For Quick Alerts
ALLOW NOTIFICATIONS  
For Daily Alerts

ಎಟಿಎಂ ಗ್ರಾಹಕರಿಗೆ ಆರ್ಬಿಐನಿಂದ ಸಿಹಿಸುದ್ದಿ!

ಪ್ರತಿ ತಿಂಗಳು ಲಭ್ಯವಿರುವ ಉಚಿತ ಎಟಿಎಂ ವಹಿವಾಟಿನ ಭಾಗವಾಗಿ ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ನಗದು ವಿತ್ ಡ್ರಾವಲ್, ಬ್ಯಾಲೆನ್ಸ್ ವಿಚಾರಣೆ, ಚೆಕ್ ಬುಕ್ ವಿನಂತಿಗಳಂತಹ ನಗದು ರಹಿತ ವಿಫಲವಾದ ವಹಿವಾಟುಗಳನ್ನು ಎಣಿಸಬೇಡಿ.

|

ಪ್ರತಿ ತಿಂಗಳು ಲಭ್ಯವಿರುವ ಉಚಿತ ಎಟಿಎಂ ವಹಿವಾಟಿನ ಭಾಗವಾಗಿ ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ನಗದು ವಿತ್ ಡ್ರಾವಲ್, ಬ್ಯಾಲೆನ್ಸ್ ವಿಚಾರಣೆ, ಚೆಕ್ ಬುಕ್ ವಿನಂತಿಗಳಂತಹ ನಗದು ರಹಿತ ವಿಫಲವಾದ ವಹಿವಾಟುಗಳನ್ನು ಎಣಿಸಬೇಡಿ ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ಬ್ಯಾಂಕುಗಳನ್ನು ಹೇಳಿದೆ.

ಎಟಿಎಂ ಗ್ರಾಹಕರಿಗೆ ಆರ್ಬಿಐನಿಂದ ಸಿಹಿಸುದ್ದಿ!

ಗ್ರಾಹಕರಿಗೆ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳಿಗೆ ಅವಕಾಶವಿದೆ. ಆದರೆ ಎಟಿಎಂ ತಾಂತ್ರಿಕ ಕಾರಣಗಳಿಂದಾಗಿ ವಹಿವಾಟು ವಿಫಲತೆ, ಎಟಿಎಂಗಳಲ್ಲಿ ಕರೆನ್ಸಿ ಲಭ್ಯವಿಲ್ಲದಿರುವುದು ಇತ್ಯಾದಿಗಳನ್ನು ಉಚಿತ ಎಟಿಎಂ ವಹಿವಾಟುಗಳಲ್ಲಿ ಸೇರಿಸಲಾಗಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ಆರ್ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.
ಇದಲ್ಲದೆ, ಬ್ಯಾಲೆನ್ಸ್ ವಿಚಾರಣೆ ಮತ್ತು ಫಂಡ್ ವರ್ಗಾವಣೆಗಾಗಿ ಎಟಿಎಂಗಳ ಬಳಕೆಯು ಗ್ರಾಹಕರಿಗೆ ನೀಡುವ ಉಚಿತ ವಹಿವಾಟು ಸೌಲಭ್ಯದ ಭಾಗವಾಗಿರಬಾರದು. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಎಟಿಎಂಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಉಚಿತ ವಹಿವಾಟುಗಳನ್ನು ಒದಗಿಸುತ್ತವೆ ಮತ್ತು ಅದಕ್ಕೂ ಮೀರಿ ಶುಲ್ಕವನ್ನು ವಿಧಿಸುತ್ತವೆ. ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ವಹಿವಾಟುಗಳು, ಎಟಿಎಂಗಳಲ್ಲಿ ಕರೆನ್ಸಿ ಲಭ್ಯವಿಲ್ಲದಿರುವುದು ಸಹ ಉಚಿತ ಎಟಿಎಂ ವಹಿವಾಟಿನ ಸಂಖ್ಯೆಯಲ್ಲಿ ಸೇರಿದೆ ಎಂದು ಕೇಂದ್ರ ಬ್ಯಾಂಕಿನ ಗಮನಕ್ಕೆ ಬಂದ ನಂತರ ಈ ವಿಷಯದಲ್ಲಿ ಆರ್‌ಬಿಐ ಸ್ಪಷ್ಟೀಕರಣವನ್ನು ನೀಡಿದೆ.
ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳು, ನಗದು ಲಭ್ಯತೆ ಇಲ್ಲದಿರುವುದು ಮತ್ತು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕಾರಣಗಳಿಂದಾಗಿ ವಿಫಲವಾದ ವಹಿವಾಟುಗಳನ್ನು ಗ್ರಾಹಕರಿಗೆ ಮಾನ್ಯ ಎಟಿಎಂ ವಹಿವಾಟು ಎಂದು ಪರಿಗಣಿಸಬಾರದು ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದ್ದು, ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಎಟಿಎಂ ಗ್ರಾಹಕರಿಗೆ ಪ್ರತಿ ತಿಂಗಳು 5 ವಹಿವಾಟುಗಳು ಉಚಿತವಾಗಿರುತ್ತವೆ. ಇದನ್ನು ಹೊರತುಪಡಿಸಿದ ವಹಿವಾಟುಗಳಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇಲ್ಲಿಯವರೆಗೆ ವಿಫಲವಾದ ಎಟಿಎಂ ವಹಿವಾಟನ್ನು ಬ್ಯಾಂಕ್ ಮಾನ್ಯ ವಹಿವಾಟಿನ ಪಟ್ಟಿಗೆ ಸೇರಿಸುತ್ತಿತ್ತು. ಆದರೆ ಇನ್ನುಮುಂದೆ ಸೇರಿಸುವುದಿಲ್ಲ.

Read more about: atm rbi banking money
English summary

RBI clarifies on free ATM transactions with Banks

The Reserve Bank on Wednesday asked banks not to count failed transactions at ATMs due to technical reasons as part of "free ATM transactions" permitted every month.
Story first published: Friday, August 16, 2019, 19:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X