For Quick Alerts
ALLOW NOTIFICATIONS  
For Daily Alerts

ರೂ. 2000 ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ಸ್ಥಗಿತಗೊಳಿಸಿದೆ ಎಂದು ಆರ್ಟಿಐ ಬಹಿರಂಗಪಡಿಸಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ಸ್ಥಗಿತಗೊಳಿಸಿದೆ ಎಂದು ಆರ್ಟಿಐ ಬಹಿರಂಗಪಡಿಸಿದೆ.

ರೂ. 2000 ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ

ನ್ಯೂ ಇಂಡಿಯನ್ ಎಕ್ಸಪ್ರೆಸ್ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಿಲ್ಲ.
ಆರ್‌ಬಿಐನ ಆರ್‌ಟಿಐ ಉತ್ತರದ ಪ್ರಕಾರ, 2016-17ರ ಹಣಕಾಸು ವರ್ಷದಲ್ಲಿ ರೂ. 2,000 ಮುಖಬೆಲೆಯ 3,542.991 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ. ಆದಾಗ್ಯೂ, 2017-18ನೇ ಸಾಲಿನಲ್ಲಿ ಮುದ್ರಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಕೇವಲ 111.507 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ. 2018-19ನೇ ಸಾಲಿನಲ್ಲಿ 46.690 ಮಿಲಿಯನ್ ನೋಟುಗಳಿಗೆ ಇಳಿಸಲಾಯಿತು.
ಆರ್ಟಿಐ ಅರ್ಜಿಗೆ ಉತ್ತರ ನೀಡಲಾಗಿದ್ದು, ಸದ್ಯ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಆದರೆ ಹಂತಹಂತವಾಗಿ ವಹಿವಾಟು ಸ್ಥಗಿತಗೊಳಿಸಲಾಗುವುದು ಎಂದಿದೆ. ಇತ್ತೀಚಿನ ದಿನಗಳಲ್ಲಿ ಎಟಿಎಂಗಳಲ್ಲಿ ಕೂಡ ನೋಟಗಳು ಕಾಣಸಿಗುತ್ತಿಲ್ಲ.
2016 -17 ನೇ ಹಣಕಾಸು ವರ್ಷದಲ್ಲಿ ರೂ. 2000 ಮುಖಬೆಲೆಯ ನೋಟು ಮುದ್ರಣ ಆರಂಭವಾಗಿದ್ದು, ಪ್ರತಿವರ್ಷ ಮುದ್ರಣದ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. ಈ ನೋಟು ಬ್ಲಾಕ್ ಮನಿ, ಕಳ್ಳಸಾಗಣೆಗೆ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ ಮುದ್ರಣ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

Read more about: rbi money finance news
English summary

RBI has stopped printing Rs 2,000 notes: RTI

The Reserve Bank of India (RBI) has stopped printing Rs 2,000 denomination currency notes, revealed an RTI response.
Story first published: Tuesday, October 15, 2019, 11:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X