ಆರ್ಬಿಐನಿಂದ ಸಿಹಿಸುದ್ದಿ, ಎಟಿಎಂ ಶುಲ್ಕ ರದ್ದಾಗಲಿದೆ..!

ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಂಡಿದ್ದು, ಬ್ಯಾಮಕಿಂಗ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಂಡಿದ್ದು, ಬ್ಯಾಮಕಿಂಗ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈಗಾಗಲೇ ಆರ್ಟಿಜಿಎಸ್ ಹಾಗೂ ನೆಪ್ಟ್ ವಹಿವಾಟು ಸೇವಾ ಶುಲ್ಕ ರದ್ದು ಮಾಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಆರ್ಬಿಐನಿಂದ ಸಿಹಿಸುದ್ದಿ, ಎಟಿಎಂ ಶುಲ್ಕ ರದ್ದಾಗಲಿದೆ..!

ಇದರ ಜೊತೆಗೆ ಎಟಿಎಂ ವಹಿವಾಟು ಶುಲ್ಕ ರದ್ದತಿ ಬಗ್ಗೆಯೂ ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ಸೂಚನೆಯನ್ನು ಆರ್ಬಿಐ ನೀಡಿದೆ. ಎಟಿಎಂ ವಹಿವಾಟು ಶುಲ್ಕ ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಿತಿಯೊಂದರ ರಚನೆಗೆ ನಿರ್ಧರಿಸಿದೆ. ಆ ಸಮಿತಿ ನೇತೃತ್ವವನ್ನು ಐಬಿಒನ ಸಿಇಒ ವಹಿಸಲಿದ್ದಾರೆ.
ದೇಶಾದ್ಯಂತ ಲಕಷಾಂತರ ಎಟಿಎಂ ಬಳಕೆದಾರರಿದ್ದು, ದಿನೇದಿನೇ ಎಟಿಎಂ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮೊದಲಿನಿಂದಲೂ ಬ್ಯಾಂಕುಗಳು ವಿಧಿಸುವ ಎಟಿಎಂ ವಹಿವಾಟು ಶುಲ್ಕದ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕೂಗು ಕೇಳಿ ಬರುತ್ತಿದ್ದು, ಶುಲ್ಕ ರದ್ದುಗೊಳಿಸುವಂತೆಯೂ ಗ್ರಾಹಕರು ಆಗ್ರಹಿಸಿದ್ದಾರೆ.
ಎಟಿಎಂ ವಹಿವಾಟು ಶುಲ್ಕ ಸಮಸ್ಯೆ ಬಗೆಹರಿಸಲು ಆರ್ಬಿಐ ಸಮಿತಿಯೊಂದನ್ನು ರಚಿಸಿದ್ದು, ಎರಡು ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ. ತದನಂತರ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಮೊದಲ ಸಭೆ ನಂತರ ಎರಡು ತಿಂಗಳಲ್ಲಿ ಸಮಿತಿ ತನ್ನ ಶಿಫಾರಸ್ಸನ್ನು ಆರ್ಬಿಐಗೆ ನೀಡಬೇಕು. ಅದಾದ ಒಂದು ವಾರದಲ್ಲಿ ಆರ್ಬಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+