ನಾಣ್ಯ ಚಲಾವಣೆ ಬಗ್ಗೆ ಆರ್ಬಿಐ ಹೇಳಿದ್ದೇನು

ಸಾರ್ವಜನಿಕರು ನಾಣ್ಯ ಚಲಾವಣೆ ಬಗ್ಗೆ ಅನೇಕ ಗೊಂದಲಗಳನ್ನು ಹೊಂದಿದ್ದಾರೆ. ಹತ್ತು ರೂಪಾಯಿ ನಾಣ್ಯಗಳನ್ನು ಅಂಗಡಿಯವರು/ವ್ಯಾಪಾರಸ್ಥರು ಸ್ವೀಕರಿಸಲು ಹಿಂದೇಟು ಹಾಕುತ್ತಲೇ ಬಂದಿದ್ದಾರೆ.

ಸಾರ್ವಜನಿಕರು ನಾಣ್ಯ ಚಲಾವಣೆ ಬಗ್ಗೆ ಅನೇಕ ಗೊಂದಲಗಳನ್ನು ಹೊಂದಿದ್ದಾರೆ. ಹತ್ತು ರೂಪಾಯಿ ನಾಣ್ಯಗಳನ್ನು ಅಂಗಡಿಯವರು/ವ್ಯಾಪಾರಸ್ಥರು ಸ್ವೀಕರಿಸಲು ಹಿಂದೇಟು ಹಾಕುತ್ತಲೇ ಬಂದಿದ್ದಾರೆ. ನಾಣ್ಯ ಚಲಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಮುಖ ಮಾಹಿತಿ ನೀಡಿದೆ.

ನಾಣ್ಯ ಚಲಾವಣೆ ಬಗ್ಗೆ ಆರ್ಬಿಐ ಹೇಳಿದ್ದೇನು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾರ್ವಜನಿಕರು ತಮ್ಮ ಅನುಮಾನಗಳನ್ನು ಬದಿಗಿಟ್ಟು, ವಿವಿಧ ಮುಖಬೆಲೆಯ ನಾಣ್ಯಗಳನ್ನು ನಿಯಮಿತವಾಗಿ ಚಲಾವಣೆಗೆ ತರುವಂತೆ ಕೇಳಿದೆ. ಕೇಂದ್ರ ಸರ್ಕಾರವು ಮುದ್ರಿಸಿದ ನಾಣ್ಯಗಳನ್ನು ಆರ್ಬಿಐ ಚಲಾವಣೆಯಲ್ಲಿ ತರುತ್ತದೆ. ನಾಣ್ಯಗಳನ್ನು ಸಾರ್ವಜನಿಕರ ವಹಿವಾಟಿನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಆಯಾ ಕಾಲಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಸಾರ್ವಜನಿಕರ ದಿನಬಳಕೆಯ ಅಗತ್ಯಗಳನ್ನು ಈಡೇರಿಸುವ ಕಾರಣಕ್ಕೆ ವಿವಿಧ ಮುಖಬೆಲೆಯ ನಾಣ್ಯಗಳನ್ನು ಟಂಕಿಸಲಾಗುತ್ತದೆ.
ಯಾವುದೇ ಹಿಂಜರಿಕೆ ಇಲ್ಲದೆ ನಾಣ್ಯಗಳನ್ನು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ವೀಕರಿಸಿ ಬಳಸಬಹುದು ಎಂದು ಆರ್ಬಿಐ ಸೂಚಿಸಿದೆ. ನಾಣ್ಯಗಳ ಬಳಕೆಗೆ ಸಂಬಂಧಿಸಿದಂತೆ ಹರಡುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+