For Quick Alerts
ALLOW NOTIFICATIONS  
For Daily Alerts

ಬೈಕ್-ಕಾರು ವಾಹನ ಸವಾರರಿಗೆ ಕಹಿಸುದ್ದಿ! ಥರ್ಡ್ ಪಾರ್ಟಿ ವಿಮಾ ಕಂತು ಹೆಚ್ಚಳ

2019–20 ನೇ ಹಣಕಾಸು ವರ್ಷದಲ್ಲಿ ಖಾಸಗಿ ದ್ವಿಚಕ್ರ ವಾಹನ ಮತ್ತು ಕಾರುಗಳ ಥರ್ಡ ಪಾರ್ಟಿ ಹೊಣೆಗಾರಿಕೆ ವಿಮಾ ಕಂತುಗಳಿಗೆ ಪ್ರೀಮಿಯಂ ದರಕ್ಕೆ ಸಂಬಂಧಿಸಿದಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಆದೇಶ ಹೊರಡಿಸಿದೆ.

|

2019-20 ನೇ ಹಣಕಾಸು ವರ್ಷದಲ್ಲಿ ಖಾಸಗಿ ದ್ವಿಚಕ್ರ ವಾಹನ ಮತ್ತು ಕಾರುಗಳ ಥರ್ಡ ಪಾರ್ಟಿ ಹೊಣೆಗಾರಿಕೆ ವಿಮಾ ಕಂತುಗಳಿಗೆ ಪ್ರೀಮಿಯಂ ದರಕ್ಕೆ ಸಂಬಂಧಿಸಿದಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಆದೇಶ ಹೊರಡಿಸಿದೆ.
ಹೊಸ ದರಗಳ ಪ್ರಕಾರ, ಜೂನ್ 16, 2019ರಿಂದ ಕಾರು, ದ್ವಿಚಕ್ರ ವಾಹನ ಮತ್ತು ಸಾರಿಗೆ ವಾಹನಗಳ ಥರ್ಡ್ ಪಾರ್ಟಿ ವಿಮಾ ಕಂತುಗಳಿಗಾಗಿ ನೀವು ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.
2019-20ಕ್ಕೆ ಸಣ್ಣ ಮತ್ತು ಮಧ್ಯಮ ಖಾಸಗಿ ವಾಹನಗಳಿಗೆ ಶೇ. 12-12.5 ರಷ್ಟು ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಕಂತನ್ನು ವಿಮಾ ನಿಯಂತ್ರಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಹೆಚ್ಚಿಸಿದೆ. ನಿಮ್ಮ ದ್ವಿಚಕ್ರ ವಾಹನಗಳ ಇನ್ಸೂರೆನ್ಸ್ ಪ್ರೀಮಿಯಂ ಕಡಿಮೆ ಮಾಡೋದು ಹೇಗೆ?

ಶೇ. 21ರಷ್ಟು ಹೆಚ್ಚಳ

ಶೇ. 21ರಷ್ಟು ಹೆಚ್ಚಳ

ಈ ಮೊದಲು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕರಡು ಪ್ರಸ್ತಾವ ಸಿದ್ಧಪಡಿಸಿ ಅಭಿಪ್ರಾಯ ಆಹ್ವಾನಿಸಲಾಗಿತ್ತು. ಈಗ ವಿಮಾ ಕಂತು ಹೆಚ್ಚಳಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ.
150 ಸಿಸಿ ಮತ್ತು 350 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳ ಥರ್ಡ್ ಪಾರ್ಟಿ ಕಂತು ಶೇ. 21ರಷ್ಟು ಹೆಚ್ಚಳವಾಗಲಿದೆ.

ವಾಹನ ಸಾಮರ್ಥ್ಯ ಆಧರಿಸಿ ವಿಮೆ

ವಾಹನ ಸಾಮರ್ಥ್ಯ ಆಧರಿಸಿ ವಿಮೆ

ಹೊಸ ದ್ವಿಚಕ್ರ ವಾಹನಗಳಿಗೆ 5 ವರ್ಷಗಳವರೆಗೆ, ಹೊಸ ಕಾರುಗಳಿಗೆ 3 ವರ್ಷಗಳವರೆಗೆ ಒಂದು ಬಾರಿಗೆ ಪಾವತಿಸುವ ಥರ್ಡ್ ಪಾರ್ಟಿ ಕಂತು ವಾಹನಗಳ ಸಿಸಿ ಸಾಮರ್ಥ್ಯ ಆಧರಿಸಿ ನಿಗದಿಪಡಿಸಲಾಗಿದೆ.
ಕಾರುಗಳಿಗೆ ರೂ. 5286 ರಿಂದ ರೂ. 24,305 ವರೆಗೆ, ದ್ವಿಚಕ್ರ ವಾಹನಗಳಿಗೆ ರೂ. 1045 ನಿಂದ ರೂ. 13,034ವರೆಗೆ ವಿಮೆ ಇರಲಿದೆ. ಥರ್ಡ್ ಪಾರ್ಟಿ ವಿಮಾ ಕಂತು ಹೆಚ್ಚಳ ಮಾಡಿರುವುದರಿಂದ ವಾಹನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಥರ್ಡ್ ಪಾರ್ಟಿ ವಿಮೆ ಖಚಿತಪಡಿಸಿ

ಥರ್ಡ್ ಪಾರ್ಟಿ ವಿಮೆ ಖಚಿತಪಡಿಸಿ

ಐಆರ್ಡಿಎಐ ಥರ್ಡ್ ಪಾರ್ಟಿ ವಿಮಾ ಕಡ್ಡಾಯ ಸ್ವರೂಪವನ್ನು ಪರಿಗಣಿಸಿ ಪ್ರಕಟಣೆಯನ್ನು ಜೂನ್ 4 ರಂದು ಪ್ರಕಟಿಸಿದೆ. ವಿಮೆಗಾರರು ತಮ್ಮ ಅಂಡರ್ರೈಟಿಂಗ್ ಆಫೀಸ್ ಮತ್ತು ಆನ್ಲೈನ್ ನಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್ ಗಳ ಮೂಲಕ ಥರ್ಡ್ ಪಾರ್ಟಿ ವಿಮೆಯನ್ನು ಖಚಿತಪಡಿಸಿಕೊಳ್ಳಬೇಕು. ಐಆರ್ಡಿಎಐ ಪ್ರಾಧಿಕಾರವು ವಿಮಾ ಕವರ್ ಅನ್ನು ನಿರಾಕರಿಸುವ ಅಥವಾ ತಡಮಾಡುವವರ ಯಾವುದೇ ದೂರನ್ನು ಗಂಭೀರವಾಗಿ ಪರಿಗಣಿಸುತ್ತದೆ.

Read more about: insurance money finance news
English summary

IRDAI hikes third-party motor insurance premiums for FY19-20

The Insurance Regulatory and Development Authority of India (IRDAI) has increased the third party insurance premium by 12-12.5 per cent for 2019-20.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X