For Quick Alerts
ALLOW NOTIFICATIONS  
For Daily Alerts

ಎನ್ಡಿಟಿವಿಯ ಪ್ರಣಯ್ ರಾಯ್, ರಾಧಿಕಾ ರಾಯ್ ರನ್ನು ಸೆಬಿ ವಜಾಗೊಳಿಸಿದೆ

ಸೆಬಿ (ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಶುಕ್ರವಾರ ಎನ್ಡಿಟಿವಿ ಪ್ರಮೋಟರ್ ಗಳಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಹಾಗು ಅವರ ಮಾಲೀಕತ್ವದ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಸಂಸ್ಥೆಯನ್ನು ಎರಡು ವರ್ಷಗಳ ಕಾಲ ವಜಾಗೊಳಿಸಿದೆ.

|

ಸೆಬಿ (ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಶುಕ್ರವಾರ ಎನ್ಡಿಟಿವಿ ಪ್ರಮೋಟರ್ ಗಳಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಹಾಗು ಅವರ ಮಾಲೀಕತ್ವದ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಸಂಸ್ಥೆಯನ್ನು ಎರಡು ವರ್ಷಗಳ ಕಾಲ ಸೆಕ್ಯೂರಿಟಿ ಮಾರುಕಟ್ಟೆಯಲ್ಲಿ ವಹಿವಾಟಿನಿಂದ ವಜಾಗೊಳಿಸಿದೆ.
ಇದೇ ಅವಧಿಯಲ್ಲಿ ಎನ್ಡಿಟಿವಿಯಲ್ಲಿರುವ ಯಾವುದೇ ಪ್ರಮುಖ ನಿರ್ವಹಣಾ ಹುದ್ದೆಗಳನ್ನು ಪ್ರಣಯ್ ರಾಯ್ಸ್ ಹೊಂದುವಂತಿಲ್ಲ.

ಎನ್ಡಿಟಿವಿಯ ಪ್ರಣಯ್ ರಾಯ್, ರಾಧಿಕಾ ರಾಯ್ ರನ್ನು ಸೆಬಿ ವಜಾಗೊಳಿಸಿದೆ

ಸೂಕ್ಷ್ಮ ಮಾಹಿತಿಯನ್ನು ಮರೆಮಾಚುವ ಮೂಲಕ ಎಲ್ಲಾ ಮೂರು ಪ್ರಮುಖ ಪ್ರವರ್ತಕರು ಆಂತರಿಕ ವಹಿವಾಟನ್ನು ಮಾಡಿದ್ದಾರೆ. ಸ್ಟಾಕ್ ಎಕ್ಸ್ಚೇಂಜ್ ಗೆ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಎನ್ಡಿ ಟಿವಿಯ ನೀತಿ ಸಂಹಿತೆಯನ್ನು ಪ್ರಣಯ್ ರಾಯ್ ಉಲ್ಲಂಘಿಸಿದ್ದಾರೆ ಎಂದು ಸೆಬಿ ಆರೋಪಿಸಿದ್ದು, ಎನ್ಡಿಟಿವಿ ಪ್ರವರ್ತಕರಾದ ರಾಧಿಕಾ ಮತ್ತು ಪ್ರಣಯ್ ರಾಯ್ ಅವರು ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುವಂತೆ ಕೋರಿದೆ. ಅಲ್ಲದೇ ಎನ್ಡಿಟಿವಿಯಲ್ಲಿ ಯಾವುದೇ ನಿರ್ವಹಣಾ ಸ್ಥಾನಗಳನ್ನು ಹೊಂದಬಾರದು ಎಂದಿದೆ.
ಸೆಬಿ ಪ್ರಕಾರ, ಎಲ್ಲಾ ಮೂರು ನೋಟಿಸ್ ಗಳಂತೆ ಮೂರು ಸಾಲ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಒಂದು ಸಾಲ ಒಪ್ಪಂದವನ್ನು ಐಸಿಐಸಿಐ ಬ್ಯಾಂಕ್ ಮತ್ತು ಎರಡು ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ನೊಂದಿಗೆ ಮಾಡಿಕೊಂಡಿದ್ದು, ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ.

Read more about: sebi money frauds
English summary

Sebi bars Prannoy and Radhika Roy from securities market, managerial posts

NDTV promoters Prannoy Roy and Radhika Roy and their holding firm RRPR Holdings from trading in the securities markets for two years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X