For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಸ್ಟಾರ್ಟಅಪ್ ನೀತಿ: ಆದ ಹೊಸ ಬದಲಾವಣೆಗಳೇನು?

ಕರ್ನಾಟಕ ರಾಜ್ಯದ ಸ್ಟಾರ್ಟಅಪ್ ನೀತಿಯಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ತರುವ ಪ್ರಮುಖ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.

|

ಕರ್ನಾಟಕ ರಾಜ್ಯದ ಸ್ಟಾರ್ಟಅಪ್ ನೀತಿಯಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ತರುವ ಪ್ರಮುಖ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.

ದೇಶದಲ್ಲೇ ಮೊದಲ ಬಾರಿಗೆ 2015ರಲ್ಲಿ ಇ ಕರ್ನಾಟಕವು ಸ್ಟಾರ್ಟ್‌ಅಪ್‌ ನೀತಿಯನ್ನು ಜಾರಿ ತಂದಿತ್ತು. ತದನಂತರದಲ್ಲಿ ಕೇಂದ್ರ ಹೊಸ ಸ್ಟಾರ್ಟ್‌ಅಪ್‌ ನೀತಿ ಜಾರಿ ಮಾಡಿತ್ತು. ಕೇಂದ್ರ ಸರ್ಕಾರದ ಸ್ಟಾರ್ಟ್‌ಅಪ್‌ ನೀತಿ ವಿಸ್ತೃತವಾಗಿರುವುದರಿಂದ ರಾಜ್ಯದ ಸ್ಟಾರ್ಟ್‌ಅಪ್‌ ನೀತಿಯಲ್ಲಿ ತಿದ್ದುಪಡಿ ತಂದು ವಿಸ್ತೃತ ಸೇರ್ಪಡೆಗೆ ಸಂಪುಟ ನಿರ್ಧರಿಸಿದೆ.

ಸ್ಟಾರ್ಟ್‌ಅಪ್‌ ನೀತಿ ಹೊಸ ಬದಲಾವಣೆ

ಸ್ಟಾರ್ಟ್‌ಅಪ್‌ ನೀತಿ ಹೊಸ ಬದಲಾವಣೆ

ಸ್ಟಾರ್ಟ್‌ಅಪ್‌ ನೀತಿಯ ಬದಲಾವಣೆ ಪ್ರಕಾರ ಉದ್ಯಮ ಪರಿಗಣನೆ ಆರಂಭವಾಗಿ 4 ವರ್ಷ ಮೀರಿರಬಾರದು ಎಂಬ ಹಿಂದಿನ ಮಿತಿಯನ್ನು 10 ವರ್ಷ ಮೀರಿರಬಾರದು ಎಂದು ಹೊಸದಾಗಿ ತಿದ್ದುಪಡಿ ಮಾಡಲಾಗಿದೆ.
ವಹಿವಾಟು ರೂ. 50 ಕೋಟಿ ಮೀರಿರಬಾರದು ಎಂಬ ಮಿತಿಯನ್ನು ರೂ. 100 ಕೋಟಿ ಮೀರಿರಬಾರದು ಎಂದು ಬದಲಿಸಿದೆ. ತಂತ್ರಜ್ಞಾನ ಆಧರಿತ ಉದ್ದಿಮೆಗಳು ಎಂಬ ವ್ಯಾಪ್ತಿಯ ಬದಲಾಗಿ ಹೆಚ್ಚು ಬೇಡಿಕೆ ಇರುವ ಆವಿಷ್ಕಾರ (ಇನೋವೇಷನ್) ಸೇರ್ಪಡೆ ಮಾಡಲಾಗಿದೆ.

ಸಭೆಯಲ್ಲಿ ಚರ್ಚೆಗೊಂಡ ಇತರೆ ವಿಷಯಗಳು

ಸಭೆಯಲ್ಲಿ ಚರ್ಚೆಗೊಂಡ ಇತರೆ ವಿಷಯಗಳು

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 44 ಯನ್ನು ರೂ. 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು.
ಕನಕಪುರ ಪಟ್ಟಣದಲ್ಲಿ 100 ಹಾಸಿಗೆ ಸಾಮರ್ಥ್ಯದ ಸರಕಾರಿ ಹೆರಿಗೆ ಆಸ್ಪತ್ರೆಯನ್ನು ಇನ್ಫೋಸಿಸ್‌ ಸಂಸ್ಥೆಯ ಸಿಎಸ್‌ಆರ್‌ ನಿಧಿಯಲ್ಲಿ ನಿರ್ಮಾಣ ಮಾಡುವುದು. ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ರೂ. 483 ಕೋಟಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ.

ಜೆಎಸ್‌ಡಬ್ಲ್ಯು ಭೂವಿವಾದ

ಜೆಎಸ್‌ಡಬ್ಲ್ಯು ಭೂವಿವಾದ

ಕರ್ನಾಟಕ ಸಚಿವ ಸಂಪುಟವು ಶುಕ್ರವಾರ, ವಿವಾದದಲ್ಲಿರುವ ಜೆಎಸ್‌ಡಬ್ಲ್ಯು ಸ್ಟೀಲ್ ಸಂಸ್ಥೆ 3,667 ಎಕರೆ ಭೂಮಿ ಮಾರಾಟ ಮಾಡುವ ನಿರ್ಧಾರವನ್ನು ಬಲ್ಲಾರಿಯಲ್ಲಿರುವ ಸಂಸ್ಥೆಗೆ ಮರುಪರಿಶೀಲಿಸಲು ಕ್ಯಾಬಿನೆಟ್ ಉಪಸಮಿತಿಗೆ ಕಳುಹಿಸಲು ನಿರ್ಧರಿಸಿದೆ. ಭೂಮಿಯನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಸಾಕಷ್ಟು ಆಕ್ಷೇಪಣೆಗಳು ಮತ್ತು ವಿರೋಧಗಳು ವ್ಯಕ್ತವಾಗಿದ್ದರಿಂದ, ಸಂಬಂಧಪಟ್ಟ ಸಚಿವರು (ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್) ಎಲ್ಲಾ ಅಂಶಗಳನ್ನು ಗಮನಿಸಲು ಮತ್ತು ಅದನ್ನು ಮರುಪರಿಶೀಲಿಸಲು ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿಯನ್ನು ವಿನಂತಿಸಿದ್ದಾರೆ.

Read more about: business money karnataka
English summary

Start up policy: karnataka govt cabinet meeting made some major changes

karnataka govt cabinet meeting made some major changes Start up policy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X