ಏರ್ಟೆಲ್ ಎರಡು ಪ್ಲಾನ್ ಘೋಷಣೆ, ಅನ್‍ಲಿಮಿಟೆಡ್ ಕರೆ ಆಫರ್..
ದೇಶದ ಟೆಲಿಕಾಂ ವಲಯದ ಅಗ್ರ ಕಂಪನಿಯಾಗಿದ್ದ ಏರ್ಟೆಲ್ ಈಗ ಜಿಯೋ ಹಾಗು ವೋಡಾಫೋನ್-ಐಡಿಯ ಜೊತೆ ಭಾರೀ ಪೈಪೋಟಿ ಹೊಂದಿದೆ. ಏರ್ಟೆಲ್ ತನ್ನ ಗ್ರಾಹಕರನ್ನು ಸೆಳೆಯಲು ಹೊಸ ಎರಡು ಯೋಜನೆಗಳನ್ನು ಘೋಷಿಸಿದೆ.
ದೇಶದ ಟೆಲಿಕಾಂ ವಲಯದ ಅಗ್ರ ಕಂಪನಿಯಾಗಿದ್ದ ಏರ್ಟೆಲ್ ಈಗ ಜಿಯೋ ಹಾಗು ವೋಡಾಫೋನ್-ಐಡಿಯ ಜೊತೆ ಭಾರೀ ಪೈಪೋಟಿ ಹೊಂದಿದೆ. ಏರ್ಟೆಲ್ ತನ್ನ ಗ್ರಾಹಕರನ್ನು ಸೆಳೆಯಲು ಹೊಸ ಎರಡು ಯೋಜನೆಗಳನ್ನು ಘೋಷಿಸಿದೆ.

ಬೇರೆ ಬೇರೆ ಪ್ರದೇಶದ ಪೋಸ್ಟ್ ಪೇಡ್ ಗ್ರಾಹಕರು ರೂ. 349 ಹಾಗೂ ರೂ. 399 ಈ ಎರಡು ಯೋಜನೆಗಳ ಲಾಭ ಪಡೆಯಲಿದ್ದಾರೆ.
ರೂ. 349 ಪ್ಲಾನ್ ಅನ್ನು ಕರ್ನಾಟಕ, ಚೆನ್ನೈ, ಆಂಧ್ರಪ್ರದೇಶ, ದೆಹಲಿ ಹಾಗೂ ಎನ್ಸಿಆರ್ ಗ್ರಾಹಕರಿಗಾಗಿ ಕಂಪನಿ ಪರಿಚಯಿಸಿದೆ. ರೂ. 399 ಪ್ಲಾನ್ ದೇಶದ ಉಳಿದ ಭಾಗದ ಗ್ರಾಹಕರಿಗೆ ಸಿಗಲಿದೆ.
ಈ ಯೋಜನೆಗಳ ಮೂಲಕ ಗ್ರಾಹಕರು ಡೇಟಾ, ಅನಿಯಮಿತ ಕರೆ ಸೌಲಭ್ಯ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಪಡೆಯಲಿದ್ದಾರೆ.
ರೂ. 349 ಯೋಜನೆಯಲ್ಲಿ ಅನಿಯಮಿತ ಸ್ಥಳೀಯ, ಎಸ್ಟಿಡಿ, ರೋಮಿಂಗ್ ಕರೆಗಳು, 5ಜಿಬಿ ಡೇಟಾ ಹಾಗೂ 100 ಎಸ್ಎಂಎಸ್ ಸೌಲಭ್ಯವನ್ನು ಗ್ರಾಹಕರು ಆನಂದಿಸಲಿದ್ದಾರೆ. ZEE5 ಮತ್ತು Airtel TV ಪ್ರೀಮಿಯಂ ಪ್ರವೇಶ ಇರಲಿದೆ.
ರೂ. 399 ಪ್ಲಾನ್ ನಲ್ಲಿ ಡೇಟಾ ರೋಲ್ ಓವರ್ ಜೊತೆ 40ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕರೆಗಳು ಲಭ್ಯವಾಗಲಿವೆ. ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ. ವೊಡಾಫೋನ್ ಪ್ಯಾಮಿಲಿ ಪ್ಯಾಕ್ ಬಂಪರ್ ಆಫರ್! 200 ಜಿಬಿ ಡೇಟಾ ಸೌಲಭ್ಯ


Click it and Unblock the Notifications