ಪತಂಜಲಿ ಘೋಷಿಸಿದೆ Buy 3, Get 3 free ಮತ್ತು 50% ರಿಯಾಯಿತಿ ಆಪರ್

ವೇಗವಾಗಿ ಬೆಳಯುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.

ವೇಗವಾಗಿ ಬೆಳಯುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.
ಎಫ್ಎಂಸಿಜಿ ಕಂಪನಿಗಳೊಂದಿಗೆ ಭಾರೀ ಪೈಪೋಟಿ ನಿಡುತ್ತಿರುವ ಪತಂಜಲಿ ಇದೇ ಮೊದಲ ಬಾರಿ ತನ್ನ ಕೆಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದವು ಮೊದಲ ಬಾರಿಗೆ ಹಲವಾರು ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆಗಳು, ಕಾಂಬೊ ಪ್ಯಾಕ್ ಮತ್ತು ರಿಯಾಯಿತಿಗಳನ್ನು ಹೊರತಂದಿದೆ. ಗ್ರಾಹಕರನ್ನು ಸೆಳೆಯಲು ಪ್ರಾರಂಭಿಸಲಾದ ಈ ಕ್ರಮವು ಮಾರಾಟವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Buy 3, Get 3 free

Buy 3, Get 3 free

ಪತಂಜಲಿ ಪ್ರಕಾರ, ಮೂರು ವಸ್ತುಗಳು ಖರೀದಿ ಮಾಡಿದರೆ ಮೂರು ಉಚಿತ (Buy 3, Get 3 free) ಹಾಗೂ ಕೆಲ ವಸ್ತುಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಜ್ಯೂಸ್, ಹಿಟ್ಟು, ಎಣ್ಣೆ, ಓಟ್ಸ್ ಮತ್ತು ಸಿದ್ಧ ಆಹಾರಗಳಿಗೆ ಕಂಪನಿ ರಿಯಾಯಿತಿ ನೀಡುತ್ತಿದೆ. ಶಾಂಪೂ, ಫೇಸ್‌ವಾಶ್ ನಂತಹ ಸೌಂದರ್ಯ ವರ್ಧಕಗಳಿಗೆ ಕಾಂಬೋ ಆಫರ್ ನೀಡಲಿದೆ. ಕಂಪನಿಯು ಆಯ್ದ ನಗರಗಳಲ್ಲಿ ಕಾಂಬೊ ಆಫರ್ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ.

ಪತಂಜಲಿಯ ಹಠಾತ್ ರಿಯಾಯಿತಿಯತ್ತ ಸಾಗಿದ್ದು ಏಕೆ?

ಪತಂಜಲಿಯ ಹಠಾತ್ ರಿಯಾಯಿತಿಯತ್ತ ಸಾಗಿದ್ದು ಏಕೆ?

ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಪತಂಜಲಿಯ ಮಾರಾಟ ಕುಸಿಯುತ್ತಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ ಉತ್ಪನ್ನಗಳ ಅವಧಿ ಮುಗಿದಿದೆ. ಕಳೆದ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮುಖ ಎಫ್‌ಎಂಸಿಜಿ ಕಂಪನಿಗಳು ಮಾರಾಟದಲ್ಲಿ ಮಂದಗತಿಯನ್ನು ಕಂಡಿವೆ. ಪತಂಜಲಿ ಕೂಡ ಎರಡು ವರ್ಷಗಳಿಂದ ಕಡಿಮೆ ಮಾರಾಟವನ್ನು ದಾಖಲಿಸುತ್ತಿದೆ. ಇದು ಹಣಕಾಸು ವರ್ಷ 2017 ಕ್ಕೆ ಹೋಲಿಸಿದರೆ ಹಣಕಾಸು ವರ್ಷ 2018 ರಲ್ಲಿ ಆದಾಯದಲ್ಲಿ 10% ಕುಸಿತವನ್ನು ದಾಖಲಿಸಿದೆ.

ಪತಂಜಲಿ ವ್ಯವಸ್ಥಾಪಕ ಹೇಳಿದ್ದೇನು?

ಪತಂಜಲಿ ವ್ಯವಸ್ಥಾಪಕ ಹೇಳಿದ್ದೇನು?

ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಕಂಪನಿಯು ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಒಪ್ಪಿಕೊಂಡಿದ್ದು, ನಿಧಾನಗತಿಯ ಬೆಳವಣಿಗೆ ದಾಖಲಿಸಿದ್ದಾರೆ. ಗ್ರಾಮೀಣ ಭಾಗದ ಮಂದಗತಿಯ ಬೇಡಿಕೆ ಕಾರಣದಿಂದಾಗಿ ಮಾರಾಟದಲ್ಲಿ ವ್ಯತ್ಯಾಸ ಕಂಡುಬಂದಿದೆ. ನಾವು ನಿಧಾನಗತಿಯ ಪರಿಣಾಮಗಳಿಂದ ಕ್ರಮೇಣ ಹೊರಬರುತ್ತಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+