For Quick Alerts
ALLOW NOTIFICATIONS  
For Daily Alerts

ಶುಭಸುದ್ದಿ! ಮಿನಿಮಮ್ ಬ್ಯಾಲೆನ್ಸ್ ನಿಯಮ ಬದಲಾವಣೆ, ಆರ್ಬಿಐ ಹೊಸ ಸೂತ್ರ

ಬ್ಯಾಂಕುಗಳ ಮಿನಿಮಮ್ ಬ್ಯಾಲೆನ್ಸ್ ನಿಯಮದಿಂದಾಗಿ ಗ್ರಾಹಕರು ರೋಸಿ ಹೋಗಿದ್ದರು. ಬೇರೆ ಬೇರೆ ಬ್ಯಾಂಕುಗಳಲ್ಲಿ ವಿವಿಧ ಪ್ರಮಾಣದ ದಂಡಗಳನ್ನು ವಿಧಿಸಲಾಗುತ್ತಿತ್ತು. ಆದರೆ ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.

|

ಬ್ಯಾಂಕುಗಳ ಮಿನಿಮಮ್ ಬ್ಯಾಲೆನ್ಸ್ ನಿಯಮದಿಂದಾಗಿ ಗ್ರಾಹಕರು ರೋಸಿ ಹೋಗಿದ್ದರು. ಬೇರೆ ಬೇರೆ ಬ್ಯಾಂಕುಗಳಲ್ಲಿ ವಿವಿಧ ಪ್ರಮಾಣದ ದಂಡಗಳನ್ನು ವಿಧಿಸಲಾಗುತ್ತಿತ್ತು. ಆದರೆ ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಉಳಿತಾಯ ಖಾತೆಗಳ ಕನಿಷ್ಟ ಬಾಕಿ ಮೊತ್ತ ಇಡುವ ಮಾರ್ಗಸೂಚಿಗಳನ್ನು ಪರಿಶೀಲಿಸುತ್ತಿದೆ. ಬ್ಯಾಂಕುಗಳು ವಿಧಿಸುವ ದಂಡಗಳ ಬಗ್ಗೆ ಚರ್ಚೆ ನಡೆಸಿದ್ದು, ಮಿನಿಮಂ ಬ್ಯಾಲೆನ್ಸ್ ನಿಯಮದಲ್ಲಿ ಬದಲಾವಣೆ ತರಲು ಸಿದ್ಧತೆ ನಡೆಸಿದೆ.

ದಂಡದ ನಿಯಮ

ದಂಡದ ನಿಯಮ

ಮಿನಿಮಮ್ ಬ್ಯಾಲೆನ್ಸ್ ನಿಯಮ ಮತ್ತು ದಂಡದ ಪ್ರಮಾಣದ ಬ್ಯಾಂಕಿನಿಂದ ಬ್ಯಾಂಕ್ ಗೆ ಬದಲಾಗುತ್ತದೆ. ವಿದೇಶಿ ಮತ್ತು ಖಾಸಗಿ ಬ್ಯಾಂಕುಗಳು ಹೆಚ್ಚು ವಿದಿಸುತ್ತವೆ. ಸಾರ್ವಜನಿಕ ಬ್ಯಾಂಕುಗಳು ಸಲ್ಪ ಕಡಿಮೆ ವಿಧಿಸುತ್ತವೆ. ಹಿಂದೆ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಖಾತೆಗಳಲ್ಲಿ ಇಂತಿಷ್ಟು ಹಣ ಇರಲೇಬೇಕೆಂಬ ನಿಯಮವನ್ನು ಜಾರಿ ಇತ್ತು.

ಗ್ರಾಮೀಣ, ಅರೆ ನಗರ, ನಗರ, ಮೆಟ್ರೋ

ಗ್ರಾಮೀಣ, ಅರೆ ನಗರ, ನಗರ, ಮೆಟ್ರೋ

ಗ್ರಾಮೀಣ, ಅರೆ ನಗರ, ನಗರ ಹಾಗೂ ಮೆಟ್ರೋ ಹೀಗೆ ಬೇರೆ ಬೇರೆ ಭಾಗದ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರಿಗೆ ಮಿನಿಮಮ್ ಬ್ಯಾಲೆನ್ಸ್ ವಿವಿಧ ರೀತಿಯಲ್ಲಿತ್ತು.
ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿರುವ ಎಸ್ಬಿಐ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಕನಿಷ್ಟ ಬಾಕಿ ರೂ. 3,000 ಹೊಂದಿರಬೇಕಾಗುತ್ತದೆ. ಅರೆ ನಗರ ಮತ್ತು ಗ್ರಾಮೀಣ ಶಾಖೆಗಳಲ್ಲಿ ಎಸ್‌ಬಿಐ ಖಾತೆ ಹೊಂದಿರುವ ಗ್ರಾಹಕರು ಕನಿಷ್ಠ ಬಾಕಿ ರೂ. 2,000 ಮತ್ತು ರೂ. 1,000, ಕ್ರಮವಾಗಿ ಹೊಂದಿರಬೇಕಾಗಿತ್ತು.

