ಪ್ರೇಟ್‌ ಎದುರು ಹಾಜರು ಪಡಿಸಲಾಯಿತು. ಲಂಡನ್‌ ಕೋರ್ಟ್ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದ್ದು, ಒಂದು ವೇಳೆ ನೀರವ್ ಮೋದಿಯನ್ನು ಬ್ರಿಟನ್‌ನಿಂದ ಗಡಿಪಾರು ಮಾಡಿದರೆ ಭಾರತದ ಯಾವ ಜೈಲಿನಲ್ಲಿ ನೀರವ್‌ರನ್ನು ಇಡಲು ವ್ಯವಸ್ಥೆ ಮಾಡಿರುವಿರಿ ಎಂದು ಪ್ರಶ್ನಿಸಿದೆ. ಇದಕ್ಕೆ ಸಂಬಂಧಿಸಿದಂತೆ 14 ದಿನಗಳೊಳಗೆ ವಿವರಗಳನ್ನು ಸಲ್ಲಿಸುವಂತೆ ಭಾರತ ಸರ್ಕಾರವನ್ನು ಕೇಳಿದೆ.
ವಿಚಾರಣೆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಂಡನ್‌ ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ನ ಹೊರ ಆವರಣದಲ್ಲಿದ್ದರು.

Read more about: banking money frauds
English summary

UK court extends Nirav Modi's custody till June 27

The Westminster Magistrates Court in London has extended judicial custody of fugitive diamantaire Nirav Modi till June 27.
Story first published: Friday, May 31, 2019, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X