ಕೆಲಸಕ್ಕೆ ಸೇರುವ ಮುನ್ನ ಉದ್ಯೋಗಾಕಾಂಕ್ಷಿಗಳು ಏನು ಮಾಡುತ್ತಾರೆ? ಈ ವರದಿಯಲ್ಲಿ ಏನಿದೆ
ಉದ್ಯೋಗ ಹುಡುಕುವವರು ಉದ್ಯೋಗದಾತ ಸಂಸ್ಥೆಗಳ ಖ್ಯಾತಿ, ಗೌರವ, ಮಾನ್ಯತೆಯಂತ ಅಂಶಗಳನ್ನು ಪರಿಗಣಿಸಿ ಕೆಲಸಕ್ಕೆ ಸೇರುತ್ತಾರೆ ಎಂದು ವರದಿ ತಿಳಿಸಿದೆ.
ಉದ್ಯೋಗ ಹುಡುಕುವವರು ಉದ್ಯೋಗದಾತ ಸಂಸ್ಥೆಗಳ ಖ್ಯಾತಿ, ಗೌರವ, ಮಾನ್ಯತೆಯಂತ ಅಂಶಗಳನ್ನು ಪರಿಗಣಿಸಿ ಕೆಲಸಕ್ಕೆ ಸೇರುತ್ತಾರೆ ಎಂದು ವರದಿ ತಿಳಿಸಿದೆ.

ಕಂಪನಿಗಳ ಪ್ರಾಮಾಣಿಕತೆ, ಮಾನ್ಯತೆ ಎಷ್ಟಿದೆ ಎಂಬುದನ್ನು ಅವಲೋಕಿಸುವ ಅಭ್ಯರ್ಥಿಗಳು ಕಂಪನಿಯ ಬ್ರ್ಯಾಂಡಿಂಗ್ ಹೇಗಿದೆ ಎಂಬುದನ್ನೂ ಗಮನಿಸುತ್ತಾರೆ ಎಂದು ಜಾಗತಿಕ ಉದ್ಯೋಗ ಮಾಹಿತಿಯ ವೆಬ್ಸೈಟ್ ಇಂಡೀಡ್ ತನ್ನ ವರದಿಯಲ್ಲಿ ತಿಳಿಸಿದೆ. ಕೆಲಸ ಹುಡುಕುವ ಹೆಚ್ಚಿನ ಜನರು ಆನ್ಲೈನ್ ನಲ್ಲಿ ಉದ್ಯೋಗದಾತರ ಪ್ರೊಫೈಲ್ ಗಳನ್ನು ಪರಿಶೀಲಿಸುತ್ತಾರೆ.
ಇಂಡೀಡ್ ವರದಿ ಪ್ರಕಾರ, ಭಾರತದಲ್ಲಿ ಶೇ. 97 ರಷ್ಟು ಜನ ಕೆಲಸ ಹುಡುಕುವವರು ಹೊಸ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ಯೋಗದಾತರ ಮಾನ್ಯತೆಯನ್ನು ನೋಡುತ್ತಾರೆ. ಕಂಪನಿಗಳ ಖ್ಯಾತಿ ಅಥವಾ ಜನಪ್ರಿಯತೆ ಬಗ್ಗೆ ಮಾಹಿತಿ ನೀಡದೆ ಇರುವ ಕಂಪನಿಗೆ ಸೇರಿಕೊಳ್ಳುವುದರಲ್ಲಿ ನಂಬಿಕೆ ಇಲ್ಲ ಎಂದು ಶೇ. 67 ರಷ್ಟು ಮಂದಿ ಹೇಳಿಕೊಂಡಿದ್ದಾರೆ. ಒಂದು ಸಂಸ್ಥೆಗೆ ಉದ್ಯೋಗಕ್ಕೆ ಸೇರಿಕೊಂಡರೆ ವೃತ್ತಿ ಪ್ರಗತಿ ಆಗಲಿದೆಯೇ ಎಂಬುದನ್ನು ಶೇ. 59 ರಷ್ಟು ಜನ ನೋಡುತ್ತಾರೆ. ಉದ್ಯೋಗ ಸ್ಥಿರತೆ ಬಗ್ಗೆ ಶೇ. 49 ರಷ್ಟು ಹಾಗು ವೇತನಕ್ಕೆ ಆದ್ಯತೆ ನೀಡುವವರುವುದಾಗಿ ಶೇ. 49 ರಷ್ಟು ಮಂದಿ ಇದ್ದಾರೆ. ಜೊತೆಗೆ ಸಂಸ್ಥೆ ನೀಡುವ ಪ್ರಯೋಜನ, ಭತ್ಯೆಗಳ ಬಗ್ಗೆ ಶೇ. 46 ರಷ್ಟು ಮಂದಿ ಆಲೋಚನೆ ಮಾಡುತ್ತಾರೆ ಎಂದು ವರದಿ ಬಹಿರಂಗಗೊಳಿಸಿದೆ.
ಇಂಡೀಡ್ ಸಂಸ್ಥೆಯು 2019 ರಲ್ಲಿ ಭಾರತದ 502 ಉದ್ಯೋಗದಾತ ಮತ್ತು 1,208 ಉದ್ಯೋಗಿಗಳ ಮೂಲಕ ಈ ಸಮೀಕ್ಷೆಯನ್ನು ಕೈಗೊಂಡಿತ್ತು.


Click it and Unblock the Notifications