ಎಟಿಎಂ ಬಳಕೆದಾರರಿಗೆ ಸಿಹಿಸುದ್ದಿ! ಕಡಿಮೆಯಾಗಲಿದೆ ಎಟಿಎಂ ಶುಲ್ಕ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೆಫ್ಟ್ (NEFT) ಮತ್ತು ಆರ್‌ಟಿಜಿಎಸ್ ಮೂಲಕ ನಡೆಸುವ ಫಂಡ್ ಟ್ರಾನ್ಸಪರ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ನಂತರ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಳ್ಳಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೆಫ್ಟ್ (NEFT) ಮತ್ತು ಆರ್‌ಟಿಜಿಎಸ್ ಮೂಲಕ ನಡೆಸುವ ಫಂಡ್ ಟ್ರಾನ್ಸಪರ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ನಂತರ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಳ್ಳಲಿದೆ. ಬೇರೆ ಬ್ಯಾಂಕುಗಳ ಎಟಿಎಂ ವಹಿವಾಟುಗಳ ಮೇಲೆ ವಿಧಿಸುವ ಶುಲ್ಕವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರ್ಬಿಐ ಮುಂದಿನ ತಿಂಗಳು ಎಟಿಎಂ ಶುಲ್ಕ ಕಡಿತಗೊಳಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.
ಎಟಿಎಂ ಶುಲ್ಕ ಪರಿಶೀಲನೆಗಾಗಿ ರಚಿಸಲಾದ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಶುಲ್ಕ ಕಡಿತ ಮಾಡುವ ಬಗ್ಗೆ ಶಿಫಾರಸು ಮಾಡಲಾಗಿದೆ. ಈ ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಆರ್‌ಬಿಐಗೆ ಸಲ್ಲಿಸಬಹುದು.
ಎಟಿಎಂ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಆದರೆ ಕಡಿಮೆ ಮಾಡಲಾಗುವುದು. ಪ್ರಸ್ತುತ ಬೇರೆ ಬ್ಯಾಂಕ್ ಎಟಿಎಂಗಳ ಸೀಮಿತ ವಹಿವಾಟಿನವರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ನಂತರದ ವಹಿವಾಟುಗಳ ಮೇಲೆ ಎಲ್ಲ ಬ್ಯಾಂಕ್ ಗಳು ಶುಲ್ಕ ವಿಧಿಸುತ್ತವೆ. ಇತ್ತೀಚಿನ ದಿನಗಳ ಎಟಿಎಂ ಬಳಕೆ ಹೆಚ್ಚಾಗಿದ್ದು, ಬೇರೆ ಬ್ಯಾಂಕುಗಳ ಎಟಿಎಂನಿಂದ ಮೆಟ್ರೋ ನಗರಗಳಲ್ಲಿ ಮೂರು ಬಾರಿ ಹಾಗೂ ಇತರ ಪ್ರದೇಶಗಳಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ನಂತರದ ಎಟಿಎಂ ವಿತ್ ಡ್ರಾವಲ್ ಮೇಲೆ ಶುಲ್ಕ ವಿಧಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎಟಿಎಂಗಳ ಬಳಕೆ ಹೆಚ್ಚಾಗಿದೆ ಎಂಬ ಆಧಾರದ ಮೇಲೆ ಸಮಿತಿಯು ಇಂಟರ್ಚೇಂಜ್ ಶುಲ್ಕ ರಚನೆಯನ್ನು ಪರಿಶೀಲಿಸಿದೆ. ಇತರ ಬ್ಯಾಂಕಿನ ಎಟಿಎಂ ಬಳಸಿದಾಗ ಗ್ರಾಹಕರು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ಇಂಟರ್ಚೇಂಜ್ ಶುಲ್ಕ ರಚನೆಯು ನಿರ್ಧರಿಸುತ್ತದೆ.


Click it and Unblock the Notifications