10 ಸಾವಿರ ಕೋಟಿ ದಂಡ

10 ಸಾವಿರ ಕೋಟಿ ದಂಡ

ದಂಡದ ರೂಪದಲ್ಲಿ ಬ್ಯಾಂಕುಗಳು ಗ್ರಾಹಕರಿಂದ ರಕ್ತ ಹೀರಿವೆ. ಕಳೆದ ಮೂರು ವರ್ಷಗಳಲ್ಲಿ ಕನಿಷ್ಟ ಬಾಕಿ ಇಟ್ಟುಕೊಳ್ಳದ ಗ್ರಾಹಕರಿಂದ ಬ್ಯಾಂಕುಗಳು ಬರೋಬ್ಬರಿ ರೂ. 10 ಸಾವಿರ ಕೋಟಿ ದಂಡದ ರೂಪದಲ್ಲಿ ಸಂಗ್ರಹಸಿವೆ. ಈ ಪೈಕಿ ಸಾರ್ವಜನಿಕ ಸ್ವಾಮ್ಯದ 18 ಬ್ಯಾಂಕುಗಳು ರೂ. 6,155 ಕೋಟಿ ದಂಡ ವಸೂಲಿ ಮಾಡಿದ್ದರೆ, ಖಾಸಗಿ ಬ್ಯಾಂಕುಗಳು ರೂ. 3,567 ಕೋಟಿ ದಂಡ ವಸೂಲಿ ಮಾಡಿವೆ. ದಂಡ ಸಂಗ್ರಹಿಸಿದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಪೈಕಿ ಎಸ್ಬಿಐ ನಂಬರ್ ಒನ್ ಸ್ಥಾನದಲ್ಲಿದೆ.

ಮಿನಿಮಮ್ ನಿಯಮ ಇಲ್ಲ

ಮಿನಿಮಮ್ ನಿಯಮ ಇಲ್ಲ

ಪ್ರಧಾನಮಂತ್ರಿ ಜನ ಧನ ಯೋಜನೆ ಹಾಗೂ ಬಿಎಸ್ಬಿಡಿಎ ಯೋಜನೆಯ ಫಲಾನುಭವಿಗಳಿಗೆ ಕನಿಷ್ಟ ಶುಲ್ಕದ ನಿಯಮವಿರಲಿಲ್ಲ. ಇತರೆ ಉಳಿತಾಯ ಖಾತೆದಾರಿಗೆ ಕನಿಷ್ಟ ಬಾಕಿ ನಿಯಮವಿದ್ದ ಕಾರಣ ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದೀಗ ಇದರ ಬದಲಾವಣೆಗೆ ಆರ್ಬಿಐ ಮುಂದಾಗಿದೆ ಎನ್ನಲಾಗಿದೆ.

ಡಿಜಿಟಲ್, ಕೆವೈಸಿ

ಡಿಜಿಟಲ್, ಕೆವೈಸಿ

ಬ್ಯಾಂಕ್ ಗ್ರಾಹಕರಿಗೆ ಡಿಜಿಟಲ್ ಆನ್‌ಬೋರ್ಡಿಂಗ್‌ಗೆ ಸಹ ಅವಕಾಶ ನೀಡುತ್ತಿದ್ದು, ವೀಡಿಯೊ ಆಧಾರಿತ ನೋ ಯುವರ್ ಕಸ್ಟಮರ್ (ಕೆವೈಸಿ) ಅನ್ನು ಸಕ್ರಿಯಗೊಳಿಸುತ್ತದೆ ಎಂದು ಆರ್ಬಿಐ ಹೇಳಿದೆ. ಕಳೆದ ವರ್ಷ ಬ್ಯಾಂಕುಗಳು ಆಧಾರ್ ಕಾರ್ಡ್ ಬಳಕೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ಹೊಸ ಗ್ರಾಹಕರಿಗೆ ಡಿಜಿಟಲ್ ಖಾತೆ ತೆರೆಯುವುದು ಯಶಸ್ವಿಯಾಗಿದೆ.

ಮಿನಿಮಮ್ ಬ್ಯಾಲೆನ್ಸ್ ನಿಯಮ: ನಿಮ್ಮ ಖಾತೆಯಲ್ಲಿ ಕನಿಷ್ಟ ಬಾಕಿ ಮೊತ್ತ ಎಷ್ಟಿರಬೇಕು?ಮಿನಿಮಮ್ ಬ್ಯಾಲೆನ್ಸ್ ನಿಯಮ: ನಿಮ್ಮ ಖಾತೆಯಲ್ಲಿ ಕನಿಷ್ಟ ಬಾಕಿ ಮೊತ್ತ ಎಷ್ಟಿರಬೇಕು?

 

 

Read more about: rbi banking money savings
English summary

RBI to review minimum balance requirements for savings account

the minimum balance requirement and penalties for non-maintenance vary from bank to bank.
Story first published: Friday, August 30, 2019, 8:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X