For Quick Alerts
ALLOW NOTIFICATIONS  
For Daily Alerts

ಶಾಕಿಂಗ್ ನ್ಯೂಸ್! ಆರ್ಬಿಐ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವುದಿಲ್ಲ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2-3 ವರ್ಷಗಳ ಕಾಲ ಯಾವುದೇ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವುದಿಲ್ಲ ಎಂದು ನಿರ್ಧರಿಸಿದೆ ಎಂದು ಹೇಳಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2-3 ವರ್ಷಗಳ ಕಾಲ ಯಾವುದೇ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವುದಿಲ್ಲ ಎಂದು ನಿರ್ಧರಿಸಿದೆ ಎಂದು ಹೇಳಿದೆ.

ಶಾಕಿಂಗ್ ನ್ಯೂಸ್! ಆರ್ಬಿಐ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವುದಿಲ್ಲ

ಸೋಮವಾರದಿಂದ ಆರ್ಬಿಐ ವಿತ್ತೀಯ ನೀತಿಯ ವಿಮರ್ಶೆ ನಡೆಯುತ್ತಿದ್ದು, ಜೂನ್ 6 ರವರೆಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆರ್ಬಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಮಾಹಿತಿ ಪ್ರಕಾರ ಆರ್ಬಿಐ ಹೊಸ ಬ್ಯಾಂಕುಗಳಿಗೆ ಪರವಾನಗಿಗೆ ಫುಲ್ ಸ್ಟಾಪ್ ಹಾಕಿದೆ. ಆರ್ಬಿಐ ಹಣಕಾಸು ಮೇಲ್ವಿಚಾರಣೆ ಮಂಡಳಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆರ್ಬಿಐನ ಹಣಕಾಸು ಮೇಲ್ವಿಚಾರಣೆಯ ಮಂಡಳಿಯು ಹೊಸ ಬ್ಯಾಂಕಿಂಗ್ ಪರವಾನಗಿಗೆ ಮುಂದುವರಿಯದಿರಲು ತಾತ್ವಿಕ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಸ್ತಿತ್ವದಲ್ಲಿರುವ ಹೊಸ ಬ್ಯಾಂಕುಗಳ ಪರಿಸ್ಥಿತಿಯನ್ನು ಪರಿಗಣಿಸಿ ಹೊಸ ಪರವಾನಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಬ್ಯಾಂಕಿಂಗ್ ವಲಯದ ಪ್ರಸಕ್ತ ಸ್ಥಿತಿಯನ್ನು ಪರಿಗಣಿಸಿ ಆರ್ಬಿಐ ಈ ನಿರ್ಧಾರ ಕೈಗೊಂಡಿದೆ. ಹೊಸ ಬ್ಯಾಂಕುಗಳ ಪರಿಸ್ಥಿತಿಯನ್ನು ಅವಲೋಕಿಸಿ ಆರ್ಬಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
2015 ರಲ್ಲಿ ಐಡಿಎಫ್ಸಿ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕುಗಳಿಗೆ ಪರವಾನಗಿ ನೀಡಲಾಗಿತ್ತು. ಆ ವೇಳೆ 10 ಪೇಮೆಂಟ್ ಬ್ಯಾಂಕ್ ಹಾಗೂ 11 ಸಣ್ಣ ಹಣಕಾಸು ಬ್ಯಾಂಕುಗಳಿಗೆ ಪರವಾನಗಿ ನೀಡಲಾಗಿತ್ತು. ಆದರೆ ಐಡಿಎಫ್ಸಿ ಬ್ಯಾಂಕ್ Capital First ಜೊತೆ ವಿಲೀನ ಮಾಡಿಕೊಂಡಿತ್ತು.
ಆಗ ರಘುರಾಮ್ ರಾಜನ್, ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದರು. ಆ ವೇಳೆ ರಾಜನ್ ಆನ್ ಟಾಪ್ ನಿಯಮ ಜಾರಿಗೆ ತಂದಿದ್ದರು.

English summary

RBI will not issue new banking license for 2-3 years

The Reserve Bank of India (RBI) has decided to not give any new banking licence to players for 2-3 years, sources told Zee Media.
Story first published: Tuesday, June 4, 2019, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X