ಭ್ರಷ್ಟ 22 ತೆರಿಗೆ ಅಧಿಕಾರಿಗಳ ವಜಾ
ಕೇಂದ್ರ ಸರ್ಕಾರವು ಸೋಮವಾರ ನಿಯಮ 56 (ಜೆ) ಅಡಿಯಲ್ಲಿ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ಮಾಡಿದೆ.
ಕೇಂದ್ರ ಸರ್ಕಾರವು ಸೋಮವಾರ ನಿಯಮ 56 (ಜೆ) ಅಡಿಯಲ್ಲಿ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ಮಾಡಿದೆ.

ಭ್ರಷ್ಟಾಚಾರ, ಕಾನೂನುಬಾಹಿರ ಕೃತ್ಯಗಳ ಆರೋಪ, ಕಿರುಕುಳ, ಲಂಚ, ಸುಲಿಗೆಗಳಂತಹ ಆರೋಪಗಳ ಆಧಾರದ ಮೇಲೆ 27 ಉನ್ನತ ಹುದ್ದೆಯ ಕಂದಾಯ ಅಧಿಕಾರಿಗಳನ್ನು ಸರ್ಕಾರ ತೆಗೆದು ಹಾಕಿತ್ತು.
ಇದೀಗ ಮತ್ತೆ ಭ್ರಷ್ಟಾಚಾರ ಮತ್ತು ಇತರ ದುಷ್ಕೃತ್ಯದ ಆರೋಪ ಹೊತ್ತಿರುವ 22 ತೆರಿಗೆ ಅಧಿಕಾರಿಗಳನ್ನು ಸರ್ಕಾರ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ.
ಈ ಹಿಂದೆ ಸಿಬಿಡಿಟಿಯ 12 ಮಂದಿ ಸೇರಿದಂತೆ 27 ಉನ್ನತ ಶ್ರೇಣಿಯ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಗಳು, ನೇರ ತೆರಿಗೆ ಸಂಸ್ಥೆ, ಸರ್ಕಾರಿ ನೌಕರರಿಗೆ ಅದೇ ನಿಯಮವನ್ನು ಬಳಸಿಕೊಂಡು ಕಡ್ಡಾಯವಾಗಿ ನಿವೃತ್ತ ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟ ತೆರಿಗೆ ಅಧಿಕಾರಿಗಳನ್ನು ವಜಾಗೊಳಿಸುವ ನಿರ್ಧಾರವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಕಿರುಕುಳ ನೀಡದಂತೆ ಆಡಳಿತವನ್ನು ಸ್ವಚ್ಚಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಭ್ರಷ್ಟರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಸೇವೆಯಿಂದ ಹೊರಹಾಕಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹೇಳಿದೆ.


Click it and Unblock the Notifications