ಗುಡ್ ನ್ಯೂಸ್! ರೆಪೊ ದರ ಕಡಿತ, ಗೃಹ-ವಾಹನ ಸಾಲ ಇಳಿಕೆ ಸಾಧ್ಯತೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರೀಕ್ಷೆಯಂತೆ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಕಡಿತ ಮಾಡಿದೆ. ಇಂದು ನಡೆದ ಆರ್ಬಿಐ ದ್ವೈಮಾಸಿಕ ವಿತ್ತೀಯ ನೀತಿಯ ವಿಮರ್ಶೆ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ರೆಪೊ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆಯಿದೆ.
ಮೂರು ದಿನಗಳ ಎಂಪಿಸಿ ಸಭೆಯ ಕೊನೆಯಲ್ಲಿ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ 2019-20ರ ದ್ವೈಮಾಸಿಕ ಹಣಕಾಸು ನೀತಿಯನ್ನು ಘೋಷಿಸಿದರು. ಆರ್ಥಿಕ ಬೆಳವಣಿಗೆ ಕುಸಿತ ಮತ್ತು ಜಾಗತಿಕ ಅನಿಶ್ಚಿತತೆ ಹೆಚ್ಚುತ್ತಿರುವ ಮಧ್ಯೆ ಆರ್ಬಿಐ ಅಲ್ಪಾವಧಿಯ ಸಾಲ ದರವನ್ನು (ರೆಪೋ ದರ) 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಿದೆ.
ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ರೆಪೋ ದರ ಇಳಿಕೆ ಮಾಡಿರುವುದರಿಂದ ಬ್ಯಾಂಕುಗಳು ಇದರ ಲಾಭವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ಮತ್ತು ಹಣದುಬ್ಬರ ಮುನ್ಸೂಚನೆಯನ್ನು ಎಂಪಿಸಿ ಪರಿಷ್ಕರಿಸಿದೆ. ಜಿಡಿಪಿ ಬೆಳವಣಿಗೆಯನ್ನು ಹಿಂದಿನ ಶೇ. 7.2 ರಿಂದ ಶೇ. 7ಕ್ಕೆ ಪರಿಷ್ಕರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+