ಬಜಾಜ್ ಅಲಿಯನ್ಸ್ ಲೈಫ್, ಸಿಂಡಿಕೇಟ್ ಬ್ಯಾಂಕ್ ಜತೆ ವಿಮೆ ಒಪ್ಪಂದ

ಬೆಂಗಳೂರು, ಆಗಸ್ಟ್ 28: ದೇಶದ ಅಗ್ರಗಣ್ಯ ಜೀವವಿಮಾ ಕಂಪನಿಗಳಲ್ಲೊಂದಾದ ಬಜಾಜ್ ಅಲಿಯನ್ಸ್ ಲೈಫ್, ಭಾರತದ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್ ಜತೆಗೆ ಕಾರ್ಪೊರೇಟ್ ಏಜೆನ್ಸಿ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಬ್ಯಾಂಕಿನ ಗ್ರಾಹಕರಿಗೆ ಬಜಾಜ್ ಅಲಿಯನ್ಸ್ ಲೈಫ್‍ನ ಜೀವ ವಿಮಾ ಪರಿಹಾರಗಳು ಸುಲಭವಾಗಿ ದೊರಕಲಿವೆ. ಈ ಒಪ್ಪಂದದೊಂದಿಗೆ ಬಜಾಜ್ ಅಲಿಯನ್ಸ್ ಲೈಫ್, ಸಿಂಡಿಕೇಟ್ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡ ಮೊಟ್ಟಮೊದಲ ಬ್ಯಾಂಕೇತರ ಪ್ರವರ್ತಿತ ವಿಮಾ ಕಂಪನಿಯಾಗಿದೆ. ಈ ಪ್ರಮುಖ ಪಾಲುದಾರಿಕೆ (ಕಾರ್ಪೊರೇಟ್ ಏಜೆನ್ಸಿ) ಒಪ್ಪಂದಕ್ಕೆ ಬಜಾಜ್ ಅಲಿಯನ್ಸ್ ಲೈಫ್ ಮತ್ತು ಸಿಂಡಿಕೇಟ್ ಬ್ಯಾಂಕ್ ಇಂದು ಬೆಂಗಳೂರಿನಲ್ಲಿ ಸಹಿ ಮಾಡಿದರು.

ಈ ಪಾಲುದಾರಿಕೆಯ ಮೂಲಕ ಸಿಂಡಿಕೇಟ್ ಬ್ಯಾಂಕ್, ಬಜಾಜ್ ಅಲಿಯನ್ಸ್ ಲೈಫ್‍ನ ಮೌಲ್ಯ ಸಮೃದ್ಧ ಜೀವ ವಿಮಾ ಪರಿಹಾರಗಳನ್ನು ತನ್ನ ಗ್ರಾಹಕರಿಗೆ ಪೂರೈಸಲಿದೆ ಹಾಗೂ ಅವರು ತಮ್ಮ ಜೀವನದ ಗುರಿಗಳನ್ನು ಅತ್ಯಂತ ಯೋಜಿತವಾಗಿ ಸಾಧಿಸಿಕೊಳ್ಳಲು ಸಶಕ್ತರನ್ನಾಗಿಸಲಿದೆ. ಬಜಾಜ್ ಅಲಿಯನ್ಸ್ ಲೈಫ್ ತನ್ನ ಕೈಗೆಟುವಹಾಗೂ ಹೊಸ ಯುಗದ ಜೀವವಿಮಾ ಪರಿಹಾರಗಳನ್ನು ಒದಗಿಸುವ ಮೂಲಕ ಬ್ಯಾಂಕಿನ ಹೊಸ ಹಾಗೂ ಪ್ರಸ್ತುತ ಇರುವ ಗ್ರಾಹಕರಿಗೆ, ಜೀವವಿಮೆಯ ಜೀವಿತಾವಧಿ ಪ್ರಯೋಜನಗಳನ್ನು ದೊರಕಿಸಿಕೊಡಲಿದೆ. ಈ ವಿಮಾ ಉತ್ಪನ್ನಗಳು ಭಾರತದ 29 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 4100ಕ್ಕೂ ಹೆಚ್ಚು ಸಿಂಡಿಕೇಟ್ ಬ್ಯಾಂಕ್ ಶಾಖೆಗಳಲ್ಲಿ ಲಭ್ಯ.

ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಬಜಾಜ್ ಅಲಿಯನ್ಸ್ ಲೈಫ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತರುಣ್ ಚುಘ್, "ದೇಶದ ಅತ್ಯಂತ ಹಳೆಯ ಬ್ಯಾಂಕ್‍ಗಳಲ್ಲೊಂದಾದ ಸಿಂಡಿಕೇಟ್ ಬ್ಯಾಂಕ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಅತೀವ ಸಂತಸವಾಗುತ್ತಿದೆ. ನಮ್ಮ ಹೊಸ ಯುಗದ ಉತ್ಪನ್ನ ಹಾಗೂ ಸೇವೆಗಳು, ಬ್ಯಾಂಕಿನ ಹಲವು ಗ್ರಾಹಕರಿಗೆ ತಮ್ಮ ಜೀವವಿಮಾ ಅಗತ್ಯತೆಗಳನ್ನು ಪರಿಣಾಮಕಾರಿ ವಿಧಾನದಲ್ಲಿ ಪೂರೈಸಿಕೊಳ್ಳಲು ಸಾಧ್ಯವಾಗಿಸಲಿವೆ.

ತಂತ್ರಜ್ಞಾನ ಚಾಲಿತ ಸೇವಾ ಪರಿಹಾರಗಳು

ತಂತ್ರಜ್ಞಾನ ಚಾಲಿತ ಸೇವಾ ಪರಿಹಾರಗಳು

ನಮ್ಮ ತಂತ್ರಜ್ಞಾನ ಚಾಲಿತ ಸೇವಾ ಪರಿಹಾರಗಳು ನಮ್ಮ ಬ್ಯಾಂಕ್ ಉದ್ಯೋಗಿಗಳು ತಮ್ಮ ಗ್ರಾಹಕರ ಅಗತ್ಯತೆಯನ್ನು ವಿಶ್ಲೇಷಿಸಿ, ಸೂಕ್ತವಾದ ಜೀವವಿಮಾ ಉತ್ಪನ್ನಗಳನ್ನು ಒದಗಿಸುವ ಮೂಲಕ ಗ್ರಾಹಕರ ಜೀವನ ಗುರಿಯನ್ನು ಈಡೆರಿಸಿಕೊಳ್ಳಲು ನೆರವಾಗಲಿವೆ. ಈ ಸಹಭಾಗಿತ್ವವು ನಮಗೆ ಅತ್ಯಂತ ಗಮನಾರ್ಹವಾಗಿದ್ದು, ಸಿಂಡಿಕೇಟ್ ಬ್ಯಾಂಕ್ ನಮ್ಮ ಮೌಲ್ಯಭರಿತ ಜೀವವಿಮಾ ಪರಿಹಾರಗಳನ್ನು ದೇಶದ ಹಲವು ಮಂದಿಗೆ ಒದಗಿಸಲು ಮತ್ತು ಅವರು ತಮ್ಮ ಜೀವನದ ಗುರಿಗಳನ್ನು ಸಾಧಿಸಲು ನೆರವಾಗಲಿದೆ. ಬಜಾಜ್ ಅಲಿಯನ್ಸ್ ಲೈಫ್ ಮತ್ತು ನಾನು ಬ್ಯಾಂಕಿನ ಜತೆ ಧೀರ್ಘಾವಧಿಯ ಹಾಗೂ ಅರ್ಥಪೂರ್ಣ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ" ಎಂದು ಬಣ್ಣಿಸಿದರು.

ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮಹಾಪಾತ್ರ, "ನಮ್ಮ ಹಣಕಾಸು ಸೇವಾ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿ ಈ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ನಮ್ಮ ಗ್ರಾಹಕರಿಗೆ ಅಗತ್ಯವಾದ ಹೂಡಿಕೆ ಮತ್ತು ಸುರಕ್ಷೆಯ ಉತ್ಪನ್ನ ಹಾಗೂ ಸಏವೆಗಳನ್ನು ತಮ್ಮ ಜೀವನ ಚಕ್ರದುದ್ದಕ್ಕೂ ಒದಗಿಸಲು ಸಾಧ್ಯವಾಗಲಿದೆ. ಇದು ನಮ್ಮ ತಂತ್ರಜ್ಞಾನ ಚಾಲಿತ ಬ್ಯಾಂಕಿಂಗ್ ಪರಿಹಾರಕ್ಕೆ ಹೆಚ್ಚುವರಿ ಸೇರ್ಪಡೆಯಾಗಿದ್ದು, ಇದು ಒಂದೆಡೆ ಗ್ರಾಹಕರ ಸಂತೋಷಕ್ಕೆ ಕಾರಣವಾದರೆ, ಮತ್ತೊಂದೆಡೆ ನಮ್ಮ ಶುಲ್ಕ ಆದಾಯವನ್ನು ಹೆಚ್ಚಿಸಲು ಕೂಡಾ ನೆರವಾಗಲಿದೆ. ನಮ್ಮ ಪ್ರಮುಖ ಪಾಲುದಾರರಾಗಿ ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯನ್ನು ನಾವು ಸ್ವಾಗತಿಸುತ್ತಿದ್ದೇವೆ ಹಾಗೂ ಧೀರ್ಘಾವಧಿಯ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ವಿವರಿಸಿದರು.

