For Quick Alerts
ALLOW NOTIFICATIONS  
For Daily Alerts

ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವಾಗ ಒಟಿಪಿ ಕಡ್ಡಾಯ!

ಇನ್ನುಮುಂದೆ ಎಟಿಎಂಗಳಿಗೆ ಹಣ ವಿತ್ ಡ್ರಾ ಮಾಡಲು ಹೋಗುವಾಗ ನಿಮ್ಮ ಮೊಬೈಲ್ ಫೋನ್ ಅನ್ನು ಕೊಂಡೊಯ್ಯಬೇಕಾಗಬಹುದು.

|

ಇನ್ನುಮುಂದೆ ಎಟಿಎಂಗಳಿಗೆ ಹಣ ವಿತ್ ಡ್ರಾ ಮಾಡಲು ಹೋಗುವಾಗ ನಿಮ್ಮ ಮೊಬೈಲ್ ಫೋನ್ ಅನ್ನು ಕೊಂಡೊಯ್ಯಬೇಕಾಗಬಹುದು. ಹಣವನ್ನು ಹಿಂಪಡೆಯಲು ಎಟಿಎಂಗೆ ಭೇಟಿ ನೀಡಿದಾಗ ಬ್ಯಾಂಕುಗಳು ಎಟಿಎಂಗಳ ಮೂಲಕ ನೀವು ಮಾಡುವ ಪ್ರತಿಯೊಂದು ವಹಿವಾಟುಗಳಿಗೆ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಅನ್ನು ಕಳುಹಿಸಲಿವೆ.

10,000ಕ್ಕಿಂತ ಮೇಲ್ಪಟ್ಟ ವಿತ್ ಡ್ರಾಗೆ ಒಟಿಪಿ

10,000ಕ್ಕಿಂತ ಮೇಲ್ಪಟ್ಟ ವಿತ್ ಡ್ರಾಗೆ ಒಟಿಪಿ

ಎಟಿಎಂ ವಂಚನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಬ್ಯಾಂಕುಗಳು ಮುಂದಾಗಿವೆ. ಹೀಗಾಗಿ ಇನ್ನು ಮುಂದೆ 10,000 ರೂಪಾಯಿಗಿಂತ ಹೆಚ್ಚಿನ ಹಣ ಪಡೆಯಲು ಬಯಸುವ ಗ್ರಾಹಕರ ಮೊಬೈಲ್‌ಗಳಿಗೆ OTP(ಒನ್‌ ಟೈಮ್‌ ಪಾಸ್‌ವರ್ಡ್) ಕಳುಹಿಸುವ ಮೂಲಕ ಗ್ರಾಹಕರನ್ನು ಖಾತ್ರಿ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿವೆ.

ಕೆನರಾ ಒಟಿಪಿ ಸೌಲಭ್ಯ ಆರಂಭ

ಎಟಿಎಂ ವಿತ್ ಡ್ರಾವಲ್ ಸಂದರ್ಭದಲ್ಲಿ ಒಟಿಪಿ ಸೌಲಭ್ಯವನ್ನು ಆರಂಭಿಸಿದ ಭಾರತದ ಮೊದಲ ಬ್ಯಾಂಕ್ ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಆಗಿದೆ. ಒಂದು ದಿನದಲ್ಲಿ ₹ 10,000 ಎಟಿಎಂ ನಗದು ವಿತ್ ಡ್ರಾ ಮೇಲೆ ಒಟಿಪಿ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುವುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ. ಆಗಸ್ಟ್ 20 ರ ಟ್ವೀಟ್‌ನಲ್ಲಿ, ಕೆನರಾ ಬ್ಯಾಂಕ್, ಈಗ ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಒಂದು ದಿನದಲ್ಲಿ ₹ 10,000 ಕ್ಕಿಂತ ಹೆಚ್ಚಿನ ಹಣ ಹಿಂಪಡೆಯುವಲ್ಲಿ ಒಟಿಪಿ ಸೌಲಭ್ಯ ಹೆಚ್ಚು ಸುರಕ್ಷಿತವಾಗಿದೆ. ಧಢೀಕರಣದ ಈ ಹೆಚ್ಚುವರಿ ಅಂಶವು ನಮ್ಮ ಎಟಿಎಂ ಗ್ರಾಹಕರನ್ನು ಎಟಿಎಂ ವಮಚನೆಗಳಿಂದ ರಕ್ಷಿಸಲಿದೆ ಎಂದಿದೆ.

ಎಸ್ಬಿಐ ಚಿಂತನೆ

ಎಸ್ಬಿಐ ಚಿಂತನೆ

ಒಟಿಪಿ ವಿಚಾರವಾಗಿ ಎಸ್ಬಿಐ ಬ್ಯಾಂಕ್ ಕೂಡ ಯೋಚನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮೊಬೈಲ್‌ ಆಧಾರಿತ ಒಟಿಪಿ ಸೌಲಭ್ಯದ ಮುಖಾಂತರ ವ್ಯವಹಾರ ನಡೆಸಲು ತನ್ನ ಗ್ರಾಹಕರಿಗೆ ಉತ್ತೇಜನ ನೀಡುತ್ತಿದೆ.
ವಿಫಲವಾದ ವಹಿವಾಟುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದ ಬ್ಯಾಂಕುಗಳಿಗೆ ಕಡಿವಾಣ ಹಾಕಿರುವ ಆರ್ಬಿಐ ಇನ್ನು ಮುಂದೆ ವಿಫಲವಾದ ವಹಿವಾಟುಗಳು ಲೆಕ್ಕಕ್ಕೆ ಬರುವುದಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ.

Read more about: atm banking money frauds
English summary

ATM cash withdrawals above ₹10,000 needs OTP

Canara Bank has already begun the process of sending OTP for ATM transactions carried out above Rs 10,000
Story first published: Wednesday, August 28, 2019, 9:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X