For Quick Alerts
ALLOW NOTIFICATIONS  
For Daily Alerts

ಸಿಗ್ನಾ ಟಿಟಿಕೆ ವಿಮಾ ಸಂಸ್ಥೆ ಹೆಸರು ಇನ್ಮುಂದೆ ಮಣಿಪಾಲ ಸಿಗ್ನಾ ಹೆಲ್ತ್

|

ಮುಂಬೈ, ಜೂನ್ 7 ಸಿಗ್ನಾ ಟಿಟಿಕೆ ಹೆಲ್ತ್ ಇನ್ಸೂರೆನ್ಸ್, ಅಮೆರಿಕ ಮೂಲದ ಜಾಗತಿಕ ಆರೋಗ್ಯ ಸೇವಾ ಸಂಸ್ಥೆಯಾದ ಸಿಗ್ನಾ ಕಾರ್ಪೊರೇಷನ್ ಮತ್ತು ಭಾರತೀಯ ಸಂಸ್ಥೆ, ಟಿಟಿಕೆ ಗ್ರೂಪ್, ಮಣಿಪಾಲ ಗ್ರೂಪ್ ಇಂದು ಜಂಟಿಯಾಗಿ ಕಂಪನಿ ಹೆಸರನ್ನು ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಬದಲಿಸಿರುವುದನ್ನು ಘೋಷಿಸಿವೆ. ಇದಕ್ಕೆ ಪೂರಕವಾದ ಶಾಸನಬದ್ಧ ಅನುಮೋದನೆಯನ್ನು ಸಂಸ್ಥೆಯು ಪಡೆದುಕೊಂಡಿದೆ.

ನೂತನ ಪರಿಷ್ಕರಣೆ ನಂತರ ಸಿಗ್ನಾ ಕಾರ್ಪೊರೇಷನ್ ಸಂಸ್ಥೆಯಲ್ಲಿ ಶೇ 49ರಷ್ಟು ಪಾಲು ಹೊಂದಿರಲಿದೆ. ಮಣಿಪಾಲ ಗ್ರೂಪ್ ತನ್ನ ಪಾಲನ್ನು ಶೇ 51ಕ್ಕೆ ಹೆಚ್ಚಿಸಲಿದೆ. ಟಿಟಿಕೆ ಗ್ರೂಪ್ ಈ ಜಂಟಿ ಉದ್ಯಮದಿಂದ ಹೊರಬರಲು ಯೋಜಿಸಿದ್ದು, ಇದಕ್ಕೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಅನುಮೋದನೆಯ ನಂತರ ಈ ನಿರ್ಗಮನ ಜಾರಿಗೆ ಬರಲಿದೆ.

ಮಣಿಪಾಲ್ ಎಜು ಮತ್ತು ಮೆಡಿಕಲ್ ಗ್ರೂಪ್‍ನ ಅಧ್ಯಕ್ಷ ಡಾ.ರಂಜನ್ ಪೈ ಅವರು, ಮಣಿಪಾಲ್ ಗ್ರೂಪ್‍ನ ಸಮಗ್ರ ಆರೋಗ್ಯ ಸೇವೆ ಮತ್ತು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನೆಟ್‍ವಕ್ರ್ಸ್ ಮತ್ತು ಸಿಗ್ನಾ ಗ್ಲೋಬಲ್ ಪರಿಣಿತಿಯು ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸುರೆನ್ಸ್ ಕಂಪನಿಗೆ ನಿಜವಾದ ಅರ್ಥದಲ್ಲಿ ಆರೋಗ್ಯ ಸೇವಾಸಂಸ್ಥೆಯಾಗಿ ರೂಪಿಸಲಿದೆ. ಎರಡೂ ಸಂಘಟನೆಗಳು ಉತ್ತಮ ಸಂಸ್ಕೃತಿಯನ್ನು ಹೊಂದಿದ್ದು, ಪರಸ್ಪರ ಶಕ್ತಿಯಿಂದ ಬಲಪಡೆಯಲಿವೆ. ಸುಲಭ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ದೇಶದ ಅಸಂಖ್ಯ ಜನರಿಗೆ ಕಲ್ಪಿಸಲಿದ್ದು, ಭವಿಷ್ಯದ ಬೆಳವಣಿಗೆ ಹಾದಿಕಂಡು ಕೊಳ್ಳಲಿದೆ' ಎಂದರು.

