ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಹಿಸುದ್ದಿ ನೀಡಿದೆ. ಎಸ್ಬಿಐ ಪ್ರಮುಖ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದೆ.
ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಹಿಸುದ್ದಿ ನೀಡಿದೆ. ಎಸ್ಬಿಐ ಪ್ರಮುಖ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಒಳ್ಳೆ ಅವಕಾಶ. ಇಂದಿನಿಂದಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ sbi.co.in ಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್ಬಿಐ ನೇಮಕಾತಿ 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 12, 2019
ಹುದ್ದೆ ವಿವರಗಳು:
ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕ್ಯಾಪಿಟಲ್ ಪ್ಲಾನಿಂಗ್)- 1 ಹುದ್ದೆ
ಎಸ್‌ಎಂಇ ಕ್ರೆಡಿಟ್ ಅನಾಲಿಸ್ಟ್ (ಸೆಕ್ಟರ್ ಸ್ಪೆಷಲಿಸ್ಟ್) - 11 ಹುದ್ದೆಗಳು
ಎಸ್‌ಎಂಇ ಕ್ರೆಡಿಟ್ ವಿಶ್ಲೇಷಕ (ಸ್ಟ್ರಕ್ಚರಿಂಗ್)- 4 ಪೋಸ್ಟ್
ಎಸ್‌ಎಂಇ ಕ್ರೆಡಿಟ್ ವಿಶ್ಲೇಷಕ - 10 ಪೋಸ್ಟ್
ಕ್ರೆಡಿಟ್ ವಿಶ್ಲೇಷಕ- 50 ಪೋಸ್ಟ್
ಡೆಪ್ಯೂಟಿ ಜನರಲ್ ಮ್ಯಾನೇಜರ್ (ಆಸ್ತಿ ಹೊಣೆಗಾರಿಕೆ ನಿರ್ವಹಣೆ)- 1 ಹುದ್ದೆ
ಅರ್ಹತೆ:
ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕ್ಯಾಪಿಟಲ್ ಪ್ಲಾನಿಂಗ್)- ಪದವಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ (ಸಿಎ)/ಎಂಬಿಎ (ಹಣಕಾಸು) ಅಥವಾ ಸಮಾನ/ಪಿಜಿಡಿಎಂ (ಹಣಕಾಸು) ಅಥವಾ ತತ್ಸಮಾನ ಪದವಿ.
ಎಸ್‌ಎಂಇ ಕ್ರೆಡಿಟ್ ಅನಾಲಿಸ್ಟ್ (ಸೆಕ್ಟರ್ ಸ್ಪೆಷಲಿಸ್ಟ್, ಸ್ಟ್ರಕ್ಚರಿಂಗ್, - ಬಿಇ/ಬಿಟೆಕ್ ಮತ್ತು ಎಂಬಿಎ (ಹಣಕಾಸು)/ಸಿಎ/ಸಿಎಫ್‌ಎ
ಕ್ರೆಡಿಟ್ ಅನಾಲಿಸ್ಟ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿಎ/ಎಂಬಿಎ/ಪಿಜಿಡಿಎಂ.
ಡೆಪ್ಯೂಟಿ ಜನರಲ್ ಮ್ಯಾನೇಜರ್ (ಆಸ್ತಿ ಹೊಣೆಗಾರಿಕೆ ನಿರ್ವಹಣೆ)- ಎಂಬಿಎ(ಹಣಕಾಸು)ಅಥವಾ ಸಮಾನ/ಚಾರ್ಟರ್ಡ್ ಅಕೌಂಟೆಂಟ್.
ವಯಸ್ಸಿನ ಮಿತಿ:
ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕ್ಯಾಪಿಟಲ್ ಪ್ಲಾನಿಂಗ್, ಆಸ್ತಿ ಹೊಣೆಗಾರಿಕೆ ನಿರ್ವಹಣೆ) - 45 ವರ್ಷಗಳು
ಎಸ್‌ಎಂಇ ಕ್ರೆಡಿಟ್ ಅನಾಲಿಸ್ಟ್ (ಸೆಕ್ಟರ್ ಸ್ಪೆಷಲಿಸ್ಟ್, ಸ್ಟ್ರಕ್ಚರಿಂಗ್), ಎಸ್‌ಎಂಇ ಕ್ರೆಡಿಟ್ ಅನಾಲಿಸ್ಟ್, ಕ್ರೆಡಿಟ್ ಅನಾಲಿಸ್ಟ್ - 35 ವರ್ಷಗಳು
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 12, 2019 ಮೊದಲು ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಬಿಎ, ಬಿ.ಇ / ಬಿ.ಟೆಕ್, ಸಿಎ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬೇರೆ ಬೇರೆ ಹುದ್ದೆಗೆ ವಯಸ್ಸಿನ ಮಿತಿ ಬೇರೆ ಬೇರೆಯಿರುತ್ತದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.


Click it and Unblock the Notifications