For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಗುಡ್ ನ್ಯೂಸ್! ಹೊಸ ನಿಯಮದಿಂದ ಗ್ರಾಹಕರಿಗೆ ಅನುಕೂಲ

|

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜುಲೈ 1ರಿಂದ ತನ್ನ ನಿಯಮದಲ್ಲಿ ಮಹತ್ವದ ಬದಲಾಣೆ ಮಾಡಲು ಮುಂದಾಗಿದೆ. ಎಸ್ಬಿಐನ ಈ ಬದಲಾವಣೆ ಸುಮಾರು 42 ಕೋಟಿ ಗ್ರಾಹಕರ ಮೇಲೆ ಪರಿಣಾಮ ಬೀಳಲಿದೆ.

ಎಸ್ಬಿಐ ಗುಡ್ ನ್ಯೂಸ್! ಹೊಸ ನಿಯಮದಿಂದ ಗ್ರಾಹಕರಿಗೆ ಅನುಕೂಲ

 

ಎಸ್ಬಿಐ ಪ್ರಕಾರ, ಜುಲೈ 1ರಿಂದ ಆರ್ಬಿಐ ರೆಪೋ ದರದಲ್ಲಿ ಗೃಹ ಸಾಲ ಸಿಗಲಿದೆ. ಅಂದರೆ ಎಸ್ಬಿಐ ಮುಂದಿನ ತಿಂಗಳಿನಿಂದ ನೀಡಲಿರುವ ಗೃಹ ಸಾಲದ ಬಡ್ಡಿದರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಆಧರಿಸಿರಲಿದೆ.

ಆರ್ಬಿಐ 25 ಬೇಸಿಸ್ ಪಾಯಿಂಟ್ ರೆಪೊ ದರ ಕಡಿತ ಮಾಡಿರುವುದರ ಪ್ರಯೋಜನವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದೆ ಎಂದು ಬ್ಯಾಂಕ್ ಹೇಳಿದೆ.

ಜೊತೆಗೆ ಎಸ್ಬಿಐ ಸಿಸಿ / ಓಡಿ (ನಗದು ಕ್ರೆಡಿಟ್ / ಓವರ್ಡ್ರಾಫ್ಟ್)ಮೇಲಿನ ರೆಪೋ-ಲಿಂಕ್ಡ್ ಸಾಲ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದು, ಇದು ಜುಲೈ 1 ರಿಂದ ಜಾರಿಯಲ್ಲಿ ಬರಲಿದೆ.

CC / OD ಗ್ರಾಹಕರಿಗೆ ಪರಿಣಾಮಕಾರಿ ರೆಪೊ-ಲಿಂಕ್ಡ್ ಸಾಲ ದರವು (RLLR) ಈಗ ಶೇ. 8ರಷ್ಟು ಆಗಿದೆ. ರೂ. 1 ಲಕ್ಷಕ್ಕಿಂತ ಹೆಚ್ಚಿನ ಉಳಿತಾಯ ಠೇವಣಿಗಳ ಹೊಸ ದರವು ಶೇ. 3 ಆಗಿರುತ್ತದೆ.

ಆರ್ಬಿಐ ತನ್ನ ರೆಪೋ ದರದಲ್ಲಿ ಇಳಿಕೆ ಅಥವಾ ಏರಿಕೆ ಮಾಡಿದಾಗ ತಕ್ಷಣ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ, ಇಳಿಕೆ ಮಾಡುತ್ತಿರಲಿಲ್ಲ. ಎಲ್ಲ ಬ್ಯಾಂಕುಗಳು ಸಮಯ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುತ್ತವೆ.

ಆದರೆ ಜುಲೈ 1ರ ನಂತರ ರೆಪೋ ದರ ಇಳಿಕೆಯಾಗುತ್ತಿದ್ದಂತೆ ಎಸ್ಬಿಐ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ.

Read more about: sbi rbi money banking
English summary

SBI cuts interest rate on CC/OD, introduces repo linked home loan product

Country's largest public lender State Bank of India announced introduction of repo rate linked home loans from 1 July.
Story first published: Saturday, June 8, 2019, 11:51 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more