ಸಿಗ್ನಾ ಟಿಟಿಕೆ ವಿಮಾ ಸಂಸ್ಥೆ ಇನ್ಮುಂದೆ ಮಣಿಪಾಲ ಸಿಗ್ನಾ ಹೆಲ್ತ್

ಮಣಿಪಾಲ್ ಗ್ರೂಪ್ ವೈವಿಧ್ಯಮಯ ಉದ್ಯಮ ಮಾದರಿಗಳನ್ನು ಒಳಗೊಂಡಿದ್ದು, ಗ್ರಾಹಕರ ವಿವಿಧ ಅಗತ್ಯಗಳನ್ನು ಈಡೇರಿಸಲಿದೆ. ಇದರಲ್ಲಿ ವಿಶ್ವದರ್ಜೆ ಗುಣಮಟ್ಟದ ಆಸ್ಪತ್ರೆಗಳು, ಆರೋಗ್ಯ ಆರೈಕೆ ಸೇವಾ ಪ್ರಕ್ರಿಯೆಗಳು, ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು ಸೇರಿವೆ. 200 ವರ್ಷಕ್ಕೂ ಹೆಚ್ಚಿನ ಅನುಭವವುಳ್ಳ ಸಿಗ್ನಾ ಕಾರ್ಪೊರೇಷನ್ ಸುಮಾರು 30 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 160 ಮಿಲಿಯನ್‍ಗೂ ಅಧಿಕ ಗ್ರಾಹಕರ ಬಾಂಧವ್ಯವನ್ನು ವಿಶ್ವದಾದ್ಯಂತ ಹೊಂದಿದೆ. ಕಂಪನಿಯು ಈಗ ಹೊಸ ಹೆಸರನ್ನು ಹೊಂದಿದ್ದು, ಇದು ಪಾಲುದಾರಿಕೆ ಹೊಸ ಬ್ರಾಂಡ್ ವ್ಯಾಲ್ಯೂ ಅನ್ನುಬಿಂಬಿಸಲಿದೆ. ಆರೋಗ್ಯ ಸೇವೆಯನ್ನು ಒದಗಿಸುವುದು ಹಾಗೂ ಆರೋಗ್ಯಸೇವೆಗೆ ಹಣಕಾಸು ನೆರವು ಕುರಿತ ಸೇವೆಯನ್ನು ಭಾರತೀಯ ಮಾರುಕಟ್ಟೆಗೆ ಒದಗಿಸಲಿದೆ' ಎಂದು ಅವರು ತಿಳಿಸಿದರು.

ಹೊಸ ಬ್ರಾಂಡ್ ಹಾಗೂ ಹೆಸರು ಬದಲಾವಣೆಯು ಕಂಪನಿಯ ಹಾಲಿ ಉದ್ಯಮದ ಮಾದರಿ, ಏಜೆಂಟರು, ಬ್ಯಾಂಕ್ ಅಶ್ಯುರೆನ್ಸ್ ಪಾಲುದಾರರು ಹಾಗೂ ಗ್ರಾಹಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕಂಪನಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೇ ಮುಂದುವರಿಯುವರು.

ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್: ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ (ಈ ಮೊದಲಿನ ಸಿಗ್ನಾ ಟಿಟಿಕೆ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್) ಭಾರತೀಯ ಸಂಸ್ಥೆಯಾದ ಟಿಟಿಕೆ ಗ್ರೂಪ್, ಮಣಿಪಾಲ್ ಗ್ರೂಪ್ ಹಾಗೂ ಸುಮಾರು 200 ವರ್ಷ ಅನುಭವವಿರುವ ಜಾಗತಿಕ ಆರೋಗ್ಯ ಸೇವಾ ಸಂಸ್ಥೆಯಾದ ಸಿಗ್ನಾ ಕಾರ್ಪೊರೇಷನ್ನ ಜಂಟಿ ಉದ್ಯಮವಾಗಿದೆ. ಮಣಿಪಾಲ ಸಿಗ್ನಾದ ಮುಖ್ಯ ಕಚೇರಿ ಮುಂಬೈಯಲ್ಲಿ ಇದ್ದು, ಪ್ರಮುಖ ಮೆಟ್ರೊ ಮತ್ತು ಪಟ್ಟಣಗಳನ್ನು ಒಳಗೊಂಡು 28 ಬ್ರಾಂಚ್ ಕಚೇರಿಯನ್ನು ಹೊಂದಿದೆ. ಕಂಪನಿಯು ಅತ್ಯುತ್ತಮ ವಿತರಣಾ ಜಾಲವನ್ನು ಹೊಂದಿದೆ.

20,000 ಏಜೆಂಟರು, 250ಕ್ಕೂ ಅಧಿಕ ಪ್ರಮುಖ ಬ್ರೋಕರ್ ಗಳು, 7,000ಕ್ಕೂ ಅಧಿಕ ಪಾಯಿಂಟ್ ಆಫ್ ಸೇಲ್ಸ್ ಗಳು ಈ ವಿತರಣಾ ನೆಟ್‍ವರ್ಕ್‍ನಲ್ಲಿ ಇವೆ. ಮಣಿಪಾಲ್ ಸಿಗ್ನಾ ಇದರ ಜೊತೆಗೆ 17 ಪ್ರಮುಖ ಬ್ಯಾಂಕ್‍ಗಳು, ಎನ್‍ಬಿಎಫ್‍ಸಿ ಮತ್ತು ಎಂಎಫ್‍ಐ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಆರೋಗ್ಯ ಸೇವಾ ಪರಿಕರಗಳನ್ನು ಒದಗಿಸಲಿದೆ. 6500ಕ್ಕೂ ಅಧಿಕ ವಿಶ್ವಾಸಾರ್ಹ ಆಸ್ಪತ್ರೆಗಳ ಜಾಲವನ್ನು ವಿವಿಧ ನಗರಗಳು, ಎರಡು ಮತ್ತು ಮೂರನೇ ಶ್ರೇಣಿಯ ಪಟ್ಟಣಗಳಲ್ಲಿ ಹೊಂದಿದೆ.

English summary

Cigna TTK Health Insurance Changes Company Name to ManipalCigna Health Insurance

Manipal Group will increase its stake to 51 percent and TTK Group to exit from this joint venture after receiving all necessary regulatory approvals from the Insurance Regulatory and Development Authority of India (“IRDAI”), while Cigna Corporation will continue to hold its 49 percent stake in the insurance venture.
Story first published: Friday, June 7, 2019, 11:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X