For Quick Alerts
ALLOW NOTIFICATIONS  
For Daily Alerts

RTGS, NEFT ಮೇಲಿನ ವಹಿವಾಟು ಶುಲ್ಕ ರದ್ದು

ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಂತಸದ ಸುದ್ದಿ ನೀಡಿದೆ. ಆರ್ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ಕಡಿತ ಮಾಡಿದೆ.

|

ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಂತಸದ ಸುದ್ದಿ ನೀಡಿದೆ. ಆರ್ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ಕಡಿತ ಮಾಡಿದೆ. ಇದರ ಜೊತೆಗೆ ಆರ್ಟಿಜಿಎಸ್ ಹಾಗೂ ನೆಪ್ಟ್ ವ್ಯವಹಾರಗಳ ಮೇಲೆ ವಿಧಿಸಲಾಗುತ್ತಿದ್ದ ವಹಿವಾಟು ಶುಲ್ಕವನ್ನು ರದ್ದುಗೊಳಿಸಿದೆ.

RTGS, NEFT ಮೇಲಿನ ವಹಿವಾಟು ಶುಲ್ಕ ರದ್ದು

ಆರ್ಟಿಜಿಎಸ್
ಗ್ರಾಹಕರು ದೊಡ್ಡ ಮೊತ್ತವನ್ನು ಉಚಿತವಾಗಿ ಆನ್ಲೈನ್ ಮೂಲಕ ವರ್ಗಾವಣೆ ಮಾಡಬಹುದು. ಇಲ್ಲಿಯವರೆಗೆ ಬೇರೆ ಬೇರೆ ಬ್ಯಾಂಕುಗಳು ಆರ್ಟಿಜಿಎಸ್ ವಹಿವಾಟಿನ ಮೇಲೆ ಬೇರೆ ಬೇರೆ ಶುಲ್ಕ ವಿಧಿಸುತ್ತಿದ್ದವು. ಆರ್ಟಿಜಿಎಸ್ (Real Time Gross Settlement System) ಒಂದು ಹಣ ವರ್ಗಾವಣೆ ಮಾಧ್ಯಮವಾಗಿದ್ದು, ದೊಡ್ಡ ಮೊತ್ತದ ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಇದರ ಮೂಲಕ ಕನಿಷ್ಠ ರೂ. 2 ಲಕ್ಷ ವರ್ಗಾವಣೆ ಮಾಡಬಹುದು.
ಭಾನುವಾರ ಹಾಗೂ ರಜಾ ದಿನಗಳಲ್ಲಿ ಆರ್ಟಿಜಿಎಸ್ ವಹಿವಾಟು ಲಭ್ಯವಿರುವುದಿಲ್ಲ. ಆನ್ಲೈನ್ ಹಾಗೂ ಬ್ಯಾಂಕ್ ಶಾಖೆ ಮೂಲಕ ಇದರ ಬಳಕೆ ಮಾಡಬಹುದು.

ಸಕಾ್ರಿ ಸ್ವಾಮ್ಯದ ಎಸ್ಬಿಐ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯೊಳಗೆ ರೂ. 2 ಲಕ್ಷದಿಂದ ರೂ. 5 ಲಕ್ಷ ವರ್ಗಾವಣೆ ಮಾಡಿದರೆ 25 ರೂಪಾಯಿ ಶುಲ್ಕ ವಿಧಿಸುತ್ತಿತ್ತು. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ 51 ರೂಪಾಯಿ ಶುಲ್ಕ ನೀಡಬೇಕಾಗಿತ್ತು.

ನೆಪ್ಟ್ ಶುಲ್ಕ
ನೆಫ್ಟ್ ( National Electronic Funds Transfer ) ಮಾಧ್ಯಮದ ಮೂಲಕವೂ ಆನ್ಲೈನ್ ಹಾಗೂ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಬಹುದು. ಇದು ವರ್ಗಾವಣೆ ಮಾಡಿದ ತಕ್ಷಣ ತಲುಪುವುದಿಲ್ಲ. ವರ್ಗಾವಣೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಎಸ್ಬಿಐ ಗ್ರಾಹಕರು ನೆಫ್ಟ್ ಮೂಲಕ ರೂ. 10,000 ವರ್ಗಾವಣೆ ಮಾಡಿದರೆ ರೂ. 50 ಶುಲ್ಕ ಪಾವತಿ ಮಾಡಬೇಕಾಗಿತ್ತು. ರು. 1 ಲಕ್ಷಕ್ಕೆ 5 ರೂಪಾಯಿ, 1 ರಿಂದ 2 ಲಕ್ಷಕ್ಕೆ 15 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು. ಈಗ ಈ ಎರಡೂ ಶುಲ್ಕ ಪಾವತಿ ರದ್ದಾಗಿದೆ.

ಇನ್ನುಮುಂದೆ ನಿಮ್ಮ ಬ್ಯಾಂಕುಗಳು ಆರ್ಟಿಜಿಎಸ್ ಮತ್ತು ನೆಫ್ಟ್ ಶುಲ್ಕಗಳನ್ನು ವಿಧಿಸಿದ್ದರೆ ನೇರವಾಗಿ ಬ್ಯಾಂಕಿನವರಿಗೆ ವಿಚಾರಿಸಬಹುದು.

English summary

RBI removes charges on RTGS/NEFT transactions

The Reserve Bank of India on Thursday said it has done away with charges on fund transfers through RTGS and NEFT routes to boost digital transactions.
Story first published: Thursday, June 6, 2019, 16:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X