ಗುಡ್ ನ್ಯೂಸ್! ಆರ್ಬಿಐ ರೆಪೊ ದರ ಕಡಿತ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣಕಾಸು ನೀತಿ ಸಮಿತಿಯು ತನ್ನ ನಾಲ್ಕನೇ ದ್ವೈಮಾಸಿಕ ನೀತಿ ಪರಿಶೀಲನೆಯಲ್ಲಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣಕಾಸು ನೀತಿ ಸಮಿತಿಯು ತನ್ನ ನಾಲ್ಕನೇ ದ್ವೈಮಾಸಿಕ ನೀತಿ ಪರಿಶೀಲನೆಯಲ್ಲಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ.

ಗುಡ್ ನ್ಯೂಸ್! ಆರ್ಬಿಐ ರೆಪೊ ದರ ಕಡಿತ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂದು ರೆಪೊ ದರ ಅಥವಾ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ. ರೆಪೊ ದರ ಎಂದರೆ ದೇಶದ ಕೇಂದ್ರೀಯ (ಆರ್ಬಿಐ) ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ಸಾಲವಾಗಿ ನೀಡುತ್ತದೆ.
ದೇಶದ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಎಂಪಿಸಿಯ ಎಲ್ಲಾ ಸದಸ್ಯರು ರೆಪೊ ದರವನ್ನು ಕಡಿಮೆ ಮಾಡುವ ಪರವಾಗಿ ಮತ ಚಲಾಯಿಸಿದರು.

ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವರ್ಷ ಐದನೇ ಬಾರಿಗೆ ತನ್ನ ರೆಪೊ ದರ ಕಡಿತಗೊಳಿಸಿದೆ. ಆರ್‌ಬಿಐ ಇಂದು ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 5.15% ಕ್ಕೆ ಇಳಿಸಿದೆ. ಆರ್‌ಬಿಐ ತನ್ನ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಹಿಂದಿನ ಶೇಕಡಾ 6.9ರಿಂದ ಶೇಕಡಾ 6.1ಕ್ಕೆ ಕಡಿತಗೊಳಿಸಿದೆ.
ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಗೆ ಕಡಿತಗಳಿಸಲು ದೇಬಬ್ರಾತಾ ಪಾತ್ರ, ಶ್ರೀ ಬಿಭು ಪ್ರಸಾದ್ ಕನುಂಗೊ ಮತ್ತು ಶ್ರೀ ಶಕ್ತಿಕಾಂತ ದಾಸ್ ಮತ ಚಲಾಯಿಸಿದರು. ಡಾ. ರವೀಂದ್ರ ಧೋಲಾಕಿಯಾ ಅವರು ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆ ಮಾಡಲು ಮತ ಚಲಾಯಿಸಿದರು.
ರೆಪೊ ದರ ಕಡಿತದಿಂದಾಗಿ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+