 

ಉತ್ಪನ್ನ ಮತ್ತು ಸೇವೆಗಳು

ಉತ್ಪನ್ನ ಮತ್ತು ಸೇವೆಗಳು

ಈ ಪಾಲುದಾರಿಕೆಯಡಿ ಬಜಾಜ್ ಅಲಿಯನ್ಸ್ ಲೈಫ್, ತನ್ನ ಎಲ್ಲ ಚಿಲ್ಲರೆ ಮತ್ತು ಗುಂಪು ಉತ್ಪನ್ನಗಳನ್ನು ಬ್ಯಾಂಕ್ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಿದೆ. ಇದರಲ್ಲಿ ಉಳಿತಾಯ, ನಿವೃತ್ತಿ, ಹೂಡಿಕೆ, ಸುರಕ್ಷೆ, ಪ್ರಮುಖ ಕಾಯಿಲೆ, ಗುಂಪು ಸಾಲ ಸುರಕ್ಷಾ ವಿಮೆ ಉತ್ಪನ್ನಗಳು ಸೇರಿದ್ದು, ಇವು ಬ್ಯಾಂಕ್ ಗ್ರಾಹಕರು ತ್ಮ ಜೀವನದ ಗುರಿಗಳನ್ನು ಸಾಧಿಸಲು ನೆರವಾಗಲಿವೆ. ಈ ಜೀವನದ ಗುರಿಗಳಲ್ಲಿ ಹಣಕಾಸು ವಿಚಾರದಲ್ಲಿ ತಮ್ಮ ಕುಟುಂಬದ ಭವಿಷ್ಯವನ್ನು ಸುಭದ್ರವಾಗಿಸುವುದು ಅಥವಾ ಧೀರ್ಘಾವಧಿ ಹಣಕಾಸು ಗುರಿಗಳಿಗಾಗಿ ಹೂಡಿಕೆ ಮಾಡುವುದು ಅಥವಾ ತೀವ್ರತರ ಕಾಯಿಲೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಆಗುವ ವೆಚ್ಚವನ್ನು ಚೆನ್ನಾಗಿ ನಿಭಾಯಿಸುವ ಗುರಿಗಳು ಸೇರಿರಬಹುದು.

ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ತಮ್ಮ ಜೀವನದ ಗುರಿಗಳಿಗಾಗಿ, ಹತ್ತಿರದ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಅವರ ಸಂಬಂಧ ವ್ಯವಸ್ಥಾಪಕರಿಗೆ ಕರೆ ಮಾಡುವ ಮೂಲಕ ಇಲ್ಲವೇ ಆನ್‍ಲೈನ್ ವಿಧಾನದ ಮೂಲಕ ಅಥವಾ ಲಾಗ್ ಇನ್ ಮಾಡುವ ಮೂಲಕ ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್‍ನಲ್ಲಿ ಹೂಡಿಕೆ ಮಾಡಬಹುದಾಗಿದೆ.

 

ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್ ಬಗ್ಗೆ

ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್ ಬಗ್ಗೆ

ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಭಾರತದ ಅಗ್ರಗಣ್ಯ ಖಾಸಗಿ ಜೀವವಿಮಾ ಕಂಪನಿಗಳಲ್ಲೊಂದಾಗಿದೆ. ಇದು ಬಜಾಜ್ ಸಮೂಹದ ಹಣಕಾಸು ಸೇವೆಗಳ ವ್ಯವಹಾರವನ್ನು ನಿಭಾಯಿಸುವ ಬಜಾಜ್ ಫಿನ್‍ಸರ್ವ್ ಲಿಮಿಟೆಡ್ ಮತ್ತು ವಿಶ್ವದ ಅಗ್ರಗಣ್ಯ ವಿಮಾ ಒಕ್ಕೂಟವಾಗಿರುವ ಮತ್ತು ವಿಶ್ವದ ಅತಿದೊಡ್ಡ ಆಸ್ತಿ ನಿರ್ವಹಣೆ ಕಂಪನಿಗಳಲ್ಲೊಂದಾದ ಅಲಿಯನ್ಸ್ ಎಸ್ ಇ ನಡುವಿನ ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ.

ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2001ರಲ್ಲಿ ಭಾರತದಲ್ಲಿ ಕಾರ್ಯಾರಂಭ ಮಾಡಿದ್ದು, 2019ರ ಜುಲೈ 31ರವರೆಗೆ ದೇಶಾದ್ಯಂತ 601 ಶಾಖೆಗಳನ್ನು ಹೊಂದಿದೆ. ಕಂಪನಿಯು ಜೀವವಿಮಾ ಪರಿಹಾರಗಳನ್ನು ಪ್ರಬಲ ಉತ್ಪನ್ನ ಶ್ರೇಣಿಯ ಮೂಲಕ ಒದಗಿಸುತ್ತಿದ್ದು, ಇವುಗಳಲ್ಲಿ ಸಾಂಪ್ರದಾಯಿಕ ವಿಮಾ ಉತ್ಪನ್ನಗಳು ಮತ್ತು ಯುಲಿಪ್‍ಗಳು ಸೇರಿವೆ. ಇವು ಗ್ರಾಹಕರು ತಮ್ಮ ಜೀವನ ಗುರಿಗಳನ್ನು ಈಡೇರಿಸಿಕೊಳ್ಳಲು ಸಶಕ್ತಗೊಳಿಸಲಿವೆ. ಕಂಪನಿಯು ಗುಂಪು ವಿಮೆ ಮತ್ತು ಆರೋಗ್ಯ ವಿಮಾ ಯೋಜನೆಗಳನ್ನು ಕೂಡಾ ಒದಗಿಸುತ್ತಿದೆ.

 

ಸಿಂಡಿಕೇಟ್ ಬ್ಯಾಂಕಿನ ಬಗ್ಗೆ

ಸಿಂಡಿಕೇಟ್ ಬ್ಯಾಂಕಿನ ಬಗ್ಗೆ

ಸಿಂಡಿಕೇಟ್ ಬ್ಯಾಂಕ್ ಸಾರ್ವಜನಿಕ ವಲಯದ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ಆಗಿದೆ. ಇದು 1925ರಲ್ಲಿ ಉಡುಪಿಯಲ್ಲಿ ಆರಂಭವಾಗಿದ್ದು, ಟಿಎಂಎ ಪೈ, ಉಪೇಂದ್ರ ಪೈ ಮತ್ತು ವಾಮನ್ ಕುಡ್ವಾ ಹೀಗೆ ಮೂವರ ದೂರದೃಷ್ಟಿಯಿಂದ ಹುಟ್ಟಿಕೊಂಡ ಬ್ಯಾಂಕ್ ಆಗಿದೆ. ಇದರ ಕೇಂದ್ರ ಕಚೇರಿ ಭಾರತದ ವಿಶ್ವವಿದ್ಯಾನಿಲಯ ನಗರವಾದ ಮಣಿಪಾಲದಲ್ಲಿದೆ. ಬ್ಯಾಂಕ್ ವೈವಿಧ್ಯಮಯ ಶ್ರೇಣಿಯ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಗೆ ಒದಗಿಸುತ್ತಿದ್ದು, ಇದರಲ್ಲಿ ಗ್ರಾಹಕ ಬ್ಯಾಂಕಿಂಗ್, ಕಾರ್ಪೊರೇಟ್ ಬ್ಯಾಂಕಿಂಗ್ & ವಿಮೆ, ಅಡಮಾನ ಹಾಗೂ ಕ್ರೆಡಿಟ್ ಕಾರ್ಡ್‍ಗಳು ಸೇರುತ್ತವೆ. ಮೊಟ್ಟಮೊದಲ ಬಾರಿಗೆ ಎಲ್ಲ ಶಾಖೆಗಳಿಗೆ ಕೇಂದ್ರೀಕೃತ ಬ್ಯಾಂಕಿಂಗ್ ಪರಿಹಾರ (ಸಿಬಿಎಸ್) ಅಳವಡಿಸಿಕೊಂಡ ಬ್ಯಾಂಕ್‍ಗಳ ಪೈಕಿ ಇದು ಕೂಡಾ ಒಂದು. ನಿರಂತರವಾಗಿ ತನ್ನ ಐಟಿ ವ್ಯವಸ್ಥೆಯನ್ನು ಪರಿಷ್ಕರಿಸುತ್ತಲೇ ಬಂದಿದೆ. ಇಂದು ಬ್ಯಾಂಕ್ 4163 ಶಾಖೆಗಳನ್ನು ಹೊಂದಿದ್ದು, ಲಂಡನ್‍ನಲ್ಲಿ ಸಾಗರೋತ್ತರ ಶಾಖೆಯನ್ನೂ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+