For Quick Alerts
ALLOW NOTIFICATIONS  
For Daily Alerts

ವಸೂಲಾಗದ ಸಾಲ (ಎನ್‌ಪಿಎ), ಆರ್ಬಿಐನಿಂದ ಪರಿಷ್ಕೃತ ಸುತ್ತೋಲೆ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್ಬಿಐ) ವಸೂಲಾಗದ ಸಾಲಗಳ (ಎನ್‌ಪಿಎ) ನಿರ್ವಹಣೆಗೆ ಪರಿಷ್ಕೃತ ಸುತ್ತೋಲೆಯನ್ನು ಜೂನ್ 7ರಂದು ಹೊರಡಿಸಿದೆ.

|

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್ಬಿಐ) ವಸೂಲಾಗದ ಸಾಲಗಳ (ಎನ್‌ಪಿಎ) ನಿರ್ವಹಣೆಗೆ ಪರಿಷ್ಕೃತ ಸುತ್ತೋಲೆಯನ್ನು ಜೂನ್ 7ರಂದು ಹೊರಡಿಸಿದೆ.

ವಸೂಲಾಗದ ಸಾಲ (ಎನ್‌ಪಿಎ), ಆರ್ಬಿಐನಿಂದ ಪರಿಷ್ಕೃತ ಸುತ್ತೋಲೆ

ರೂ. 2,000 ಕೋಟಿಗೂ ಹೆಚ್ಚಿನ ಮೊತ್ತದ ವಸೂಲಾಗದ ಸಾಲವನ್ನು (ಎನ್‌ಪಿಎ) ಬ್ಯಾಂಕುಗಳು 180 ದಿನಗಳಲ್ಲಿ ಪರಿಹರಿಸಬೇಕು ಎಂದು ಆರ್ಬಿಐ ತಿಳಿಸಿದೆ.
ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್ಬಿಐ) ಈ ಹಿಂದಿನ ಸುತ್ತೋಲೆಯನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದ ಎರಡು ತಿಂಗಳ ನಂತರ ಈ ಹೊಸ ಸುತ್ತೋಲೆ ಹೊರಡಿಸಿದೆ.

ಎನ್‌ಪಿಎ ಸಮಸ್ಯೆ ಪರಿಹಾರಕ್ಕಾಗಿ ಈ ಹಿಂದೆ ಆರ್ಬಿಐ ಹೊರಡಿಸಿದ್ದ ಸುತ್ತೋಲೆ ಪ್ರಬಲ ಅಸ್ತ್ರವಾಗಿತ್ತು. ಪ್ರಮುಖ ಕಂಪನಿಗಳು ಸಾಲ ಮರುಪಾವತಿ ಮಾಡುವ ಸಂದರ್ಭದಲ್ಲಿ ಒಂದು ದಿನ ತಡ ಮಾಡಿದರೂ ಅಂಥ ಸಾಲ ಖಾತೆಗಳನ್ನು ಸುಸ್ತಿ ಸಾಲ ಎಂದು ವರ್ಗೀಕರಿಸಲು ಮತ್ತು ದಿವಾಳಿ ಸಂಹಿತೆಯಡಿ ಕ್ರಮ ಕೈಗೊಳ್ಳಲು ಬ್ಯಾಂಕುಗಳಿಗೆ ಆರ್ಬಿಐ ಅವಕಾಶ ಒದಗಿತ್ತು. ಈ ಸುತ್ತೋಲೆಯನ್ನು ವಾಪಸ್‌ ಪಡೆದಿರುವ ಆರ್ಬಿಐ ಒಂದು ದಿನದ ಗಡುವನ್ನು ಈಗ 30 ದಿನಕ್ಕೆ ವಿಸ್ತರಿಸಿದೆ.
ಎನ್‌ಪಿಎ ಕುರಿತಾಗಿ ಆರ್ಬಿಐ ಫೆಬ್ರವರಿ 12ರಂದು ಹೊರಡಿಸಿದ್ದ ಸುತ್ತೋಲೆಯನ್ನುಸುಪ್ರೀಂ ಕೋರ್ಟ್‌ ಏಪ್ರಿಲ್ 2 ರಂದು ವಜಾ ಮಾಡಿತ್ತು.

Read more about: ಆರ್‌ಬಿಐ rbi npa money
English summary

RBI revises NPA norms, gives banks 30 days to review stressed loans

The Reserve Bank of India (RBI) on June 7 issued a revised circular on resolution of stressed assets.
Story first published: Saturday, June 8, 2019, 12:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X