ಎರಡು ವರ್ಷಗಳಲ್ಲಿ ಬಂದ್ ಆಗಿರುವ ಎಟಿಎಂ ಸಂಖ್ಯೆಯಲ್ಲಿ ಏರಿಕೆ

ಭಾರತದಲ್ಲಿ 2017 ರ ಅಂತ್ಯದ ವೇಳೆಗೆ 2,22,300 ರಷ್ಟಿದ್ದ ಎಟಿಎಂಗಳ ಸಂಖ್ಯೆ 2019 ರ ಮಾರ್ಚ್ 31ರವರೆಗೆ 2,21,703 ಕ್ಕೆ ಇಳಿದಿದೆ.

ಭಾರತದಲ್ಲಿ 2017 ರ ಅಂತ್ಯದ ವೇಳೆಗೆ 2,22,300 ರಷ್ಟಿದ್ದ ಎಟಿಎಂಗಳ ಸಂಖ್ಯೆ 2019 ರ ಮಾರ್ಚ್ 31ರವರೆಗೆ 2,21,703 ಕ್ಕೆ ಇಳಿದಿದೆ. ಈ ಎರಡು ವರ್ಷಗಳ ಅವಧಿಯಲ್ಲಿ 597 ಎಟಿಎಂಗಳ ಇಳಿಕೆ ದಾಖಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಬಿಡುಗಡೆ ಮಾಡಿದೆ.

ಎರಡು ವರ್ಷಗಳಲ್ಲಿ ಬಂದ್ ಆಗಿರುವ ಎಟಿಎಂ ಸಂಖ್ಯೆಯಲ್ಲಿ ಏರಿಕೆ

ದೇಶದಲ್ಲಿ ಕಳೆದೆರಡು ವರ್ಷಗಳಲ್ಲಿ ಸುಮಾರು 597 ಎಟಿಎಂಗಳು ಕಾರ್ಯಸ್ಥಗಿತಗೊಳಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ "ಬೆಂಚ್ಮಾರ್ಕಿಂಗ್ ಇಂಡಿಯಾ ಪೇಮೆಂಟ್ ಸಿಸ್ಟಮ್ " ಅಡಿಯಲ್ಲಿ ಈ ವರದಿ ಬಿಡುಗಡೆಯಾಗಿದೆ.

ಈ ವರದಿ ಪ್ರಕಾರ 2017 ರಲ್ಲಿ 2,22,300 ಎಟಿಎಂಗಳಿದ್ದವು. ಆದರೆ ಮಾರ್ಚ್ 31, 2019 ರ ವೇಳೆಗೆ ಎಟಿಎಂ ಸಂಖ್ಯೆ 2,21,703 ಕ್ಕೆ ಇಳಿದಿದೆ. ಭಾರತದಲ್ಲಿ ನಡೆಯುವ ಹಣದ ವಹಿವಾಟು, ಬ್ಯಾಂಕಿಂಗ್ ವ್ಯವಹಾರ ಹೋಲಿಕೆ ಮಾಡಿದರೆ ದೇಶದಲ್ಲಿರುವ ಎಟಿಎಂಗಳ ಸಂಖ್ಯೆ ತುಂಬಾ ಕಡಿಮೆ. ಭಾರತದಲ್ಲಿ ಎಟಿಎಂಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ 2012-2017 ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಟಿಎಂಗಳನ್ನು ಅಳವಡಿಸಲಾಗಿತ್ತು.

2012 ರಿಂದ 2017 ರವರೆಗೆ ಅಂದರೆ 6 ವರ್ಷಗಳ ಅವಧಿಯಲ್ಲಿ ಎಟಿಎಂಗಳ ಸಂಖ್ಯೆ ದುಪ್ಪಟ್ಟಾಗಿತ್ತು. 2012 ರಲ್ಲಿ 10,832 ಜನಸಂಖ್ಯೆಗೆ ಒಂದು ಎಟಿಎಂ ಇತ್ತು. 2017 ರಲ್ಲಿ 5,1919 ಜನಸಂಖ್ಯೆಗೆ ಒಂದು ಎಟಿಎಂ ಇತ್ತು. ಹೆಚ್ಚುತ್ತಿರುವ ಜನಸಂಖ್ಯೆಗೆ ಹೋಲಿಸಿದರೆ ಎಟಿಎಂಗಳ ಸಂಖ್ಯೆ ಕಡಿಮೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಎಟಿಎಂ ಸಂಖ್ಯೆ ಕಡಿಮೆಯಾಗುತ್ತಿದ್ದು, ಆರ್ಬಿಐ ನಿಯಮದ ಪ್ರಕಾರ ನೋಟು ಗಳ ಚಲಾವಣೆಯಿಂದಾಗಿ ಎಟಿಎಂ ಕೇಂದ್ರಗಳಲ್ಲಿ ಹೊಸ ಯಂತ್ರಗಳನ್ನು ಜೋಡಿಸಬೇಕಾಗಿದೆ. ಈ ಪ್ರಕ್ರಿಯೆಗೆ ಖರ್ಚು ಹೆಚ್ಚಾಗುತ್ತಿದ್ದು, ಎಟಿಎಂ ಕೇಂದ್ರಗಳು ಸ್ಥಗಿತಗೊಳ್ಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+